ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯಸೋಮವಾರ ಬಿದರೆ ಗ್ರಾಮಕ್ಕೆ ಭೇಟಿ ನೀಡಿಕೊನೆ ಭಾಗಕ್ಕೆ ನೀರು ಹರಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಕಳೆದ ನವೆಂಬರ್ ತಿಂಗಳಲ್ಲಿ ಭದ್ರಾ ಜಲಾಶಯದಿಂದ ಎಡ ಮತ್ತು ಬಲನಾಲೆಗಳಿಗೆ ಹರಿಸುತ್ತಿದ್ದ ನೀರನ್ನು ಈಗಾಗಲೇನಿಲ್ಲಿಸಿದ್ದು, ಸಾಕಷ್ಟು ವರ್ಷಗಳಿಂದಹೂಳು ತೆಗೆಯುವ ಕೆಲಸ ಇಲಾಖೆಯವತಿಯಿಂದ ಆಗದೆ ಜಲಾಶಯದಿಂದ ನೀರುಬಿಟ್ಟಾಗ ರೈತರಿಗೆ ಪೂರ್ಣ ಪ್ರಮಾಣದಲ್ಲಿನೀರು ಲಭಿಸುವುದರಲ್ಲಿ ಸ್ವಲ್ಪ ಮಟ್ಟಿನತೊಂದರೆಯಾಗುತ್ತಿರುವುದು ದೊಡ್ಡಸಮಸ್ಯೆಯಾಗಿ ಉಳಿದಿತ್ತು. ಈ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಿ ಯೋಚಿಸಿದಾಗ ಕೋವಿಡ್-19 ಸಂಕಷ್ಟದ ಸಮಯದಲ್ಲಿರಾಜ್ಯ ಸರ್ಕಾರಕ್ಕೆ ಎದುರಾಗಿರುವ ಆರ್ಥಿಕ ಸಂಕಷ್ಟವನ್ನು ಮನಗಂಡು ಕೇಂದ್ರಸರ್ಕಾರದ ಮಹಾತ್ಮ ಗಾಂ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಸುವ ಕಾಮಗಾರಿ ಕೈಗೊಂಡರೆ ಕೆಲಸವಿಲ್ಲದ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸ ಕೊಟ್ಟಂತಾಗುತ್ತದೆ.
ರೈತರ ಸಮಸ್ಯೆಗೆ ಸ್ವಲ್ಪ ಮಟ್ಟಿನ ಕಾಯಕಲ್ಪ ನೀಡಿದಂತಾಗುತ್ತದೆ ಎಂದು ಆಲೋಚಿಸಿಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಅವರನ್ನು ಭೇಟಿ ಮಾಡಿ ಕಾಡಾ ವ್ಯಾಪ್ತಿಯ ಗ್ರಾಪಂಳಿಗೆ ನರೇಗಾಯೋಜನೆಯ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು.
ಅದರಂತೆ ಈ ಮನವಿಗೆ ಸ್ಪಂದಿಸಿ ಎಲ್ಲಾ ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅನುದಾನ ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯ ಹಲವಾರುಕಡೆ ಈಗಾಗಲೇ ನರೇಗಾ ಅಡಿ ಹೂಳು ತೆಗೆಯುವ ಕಾರ್ಯ ಆರಂಭವಾಗಿದೆ. ಜಲಾಶಯದಿಂದ ನೀರು ನಿಲ್ಲಿಸಿರುವ ಈ ಬಿಡುವಿನ ಅವ ಧಿಯಲ್ಲಿ ಕಾಲುವೆಗಳಲ್ಲಿತುಂಬಿಕೊಂಡಿರುವ ಹೂಳನ್ನು ಎತ್ತುವ ಹಾಗೂ ಕಾಲುವೆಗಳ ಬದಿಯಲ್ಲಿ ಯಥೇತ್ಛವಾಗಿ ತುಂಬಿರುವ ಗಿಡ ಗಂಟೆಗಳನ್ನು ತಗೆಸುವ ಕೆಲಸ ಪ್ರಗತಿಯಲ್ಲಿದ್ದು ಅಧಿಕಾರಿಗಳೊಂದಿಗೆ ಗ್ರಾಮದ ರೈತರೊಂದಿಗೆ ಭೇಟಿ ಮಾಡಿಪರಿಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟ ವೀಕ್ಷಿಸಿದರು.
ಭದ್ರಾ ಅಚ್ಚುಕಟ್ಟು ಭಾಗದ ರೈತರು ಅನೇಕ ವರ್ಷಗಳಿಂದ ಎದುರಿಸುತ್ತಿರುವ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಕೂಗಿಗೆ ನಾನು ಧ್ವನಿಯಾಗಿ ನಿಲ್ಲಲು ಈಗಾಗಲೇ ಯೋಜನೆ ರೂಪಿಸುತ್ತಿದ್ದುಈ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದ್ದೇನೆ. ಕೊನೆಯ ಭಾಗಕ್ಕೆ ನೀರು ಮುಟ್ಟ ಬೇಕೆಂದು,ರೈತರು ಹಸನ್ಮುಖರಾಗಬೇಕೆಂದು ನನ್ನ ಕನಸಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಭಾನುವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭದ್ರಾ ಎಡದಂಡೆನಾಲೆಯ ಶಿವಮೊಗ್ಗ ತಾಲೂಕು ಸೋಗಾನೆಬಳಿ ಇರುವ ಕೆರೆಯನ್ನು ವೀಕ್ಷಿಸಿದರು.ಸುದೀರ್ಘ ರೈತ ಹೋರಾಟದಲ್ಲಿದ್ದಸಂದರ್ಭದಲ್ಲಿ ಕೂಡ ಭದ್ರಾ ಅಚ್ಚುಕಟ್ಟುವ್ಯಾಪ್ತಿಯ ರೈತರಿಗೆ ಜಲಾಶಯದಿಂದ ನೀರುಬಿಟ್ಟಾಗ ಅದು ಕೊನೆಯ ಭಾಗಕ್ಕೆ ತಲುಪದೆಇರುವುದು ನನ್ನ ಗಮನಕ್ಕೆ ಬಂದಿದ್ದುಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.