Advertisement

Kaatera; ಇಂದು ಮಂಡ್ಯದಲ್ಲಿ ‘ಕಾಟೇರ’ ಹಬ್ಬ; ಕಲರ್ ಫುಲ್ ವೇದಿಕೆಯಲ್ಲಿ ಪ್ರಿ ರಿಲೀಸ್ ಇವೆಂಟ್

12:38 PM Dec 23, 2023 | Team Udayavani |

ದರ್ಶನ್‌ ನಾಯಕರಾಗಿರುವ “ಕಾಟೇರ’ ಚಿತ್ರ ಡಿ.29ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌, ಹಾಡುಗಳು ಹಿಟ್‌ ಲಿಸ್ಟ್‌ಗೆ ಸೇರುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ. ಹುಬ್ಬಳ್ಳಿಯಲ್ಲಿ ಅದ್ಧೂರಿ ಯಾಗಿ ಟ್ರೇಲರ್‌ ರಿಲೀಸ್‌ ಮಾಡಿ, ಅಲ್ಲಿನ ಮಂದಿಗೆ ದರ್ಶನ ಭಾಗ್ಯ ನೀಡಿದ ದರ್ಶನ್‌ ಈಗ ಮಂಡ್ಯದತ್ತ ಮುಖ ಮಾಡಿದ್ದಾರೆ.

Advertisement

ಹೌದು, ಈ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಇಂದು ಮಂಡ್ಯ ನಗರದ ಬಾಯ್ಸ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಕಲರ್‌ ಫ‌ುಲ್‌ ವೇದಿಕೆ ಸಿದ್ಧವಾಗಿದ್ದು, ಸಿನಿಮಾದಲ್ಲಿ ನಟಿಸಿದ ತಾರೆಯರೆಲ್ಲಾ ಈ ವೇದಿಕೆಯಲ್ಲಿ ದರ್ಶನ ನೀಡಲಿದ್ದಾರೆ. ಈ ಮೂಲಕ ಮಂಡ್ಯ ಇಂದು ಜಗಮಗಿಸಲಿದೆ.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ ತಯಾರಾಗಿರುವ “ಕಾಟೇರ’ ಸಿನಿಮಾವನ್ನು ತರುಣ್‌ ಸುಧೀರ್‌ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ದರ್ಶನ್‌ ಹಾಗೂ ತರುಣ್‌ ಕಾಂಬಿನೇಶನ್‌ನಲ್ಲಿ ಬಂದಿರುವ “ರಾಬರ್ಟ್‌’ ಚಿತ್ರ ಸೂಪರ್‌ ಹಿಟ್‌ ಆಗುವ ಮೂಲಕ “ಕಾಟೇರ’ ಸಿನಿಮಾ ಮೇಲೆಯೂ ನಿರೀಕ್ಷೆ ಹೆಚ್ಚಿದೆ. “ಕಾಟೇರ’ ಕಮರ್ಷಿಯಲ್‌ ಅಂಶಗಳ ಜೊತೆಗೆ ಕಂಟೆಂಟ್‌ ಆಧರಿತ ಸಿನಿಮಾವಾಗಿದೆ. ಉಳುವವನೇ ಭೂಮಿಯ ಒಡೆಯ ಕಾನೂನು ಅನ್ನು ಮೂಲವಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆನ್ನಲಾಗಿದೆ. ಟ್ರೇಲರ್‌ನಲ್ಲಿರುವ ದರ್ಶನ್‌ ಅವರ ಗೆಟಪ್‌ ತುಂಬಾ ವಿಶೇಷವಾಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದು ಸುಳ್ಳಲ್ಲ.

ಚಿತ್ರದಲ್ಲಿ ನಾಯಕಿಯಾಗಿ ಆರಾಧನಾ ನಟಿಸಿದ್ದು, ಉಳಿದಂತೆ ಜಗಪತಿ ಬಾಬು, ಶ್ರುತಿ, ಅವಿನಾಶ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next