Advertisement

Kaatera: ಇಂದು ಅಭಿಮಾನಿಗಳ ಜೊತೆ ದರ್ಶನ್‌ ‘ಕಾಟೇರ’ ಸಂಭ್ರಮಾಚರಣೆ

12:59 PM Jan 01, 2024 | Team Udayavani |

“ಕಾಟೇರ’ ದೊಡ್ಡ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ಇದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅವರ ಖುಷಿ ನೋಡಿ ದರ್ಶನ್‌ ಇನ್ನೂ ಖುಷಿಯಾಗಿದ್ದಾರೆ. ಇದನ್ನು ಬೇರೆಲ್ಲೂ ಸಂಭ್ರಮಿಸುವ ಬದಲು ತನ್ನ ನೆಚ್ಚಿನ ಸೆಲೆಬ್ರೆಟಿಸ್‌ ಜೊತೆಗೆ ಸಂಭ್ರಮಿಸಿದರೆ ಅದಕ್ಕೊಂದು ತೂಕ ಬರುತ್ತದೆ ಎಂದು ದರ್ಶನ್‌ ಅವರಿಗೆ ಅನಿಸಿದೆ.

Advertisement

ಹಾಗಾಗಿ, ಇಂದು ಸಂಜೆ 5 ಗಂಟೆಗೆ ದರ್ಶನ್‌ ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲಿದ್ದಾರೆ.

ಈ ವೇಳೆ ಸೆಲೆಬ್ರೆಟಿಸ್‌ ಜೊತೆ ಮಾತುಕತೆ ಕೂಡಾ ನಡೆಯಲಿದೆ. ಇನ್ನು, “ಕಾಟೇರ’ ಕಲೆಕ್ಷನ್‌ ವಿಚಾರದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್‌ ಏರಿಕೆಯಾಗುತ್ತಿದೆ. ಮುಖ್ಯವಾಗಿ ಒಂದು ಗಟ್ಟಿಕಥಾಹಂದರವಿರುವ ಚಿತ್ರ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುವ ಜೊತೆಗೆ ಚಿತ್ರ ಮಾಸ ಪ್ರಿಯರ ಜೊತೆಗೆ ಫ್ಯಾಮಿಲಿ ಆಡಿಯನ್ಸ್‌ ಅನ್ನು ಸೆಳೆಯುತ್ತಿದೆ.

ಇನ್ನು “ಕಾಟೇರ’ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿರುವ ಅಭಿಮಾನಿಗಳಿಗೆ ದರ್ಶನ್‌ ಧನ್ಯವಾದ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ದರ್ಶನ್‌, “ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯೆಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್‌! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ’ ಎಂದಿದ್ದಾರೆ. ಈ ಪ್ರೀತಿಯ ಚಪ್ಪಾಳೆ ನಮ್ಮ “ಕಾಟೇರ’ ಚಿತ್ರತಂಡದ ಮನತುಂಬಿದೆ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next