Advertisement

ಉದ್ಘಾಟನೆ ಭಾಗ್ಯ ಕಾಣದ ಕಾಳಗಿ ರೈತ ಸಂಪರ್ಕ ಕೇಂದ್ರ

09:35 AM Jan 02, 2019 | |

ಕಾಳಗಿ: ಭೂಸೇನಾ ನಿಗಮ ವತಿಯಿಂದ ನೂತನ ತಾಲೂಕು ಕೇಂದ್ರ ಕಾಳಗಿ ಪಟ್ಟಣದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೆ ಅಕ್ರಮ ಚಟುವಟಿಗಳ ತಾಣವಾಗಿದೆ.

Advertisement

ಪಟ್ಟಣದ ರೈತ ಸಂಪರ್ಕ ಕೇಂದ್ರವು ಟೆಂಗಳಿ, ಕೊಡದೂರ, ರಾಜಾಪುರ, ಕಾಳಗಿ, ಗೋಟೂರ, ಚಿಂಚೋಳಿ (ಎಚ್‌), ಕಂದಗೂಳ, ಅರಣಕಲ್‌, ಬೆಡಸೂರ, ಹೇರೂರ, ಶೆಳ್ಳಗಿಯ 11 ಗ್ರಾಪಂ ವ್ಯಾಪ್ತಿಯ ಒಟ್ಟು 50ಕ್ಕೂ ಹೆಚ್ಚಿನ ಗ್ರಾಮ ಮತ್ತು ತಾಂಡಾಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬರುವ ಕೃಷಿ ಸಾಮಗ್ರಿಗಳಾದ ಲಘು ಪೋಷಾಕಾಂಶಗಳು, ಬೀಜ, ರಸಗೊಬ್ಬರ, ಕೀಟನಾಶಕ, ಇತರೆ ಕೃಷಿ ಪರಿಕರಗಳನ್ನು ಖರೀಸಲು ಸ್ಥಳದ ಅಭಾವವಿದ್ದು, ಕೃಷಿ ಸಲಕರಣೆಗಳ ಶೇಖರಣೆಗೆ ಕೋಣೆಗಳ ಕೊರತೆಯಿಂದ ಬೇರೆ ಕಟ್ಟಡದಲ್ಲಿ ಸಂಗ್ರಹಿಸುವ ಅನಿವಾರ್ಯತೆ ಬಂದೊದಗಿದೆ.

ಹಳೆ ಕಟ್ಟಡ ಚಿಕ್ಕದಿರುವುದರಿಂದ ಸಮಸ್ಯೆ ಅರಿತ ಜನಪ್ರತಿನಿಧಿಗಳು ಕಳೆದ ಎರಡು ವರ್ಷಗಳ ಹಿಂದೆ ಭೂ ಸೇನಾ ನಿಗಮ ಅಡಿಯಲ್ಲಿ 38ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಭರತನೂರ ರಸ್ತೆ ಮಾರ್ಗದಲ್ಲಿ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ. ಸುಸಜ್ಜಿತವಾಗಿ ನಿರ್ಮಾಣವಾದ ಈ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳಾದ ವಿದ್ಯುತ್‌, ಕುಡಿಯುವ ನೀರು, ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಲ್ಲ. ರಐತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಈ ಕಟ್ಟಡವನ್ನು ಇನ್ನುವರೆಗೂ ಹಸ್ತಾಂತರಿಸಿಲ್ಲ. ನಿರ್ಮಾಣವಾದ ಕಟ್ಟಡ ಹಾಳು ಬಿದ್ದಿದ್ದು, ಕುಡುಕರ, ಪೋಲಿ ಹುಡುಗರ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ವಿದ್ಯುತ್‌ ಸೌಲಭ್ಯ ಕಲ್ಪಿಸಲು ಗುತ್ತೇದಾರರಿಗೆ ತಿಳಿಸಲಾಗಿದೆ. ಇನ್ನುಳಿದ ಕೆಲಸ ಪೂರ್ಣಗೊಳಿಸಿ 15ದಿನಗಳ ಒಳಗಾಗಿ ಕೃಷಿ ಅಧಿಕಾರಿಗಳಿಗೆ ಕಟ್ಟಡ ಹಸ್ತಾಂತರಿಸಲಾಗುವುದು.
ಲಿಂಗನಗೌಡ ಪಾಟೀಲ,
ಲ್ಯಾಂಡ್‌ ಆರ್ಮಿ ಎಇಇ

ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡದಲ್ಲಿ ಇನ್ನು ಕೆಲಸಗಳು ಬಾಕಿ ಇವೆ. ಕೆಲಸ ಪೂರ್ಣಗೊಳಿಸಿ ಹಸ್ತಾಂತರಿಸಿದರೆ ಶೀಘ್ರವೇ ಕಟ್ಟಡ ಉದ್ಘಾಟಿಸಲಾಗುವುದು.
ಎಸ್‌.ಎಚ್‌. ಗಡಗಿಮನಿ,
ಸಹಾಯಕ ಕೃಷಿ ನಿರ್ದೇಶಕ ಚಿತ್ತಾಪೂರ

Advertisement

ಭೀಮರಾಯ ಕುಡ್ಡಳಿ

Advertisement

Udayavani is now on Telegram. Click here to join our channel and stay updated with the latest news.

Next