ಮುಂಬಯಿ: ಮಹಾರಾಷ್ಟ್ರ ಸರಕಾರ ಹಾಗೂ ಮಹಾರಾಷ್ಟ್ರ ರಾಜ್ಯ ಕಬಡ್ಡಿ ಅಸೋಸಿಯೇಶನ್ ವತಿಯಿಂದ ಶಿವಶಾಹಿ ಛಶಕ್ ಕಬಡ್ಡಿ ಪಂದ್ಯಾಟವು ಇತ್ತೀಚೆಗೆ ಕರ್ಜತ್‌ನ ಅಹ್ಮದಾಬಾದ್ ಜಿಲ್ಲೆಯಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಕನ್ನಡಿಗ, ಶಿವಛಪತ್ರತಿ ಪ್ರಶಸ್ತಿ ಪುರಸ್ಕೃತ ಗೌರವ್ ಶೆಟ್ಟಿ ನಾಯಕತ್ವದ ಮುಂಬಯಿ ತಂಡವು ವಿನ್ನರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಶಸ್ತಿಯನ್ನು ಪ್ರದಾನಿಸಿ ಶುಭಹಾರೈಸಿದರು.
ಗೌರವ ಶೆಟ್ಟಿ ಅವರು ಪ್ರಶಸ್ತಿಯೊಂದಿಗೆ 1.25 ಲಕ್ಷ ರೂ. ಗಳ ಚೆಕ್‌ನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಂದ ಸ್ವೀಕರಿಸಿದರು. ಸಮಾರಂಭದಲ್ಲಿ ಉಸ್ತುವಾರಿ ಸಚಿವ ರಾಮ್ ಪಾಟೀಲ್ ಹಾಗೂ ಮಹಾರಾಷ್ಟÅ ರಾಜ್ಯ ಕಬಡ್ಡಿ ಅಸೋಸಿಯೇಶನ್‌ನ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
ಗೌರವ್ ಶೆಟ್ಟಿ ಅವರ ನೇತೃತ್ವದ ಮುಂಬಯಿ ತಂಡವು ಥಾಣೆ ತಂಡವನ್ನು ಫೈನಲ್‌ನಲ್ಲಿ 30-14 ಅಂತರಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮುಂಬಯಿ ತಂಡದ ಪರವಾಗಿ ಮಯೂರ್ ಶಿವತಾರ್ಕರ್, ಸಂಕೇತ್ ಸಾವಂತ್ ಹಾಗೂ ಓಮಿ ಜಾಧವ್ ಅವರು ಉತ್ತಮವಾಗಿ ಆಟವಾಡಿ ತಂಡಕ್ಕೆ ಜಯ ಒದಗಿಸಿದರು. ಥಾಣೆ ತಂಡದ ಪರವಾಗಿ ಉಮೇಶ್ ಮತ್ತು ಅಕ್ಷಯ್ ಅವರು ಉತ್ತಮವಾಗಿ ಆಟವಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಪ್ರತಿಭಾನ್ವಿತ ಆಟಗಾರ, ತುಳು-ಕನ್ನಡಿಗ ಗೌರವ್ ಶೆಟ್ಟಿ ಅವರು ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್‌ನ ಪದಾಧಿಕಾರಿ ಜಯ ಎ. ಶೆಟ್ಟಿ ಅವರ ಪುತ್ರರಾಗಿದ್ದು, ಈಗಾಗಲೇ ಮುಂಬಯಿ ತಂಡದ ಮುಖಾಂತರ ವಿವಿಧ ಪಂದ್ಯಾಟಗಳಲ್ಲಿ ಗಮನೀಯ ಸಾಧನೆ ಸಲ್ಲಿಸಿ ತಂಡಕ್ಕೆ ಜಯ ಒದಗಿಸಿಕೊಟ್ಟಿದ್ದಾರೆ.