ಕಾರವಾರ: ಕರಾವಳಿಯ ಜೀವನಾಡಿ ಕಾಳಿನದಿ ದಂಡೆಗೆ ರಸ್ತೆ ನಿರ್ಮಿಸುವುದು ಸ್ಥಳೀಯರ ಕೋಪಕ್ಕೆ ತುತ್ತಾಗಿದೆ.
ನಗರೋತ್ಥಾನ ಯೋಜನೆಯ 3ನೇ ಹಂತದ ಕಾಮಗಾರಿ ಅಡಿ ಪ್ರವಾಸೋದ್ಯಮ ಆಕರ್ಷಣೆ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಯ 5 ಕೋಟಿ ರೂ. ಮೀಸಲಿಡಲಾಗಿತ್ತು. ಕಾಳಿನದಿ ದಂಡೆಯ ಕೋಡಿಭಾಗದಿಂದಸಂತೋಷಿಮಾತಾ ದೇವಸ್ಥಾನದವರೆಗೆ ರಸ್ತೆ ರೂಪಿಸಲು ಯೋಜಿಸಲಾಗಿತ್ತು. ಈ ಯೋಜನೆ ಮಾಜಿ ಶಾಸಕ ಸೈಲ್‌ಅವಧಿಯಲ್ಲಿ ರೂಪಗೊಂಡಿತ್ತು. ಆದರೆ ನಗರಸಭೆ ಸಿಆರ್‌ಝಡ್‌ಅನುಮತಿಗೆ ಕಳೆದ ಡಿಸೆಂಬರ್ (2019)ರಲ್ಲಿ ಪತ್ರ ಬರೆದು ಅನುಮತಿ ಕೋರಿದರು ಈತನಕ ಅನುಮತಿ ದೊರೆತಿಲ್ಲ. ಅರ್ಜಿ ತಿರಸ್ಕರಿಸಿಯೂ ಇಲ್ಲ. ಈಗ ಮತ್ತೂಮ್ಮೆ ರಸ್ತೆ ನಿರ್ಮಾಣಕ್ಕೆ ಅನುಮತಿ ಕೊಡುವಂತೆ ನಗರಸಭೆ ಜ್ಞಾಪನಾ ಪತ್ರಬರೆದಿದೆ. ಕೆಲವರ ವಿರೋಧದ ಕಾರಣ ನದಿ ಅಂಚಿಗೆ ರಸ್ತೆ ನಿರ್ಮಾಣಕ್ಕೆ ಬ್ರೆಕ್ ಹಾಕಲಾಗಿದೆ.
ಸಿಆರ್‌ಝಡ್ ಕಾನೂನನ್ನುಉಲ್ಲಂಘಿಸಿ ಕಾಳಿನದಿ ಅರಬ್ಬಿಸಮುದ್ರವನ್ನು ಸೇರುವ ಸಂಗಮ ಪ್ರದೇಶದಿಂದ ಕೇವಲ 750 ಮೀಟರ್ ದೂರದಲ್ಲಿ ನದಿಯಲ್ಲಿ ಮಣ್ಣುಸುರಿಯುವ ಕಾರ್ಯ ಆರಂಭವಾಗಿದ್ದುಅಲ್ಲಿರುವ ಕಾಂಡ್ಲಾ ಗಿಡಗಳನ್ನು ಕತ್ತರಿಸುವ ಸಿದ್ಧತೆಗಳು ನಡೆದಿದ್ದವು ಎಂಬುದು ಪರಿಸರ ಪ್ರಿಯರ ಆರೋಪ. ನದಿಪಾತ್ರವನ್ನು ಚಿಕ್ಕದಾಗಿಸಿ ಅಲ್ಲಿ ಕಲ್ಲು-ಮಣ್ಣು ತುಂಬಿ ಜೀವರಾಶಿಗಳಿಗೆ ಹಾನಿ ಮಾಡುವ ಈ ಯೋಜನೆಯನ್ನು ಕಾರವಾರ ನಗರಸಭೆ ಕೈಗೊಂಡಿದ್ದುಈ ಕಾಮಗಾರಿ ಆರಂಭಿಸುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ,ಮಾಹಿತಿಯನ್ನೇ ನೀಡಿರಲಿಲ್ಲ ಎಂದು ಆಪಾದಿಸಲಾಗಿದೆ. ಕಳೆದ ಸೋಮವಾರ ಏಕಾಏಕಿ ಟಿಪ್ಪರ್ ಗಳಲ್ಲಿ ಮಣ್ಣು ಹಾಗೂ ಕಲ್ಲುಗಳನ್ನು ತಂದು ನದಿಯಲ್ಲಿ ಸುರಿಯಲಾಗಿದ್ದು ಇದುಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.
