Advertisement
ಇದು ಭಾರತಕ್ಕೆ ಒಲಿದ ಸತತ 4ನೇ ಗೆಲುವು. 8 ಅಂಕದೊಂದಿಗೆ ಅಗ್ರಸ್ಥಾನದ ಗೌರವ ಪಡೆದಿದೆ. ಕೊರಿಯಾ, ಚೈನೀಸ್ ತೈಪೆ ಮತ್ತು ಜಪಾನ್ ತಂಡಗಳನ್ನು ಭಾರತ ದೊಡ್ಡ ಅಂತರದಿಂದ ಮಗುಚಿತ್ತು.
Related Articles
ಭಾರತ-ಇರಾನ್ ಮುಖಾ ಮುಖೀ ಕೂಟದಲ್ಲೇ ತೀವ್ರ ಪೈಪೋಟಿ ಕಂಡ ಪಂದ್ಯವೆನಿಸಿತು. ತ್ರಿವಳಿ ರೈಡರ್‌ಗಳಾದ ಪವನ್ ಸೆಹ್ರಾವತ್, ಅರ್ಜುನ್ ದೇಶ್ವಾಲ್ ಮತ್ತು ಅಸ್ಲಾಮ್ ಇನಾಮಾªರ್ ಉತ್ತಮ ಪ್ರದರ್ಶನ ನೀಡಿದರು. ವಿರಾಮದ ವೇಳೆ ಭಾರತ 10 ಅಂಕಗಳ ಮುನ್ನಡೆ ಸಾಧಿಸಿದ ಹುರುಪಿನಲ್ಲಿತ್ತು. ಸೆಹ್ರಾವತ್ 16 ಅಂಕ ತಂದಿತ್ತರು.
Advertisement
ಇರಾನ್‌ನ ಪ್ರಮುಖ ರೈಡರ್‌ಗಳಾದ ಅಲಿರೇಝ, ಹೈದರ್ ಅಲಿ, ಇಕ್ರಾಮಿ ಉತ್ತಮ ಹೋರಾಟ ಸಂಘಟಿಸಿದರು. ಆದರೆ ಸ್ಟಾರ್ ಲೆಫ್ಟ್ ಕಾರ್ನರ್ ಆಟಗಾರ ಮೊಹಮ್ಮದ್ ರೇಝ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಪಂದ್ಯದ ಮುಕ್ತಾಯಕ್ಕೆ ಇನ್ನೇನು 2 ನಿಮಿಷ ಬಾಕಿ ಇರುವಾಗ ಇರಾನ್ ಪ್ರಬಲ ಹೋರಾಟ ಸಂಘಟಿಸಿತು. ಅಂಕಗಳ ಅಂತರ ಎರಡಕ್ಕೆ ಬಂದು ನಿಂತಿತ್ತು. ಆದರೆ ಅದೃಷ್ಟ ಭಾರತದ ಕಡೆಗಿತ್ತು.