Advertisement

ಅಪ್ರಾಪ್ತ ವಯಸ್ಕ ಕಬಡ್ಡಿ ಆಟಗಾರ್ತಿಗೆ ಕಿರುಕುಳ;ಕೋಚ್‌ ಆತ್ಮಹತ್ಯೆ

10:54 AM Oct 16, 2018 | |

ಹರಿಹರ : 13 ವರ್ಷ ಪ್ರಾಯದ ಕಬಡ್ಡಿ ಆಟಗಾರ್ತಿ ಬಟ್ಟೆ ಬದಲಾಯಿಸುತ್ತಿದ್ದುದನ್ನು ಕದ್ದು ನೋಡಿದ ಆರೋಪ ಎದುರಿಸುತ್ತಿದ್ದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

Advertisement

ರುದ್ರಪ್ಪ  ವಿ ಹೊಸಮನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜ್ಞಾನ ಭಾರತಿ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. 

ಮನೆಯಲ್ಲಿ ದೆಹಲಿಗೆ ತೆರಳುವುದಾಗಿ ಮೊಬೈಲ್‌ ಬಿಟ್ಟು ಹೋಗಿದ್ದ  ಹೊಸಮನಿ ಲಾಡ್ಜ್ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಲೈಂಗಿಕ ಕಿರುಕಳ ಆರೋಪ ಕೇಳಿ ಬಂದ ತಕ್ಷಣ  ಎಸ್‌ಎಐ ಹೊಸಮನಿ ಅವರನ್ನು  ಅಮಾನತು ಮಾಡಿತ್ತು. 

ಡೆತ್‌ನೋಟ್‌ ಬರೆದಿಟ್ಟಿರುವುದಾಗಿ ತಿಳಿದು ಬಂದಿದ್ದು,   ಪತ್ನಿ ಮಗನ ಬಳಿ ಕ್ಷಮೆಯಾಚನೆ ಮಾಡಿದ್ದಾರೆ ಎನ್ನಲಾಗಿದೆ. 2 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

Advertisement

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.