ನದಿ ದಂಡೆಗೆ ರಸ್ತೆ: ನೂತನ ರಸ್ತೆಕಾಮಗಾರಿಯು ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ನಂದನಗದ್ದಾದ ಅಂಬೇಡ್ಕರ ಕಾಲೊನಿ ಪರಿಶಿಷ್ಟ ಜಾತಿ ಜನರಿಗೆ ಸಹಾಯವಾಗುತ್ತದೆ. ಆದರೆ ಕಾಳಿನದಿ ಪಶ್ಚಿಮ ಘಟ್ಟದ ಜೀವನಾಡಿ ಹಾಗೂ ಜೀವವೈವಿಧ್ಯಗಳನ್ನು ಹೊಂದಿದೆ. ನದಿ ದಂಡೆಯಲ್ಲಿ ತಿಸರೆ, ಕುಬ್ಬೆ ಹಾಗೂ ಕಲ್ವಾ ದಂತಹ ಮೃಧ್ವಸ್ಥಿಗಳು ಹಾಗೂ ಮೀನುಗಳು ಹೇರಳವಾಗಿವೆ. ನದಿಯಲ್ಲಿ ಮರಳುಗಾರಿಕೆ ನಡೆಸುವುದರಿಂದ ಇಲ್ಲಿನಜೀವವೈವಿಧ್ಯ ನಾಶವಾಗುವುದು ಎಂಬ ಕಾರಣಕ್ಕೆ ಇಲ್ಲಿ ಮರಳುಗಾರಿಕೆಯನ್ನೇ ಸರ್ಕಾರ ನಿಷೇಧಿಸಿದೆ ಎಂಬುದು ಸಹ ಗಮನಾರ್ಹ ಸಂಗತಿ. ಉದ್ದೇಶಿತ ರಸ್ತೆ ನಿರ್ಮಾಣ ಸ್ಥಳ ಸಿಆರ್‌ಝಡ್2 ಝೋನ್‌ನಲ್ಲಿ ಬರುವುದರಿಂದ ಸಿಆರ್ ಝಡ್ ಇಲಾಖೆ ಪೂರ್ವಾನುಮತಿಕಡ್ಡಾಯ. ಆದರೆ ಸಿಆರ್‌ಝಡ್‌ಇಲಾಖೆ ನಗರಸಭೆ ನೀಡಿದ ಪತ್ರ ಇತ್ಯರ್ಥ ಪಡಿಸದೇ ಹಾಗೇ ಇಟ್ಟುಕೊಂಡು ಕೂತಿದೆ.
ಐದು ಕೋಟಿ ರೂ. ವಾಪಸ್: ರಸ್ತೆಕಾಮಗಾರಿಯನ್ನು ಡಿಸೆಂಬರ್ 2020 ರೊಳಗೆ ಮುಗಿಸದಿದ್ದರೆ ಐದು ಕೋಟಿರೂ. ನಗರೋತ್ಥಾನದ ಅನುದಾನ ವಾಪಸ್ ಸರ್ಕಾರಕ್ಕೆ ಹೋಗಲಿದೆ. ಪಿಶ್‌ಮಾರ್ಕೆಟ್ 2ನೇ ಹಂತದ ವಿಸ್ತರಣೆಗೆ ಇಟ್ಟ ಐದು ಕೋಟಿ ರೂ. ಸಹ ಸರ್ಕಾರಕ್ಕೆವಾಪಸ್ ಹೋಗಲಿದೆ. ನಗರೋತ್ಥಾನವಿವಿಧ ಕಾಮಗಾರಿಗಳಿಂದ ಉಳಿದ 1 ಕೋಟಿ ರೂ.ಸೇರಿದಂತೆ ಕಾರವಾರ ಅಭಿವೃದ್ಧಿಗೆ ಬಂದ 11 ಕೋಟಿ ರೂ. ಅನುದಾನ ವಾಪಸ್ ಹೋಗುವ ಸನ್ನಿವೇಶ ಈಗ ನಿರ್ಮಾಣವಾಗಿದೆ. ಈ ಅನುದಾನ ವಾಪಸ್ ಹೋಗದಂತೆ, ಕಾಮಗಾರಿಗಳಿಂದ ಕಾರವಾರಕ್ಕೆ ಆಗುವ ಲಾಭವನ್ನು ಶಾಸಕಿ ರೂಪಾಲಿ ನಾಯ್ಕ ಜನತೆಗೆ ಮನವರಿಕೆ ಮಾಡಿಕೊಟ್ಟರೆ ಬಂದ ಅನುದಾನ ಪ್ರಯೋಜನವಾಗಲಿದೆ ಎಂಬ ಮಾತು ಸಹ ಕೇಳಿ ಬಂದಿದೆ.
ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸೂಕ್ಷ್ಮ ಜೀವಿಗಳಿರುವ ನದಿಯಲ್ಲಿಮಣ್ಣು ಸುರಿದು ನದಿ ಪಾತ್ರವನ್ನು ಸಂಗಮ ಸ್ಥಳದ ಹತ್ತಿರ ಮುಚ್ಚುವುದುಪರಿಸರ ನಾಶಕ್ಕೆ ಕಾರಣವಾಗುತ್ತದೆ. –
ಪ್ರಿತಂ ಮಾಸೂರಕರ, ಸಾಮಾಜಿಕ ಕಾರ್ಯಕರ್ತರು
ಈ ರಸ್ತೆ ನಿರ್ಮಾಣದಿಂದನದಿಗಾಗಲಿ, ಕಾಂಡ್ಲಾ ಗಿಡಕ್ಕಾಗಲಿ, ಜಲಚರಗಳಿಗಾಗಲಿ ಹಾನಿ ಇಲ್ಲ. ಇದರಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ. ಕಾರವಾರ ನಗರಕ್ಕೆ ರಿಂಗ್ ರೋಡ್ ನಿರ್ಮಿಸಲು ಇದು ಸಹಕಾರಿ ಆಗಲಿದೆ.
–ದೀಪಕ ವೈಂಗಣಕರ, ನಗರಸಭಾ ಮಾಜಿ ಸದಸ್ಯರು.
ಈ ಕಾಮಗಾರಿ ಈ ಹಿಂದೆಯೇ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿತ್ತು. ಈಗ ಕಾಮಗಾರಿ ಪ್ರಾರಂಭಿಸಲಾಗಿದೆ. ಸಿಆರ್‌ಝಡ್ ನ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು. –
ಪ್ರಿಯಂಕಾ ಎಂ., ಪೌರಾಯುಕ್ತ, ನಗರಸಭೆ ಕಾರವಾರ
-ನಾಗರಾಜ್ ಹರಪನಹಳ್ಳಿ