Advertisement

ಕಬಡ್ಡಿಗೆ ಪ್ರೋತ್ಸಾಹ ಅಗತ್ಯ: ರಾಜೇಶ್‌ ನಾೖಕ್‌

11:03 AM Dec 22, 2022 | Team Udayavani |

ಪುಂಜಾಲಕಟ್ಟೆ: ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಭಾರತದ ದೇಸೀ ಗ್ರಾಮೀಣ ಕ್ರೀಡೆ ಕಬಡ್ಡಿ ಇಂದು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಕಬಡ್ಡಿಗೆ ಪ್ರೋತ್ಸಾಹ ನೀಡುವ ಕಾರ್ಯ ಅಭಿನಂದನೀಯ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಹೇಳಿದರು.

Advertisement

ವಾಮದಪದವು ಯೂತ್‌ ಫ್ರೆಂಡ್ಸ್‌ ಇದರ ಆಶ್ರಯದಲ್ಲಿ ರಾಜ್ಯ ಮತ್ತು ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಸಹಕಾರದೊಂದಿಗೆ ರಾಷ್ಟ್ರದ ವಿವಿಧ ಭಾಗಗಳ ಆಯ್ದ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಆಟಗಾರರ ಭಾಗವಹಿಸುವಿಕೆಯೊಂದಿಗೆ ವಾಮದಪದವು ಪದವಿ ಕಾಲೇಜಿನ ಮೈದಾನದಲ್ಲಿ ನಡೆದ ಎ ಗ್ರೇಡ್‌ ಕಬಡ್ಡಿ ಪಂದ್ಯಾಟದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀಲಿ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಸ್ರಣ್ಣ ಗಂಗಾಧರ ಕಕೃಣ್ಣಾಯ ಪೆಜಕ್ಕಳ ಪಂದ್ಯಾಟವನ್ನು ಉದ್ಘಾಟಿಸಿದರು. ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾವಿನಕಟ್ಟೆ ಜುಮಾ ಮಸೀದಿ ಧರ್ಮಗುರು ಅಬ್ದುಲ್‌ ಹಮೀದ್‌ ಹಂಝಾದಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಯತೀಶ್‌ ಶೆಟ್ಟಿ ವಿಜಯನಗರ ಉಪಸ್ಥಿತರಿದ್ದರು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ರಾಜ್ಯ ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ಬೇಬಿ ಕುಂದರ್‌, ಚಲನಚಿತ್ರ ನಿರ್ಮಾಪಕ ಅರುಣ್‌ ರೈ ತೋಡಾರ್‌, ಜಿ.ಪಂ. ಮಾಜಿ ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್‌, ಚಂದ್ರಪ್ರಕಾಶ್‌ ಶೆಟ್ಟಿ, ಪ್ರಮುಖರಾದ ಕೆ. ಮಾಯಿಲಪ್ಪ ಸಾಲ್ಯಾನ್‌, ಅಮ್ಮು ರೈ ಹರ್ಕಾಡಿ, ಉದಯ ಕುಮಾರ್‌ ಶೆಟ್ಟಿ, ನವೀನಚಂದ್ರ ಶೆಟ್ಟಿ, ಸಿ. ಶ್ರೀಧರ ಪೈ, ಅನಂತ ಪೈ, ಸುದರ್ಶನ ಬಜ, ಹರೀಂದ್ರ ಪೈ, ಕಮಲ್‌ ಶೆಟ್ಟಿ, ಲಕ್ಷ್ಮೀನಾರಾಯಣ ಉಡುಪ ಭಾಗವಹಿಸಿದ್ದರು.

ವಾಮದಪದವು ಕಾಲೇಜು ಪ್ರಾಂಶುಪಾಲ ಪ್ರೊ| ಹರಿಪ್ರಸಾದ್‌ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುನಿಲ್‌ ಸಿಕ್ವೇರ, ಮಾಜಿ ಸೈನಿಕ ಸುದೀಪ್‌ ಶೆಟ್ಟಿ ಕಂಚಾರು, ದೈಹಿಕ ಶಿಕ್ಷಕ ಆಸಿದ್‌ ಪಡಂಗಡಿ, ಕರಾಟೆಪಟು ಸಹನಾ ಶೆಟ್ಟಿ, ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅನನ್ಯಾ ಮತ್ತು ಪ್ರಾಪ್ತಿ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕಬಡ್ಡಿ ಪಂದ್ಯಾಟಕ್ಕೆ ಮುನ್ನ ವಾಮದಪದವು ಜಂಕ್ಷನ್‌ನಿಂದ ಮೈದಾನಕ್ಕೆ ಕ್ರೀಡಾ ಜ್ಯೋತಿ ಮೆರವಣಿಗೆ ನಡೆಯಿತು. ಸಂಘಟಕ ನಿತಿನ್‌ ಶೆಟ್ಟಿ ಮೂರ್ಜೆ, ಸಂಚಾಲಕ ಹರಿಪ್ರಸಾದ್‌ ಶೆಟ್ಟಿ, ಪ್ರಮುಖರಾದ ಶುಭಕರ ಶೆಟ್ಟಿ ಮಠ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next