Advertisement

ಬ್ಯಾಡಗಿಯಲ್ಲಿ ಶೀಘ್ರ ಕಬಡ್ಡಿ ವಸತಿ ಕ್ರೀಡಾಶಾಲೆ

06:49 PM Mar 06, 2021 | Team Udayavani |

ಬ್ಯಾಡಗಿ: ಪಟ್ಟಣದಲ್ಲಿ ಶೀಘ್ರದಲ್ಲೇ ಕಬಡ್ಡಿ ವಸತಿ ಕ್ರೀಡಾಶಾಲೆ ಆರಂಭಿಸಲಾಗುವುದು ಎಂದುಹಿರಿಯ ಕಬಡ್ಡಿ ಕ್ರೀಡಾಪಟು ಹಾಗೂ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್‌ ಖಜಾಂಚಿ ಗಂಗಣ್ಣ ಕಬಡ್ಡಿ ಹೇಳಿದರು.

Advertisement

ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಜ್ಯೂನಿಯರ್‌ ಬಾಲಕ-ಬಾಲಕಿಯರ ಕಬಡ್ಡಿ ತಂಡದ ಆಯ್ಕೆ ಹಿನ್ನೆಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಪಟುಗಳಿಗೆ ಆಯ್ಕೆ ಟ್ರಯಲ್ಸ್‌ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿದರು. ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿಅಸೋಸಿಯೇಶನ್‌ ಸಂಸ್ಥೆಯಡಿ ಸುಮಾರು140ಕ್ಕೂ ಹೆಚ್ಚು ಕಬಡ್ಡಿ ಕ್ರೀಡಾಪಟುಗಳಿಗೆಉದ್ಯೋಗ ದೊರೆತಿದೆ. ಅಲ್ಲದೇ, 280 ಕ್ಕೂ ಅಧಿಕ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.

ಗ್ರಾಮೀಣ ಕ್ರೀಡೆಗಳ ಉತ್ತೇಜನ ಅವಶ್ಯ:

ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಯ ಉತ್ತೇಜನಕ್ಕೆ ಸರಕಾರಗಳೂ ಹೆಚ್ಚಿನ ಒತ್ತು ನೀಡಬೇಕಿದೆ. ಜಿಲ್ಲೆಯಲ್ಲಿ ಕಬಡ್ಡಿ ಕ್ರೀಡಾಪಟುಗಳಿಗಾಗಿ,ಸಂಸ್ಥೆ ವಯಿತಿಂದ ಹತ್ತು ಹಲವು ಕ್ರೀಡಾಚಟುವಟಿಕೆಗಳನ್ನ ಹಮ್ಮಿಕೊಳ್ಳಲಾಗುತ್ತಿದೆ. ಇದರ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.

5 ಲಕ್ಷ ರೂ. ಕ್ರೀಡಾ ನಿಧಿ : ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ತಾಲೂಕಿನಪ್ರತಿಭಾವಂತ ಕ್ರೀಡಾಪಟುಗಳು ಹಾಗೂ ಕ್ರೀಡಾ ಚಟುವಟಿಕೆಗಳಿಗಾಗಿ ಪುರಸಭೆ ವತಿಯಿಂದ 5 ಲಕ್ಷ ರೂ. ಕ್ರೀಡಾ ನಿಧಿ  ಮೀಸಲಿಡಲಾಗಿದೆ ಎಂದರು.ವದಂತಿಗೆ ಕಿವಿಗೊಡದಿರಿ: ಪ್ರಾಸ್ತಾವಿಕವಾಗಿಮಾತನಾಡಿದ ಕಾರ್ಯದರ್ಶಿ ಶಿವಾನಂದಮಲ್ಲನಗೌಡರ, ಸಂಸ್ಥೆಯ ವಿರುದ್ಧ ಕೆಲ ಪಟ್ಟ ಭದ್ರಹಿತಾಸಕ್ತಿಗಳು ಸುಳ್ಳು ವದಂತಿ ಹಾಗೂ ಇಲ್ಲಸಲ್ಲದಆರೋಪ ಮಾಡಿತ್ತಿದ್ದಾರೆ. ಜಿಲ್ಲೆಯ ಯಾವುದೇಕ್ರೀಡಾಪಟುಗಳು ಇದಕ್ಕೆ ಕಿವಿಗೊಡದಂತೆ ಮನವಿ ಮಾಡಿದರು.

Advertisement

ಟ್ರಯಲ್ಸ್‌ನಲ್ಲಿ ಸಿ.ಜಿ.ಚಕ್ರಸಾಲಿ, ಬಿ.ಎಚ್‌. ಎನ್‌.ರಾವಳ, ಶಿವಣ್ಣ ಜಂಗರೆಡ್ಡೆರ, ಮಾರುತಿ ಚೌಹಾಣ, ಜಿನ್ನಾ ಹಲಗೇರಿ, ಬಸವ ರಾಜಪ್ಪ,ಬಿ.ಎರ್‌.ಹುಲ್ಮನಿ, ಎಂ.ಆರ್‌.ಕೋಡಿಗಳ್ಳಿ,ಎ.ಟಿ.ಪೀಠದ, ಬಿ.ಸಿ.ದಾನಗಲ್‌, ಬಸವರಾಜಹೊಸಪೇಟಿ, ಎನ್‌.ವೀರೇಶ, ಎಸ್‌. ಎಂ.ಸೋಮನಹಳ್ಳಿ, ಎಂ.ಕೆ ಹೊಸಮನಿ,ವಿನಾಯಕ ಗಡಾದ, ಮಂಜುಳಾ ಭಜಂತ್ರಿ, ಎಪಿಎಂಸಿ ನಿರ್ದೇಶಕ ವಿಜಯಕುಮಾರ ಮಾಳಗಿ,ಪುರಸಭೆ ಸದಸ್ಯರಾದ ಈರಣ್ಣ ಬಣಕಾರ, ಹನುಮಂತ ಮ್ಯಾಗೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next