Advertisement

ತೊಕ್ಕೊಟ್ಟಿಗೆ ಸುಸಜ್ಜಿತ ಕಬಡ್ಡಿ ಕೋರ್ಟ್‌ಗೆ ಮನವಿ: ಕೆ.ಟಿ. ಸುವರ್ಣ

11:15 AM Nov 30, 2017 | Team Udayavani |

ಉಳ್ಳಾಲ: ತೊಕ್ಕೊಟ್ಟು ಭಾಗದಲ್ಲಿ ಸುಸಜ್ಜಿತ ಕಬಡ್ಡಿ ಕೋರ್ಟಿನ ಅಗತ್ಯವಿದ್ದು, ಅದಕ್ಕಾಗಿ ನೂತನ ಸಮಿತಿ ವತಿಯಿಂದ ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು ಎಂದು ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಮಂಗಳೂರು ಹಾಗೂ ಮಂಗಳೂರು ಗ್ರಾಮಾಂತರ ಸಮಿತಿ ಉಸ್ತುವಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಸುವರ್ಣ ತಿಳಿಸಿದರು. ಅವರು ಮಂಗಳೂರು ಗ್ರಾಮಾಂತರ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಉಳ್ಳಾಲ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಖಾಸಗಿ ಸಭಾಭವನದಲ್ಲಿ ಸೋಮವಾರ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ತೊಕ್ಕೊಟ್ಟು ಮತ್ತು ಉಳ್ಳಾಲ ಭಾಗದ ಕಬಡ್ಡಿ ತಂಡಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹೆಸರು ತಂದವರಿದ್ದಾರೆ. ತೊಕ್ಕೊಟ್ಟು ಭಾಗದ ಕಬಡ್ಡಿ ತಂಡಗಳು ಮುಂಚೂಣಿಯಲ್ಲಿವೆ. ಅದನ್ನು ಉಳಿಸಿ ಮತ್ತೆ ಯುವಪೀಳಿಗೆಯನ್ನು ಆಟದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನೂತನ ಸಮಿತಿಯನ್ನು ರಚಿಸಲಾಗಿದೆ. ಈ ಭಾಗದಲ್ಲಿ ಸರಕಾರದಿಂದ ಕಬಡ್ಡಿ ಮ್ಯಾಟ್‌ ದೊರಕಿಸಿಕೊಡಲು ಸಂಬಂಧಿಸಿದ ಇಲಾಖೆಗೆ ಹಾಗೂ ಸಚಿವರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಕಬಡ್ಡಿಗಾಗಿ ಜಾಗವನ್ನು ಗುರುತಿಸಿ ಸುಸಜ್ಜಿತ ಕೋರ್ಟಿನ ರಚನೆಯಾಗಬೇಕಿದ್ದು, ಅದಕ್ಕಾಗಿ ಸಮಿತಿ ಶ್ರಮವಹಿಸಲಿದೆ ಎಂದ ಅವರು, ಮಂಗಳೂರು ಗ್ರಾಮಾಂತರ ಕಬಡ್ಡಿ ಅಸೋಸಿಯೇಷನ್‌ ಜಿಲ್ಲೆಗೆ ಮಾದರಿಯಾಗಿ ಕಾರ್ಯಾಚರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ಗ್ರಾಮಾಂತರ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಉಳ್ಳಾಲ ಇದರ ನೂತನ ಅಧ್ಯಕ್ಷರಾಗಿ ಸುರೇಶ್‌ ಭಟ್ನಗರ ಇವರನ್ನು ಆಯ್ಕೆ ಮಾಡಲಾಯಿತು. ಉದ್ಯಮಿ ಎ.ಜೆ. ಶೇಖರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಕಬಡ್ಡಿ ಆಟಗಾರ ಅಮರನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ರತನ್‌ ಕುಮಾರ್‌ ಶೆಟ್ಟಿ, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್‌ ಕುಂಞಿಮೋನು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್‌ ಪೂಜಾರಿ, ಬಿಜೆಪಿ ಮುಖಂಡರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್‌ ಉಚ್ಚಿಲ್‌, ರೈಲ್ವೇ ಸಲಹಾ ಮಂಡಳಿ ಸದಸ್ಯ ಚಂದ್ರಹಾಸ್‌ ಅಡ್ಯಂತಾಯ, ಉದ್ಯಮಿ ಹರೀಶ್‌ ಕುಮಾರ್‌ ಕುತ್ತಾರ್‌, ಚಂದ್ರಹಾಸ್‌ ಪಂಡಿತ್‌ಹೌಸ್‌ ಮುಖ್ಯ ಅತಿಥಿಗಳಾಗಿದ್ದರು. ಪ್ರವೀಣ್‌ ಎಸ್‌. ಕುಂಪಲ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಉಳ್ಳಾಲದಲ್ಲಿ ಮೊದಲ ಬಾರಿಗೆ
ಈ ಬಾರಿಯ ಕಬಡ್ಡಿ ಜಿಲ್ಲಾ ಚಾಂಪಿಯನ್ಸ್‌ ಟ್ರೋಫಿ  ಉಳ್ಳಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಪುರುಷ ಮತ್ತು ಮಹಿಳೆಯರ ತಂಡಗಳಿಗೆ ನಡೆಯುವ ಪಂದ್ಯಾಟ ಉಳ್ಳಾಲ ಭಾಗದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
ಪುರುಷೋತ್ತಮ ಪೂಜಾರಿ ,
  ಪ್ರಧಾನ ಕಾರ್ಯದರ್ಶಿ, ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್ 

Advertisement
Advertisement

Udayavani is now on Telegram. Click here to join our channel and stay updated with the latest news.

Next