Advertisement

18 ವರ್ಷ ಮೇಲ್ಪಟ್ಟವರು ನಾಳೆ ಲಸಿಕೆಗಾಗಿ ಆಸ್ಪತ್ರೆಗೆ ಬರಬೇಡಿ: ಸಚಿವ ಸುಧಾಕರ್

09:22 AM Apr 30, 2021 | Team Udayavani |

ಬೆಂಗಳೂರು: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ.1ರಿಂದಲೇ ಕೋವಿಡ್ ಲಸಿಕೆ ನೀಡಲಾಗುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಲು ನಾಳೆ ಆಸ್ಪತ್ರೆಗಳಿಗೆ ಬರಬೇಡಿ. ನಮಗೆ ಕಂಪೆನಿಯಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬೇಕಾದಷ್ಟು ಲಸಿಕೆ ತಲುಪಿಲ್ಲ. ಯಾವಾಗ ಲಸಿಕೆ ಬರುತ್ತಿದೆ ಎಂಬ ಮಾಹಿತಿಯೂ ಇಲ್ಲ ಎಂದರು.

ಇದನ್ನೂ ಓದಿ:ಮಹಾರಾಷ್ಟ್ರ: ಜುಲೈ-ಆಗಸ್ಟ್ ನಲ್ಲಿ ಕೋವಿಡ್ ಮೂರನೇ ಅಲೆ: ಸಚಿವ ಟೋಪೆ

ಹೀಗಾಗಿ ಲಸಿಕೆ ಪಡೆಯಲು 18ರಿಂದ 45 ವರ್ಷದವರೆಗಿನವರು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡವರು ಮುಂದಿನ ದಿನಾಂಕದವರೆಗೆ ಕಾಯಬೇಕಿದೆ ಎಂದು ಸಚಿವರು ಹೇಳಿದ್ದಾರೆ.

30 ಲಕ್ಷ ಡೋಸ್‌ ದಾಸ್ತಾನು: ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಿದರೆ ನಿತ್ಯ 4-5 ಲಕ ಡೋಸ್ ಲಸಿಕೆ ಬೇಕಾಗುತ್ತದೆ. ಹೀಗಾಗಿ, ಕನಿಷ್ಠ 30 ಲಕ್ಷ ದಾಸ್ತಾನು ಇದ್ದರೆ ಮಾತ್ರವೇ ಸುಗಮವಾಗಿ ಲಸಿಕೆ ಅಭಿಯಾನ ನಡೆಯಲು ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಜಿಲ್ಲೆಗಳಿಗೆ ಆದ್ಯತೆ: ಲಸಿಕೆ ಕೊರತೆ ಹಿನ್ನೆಲೆ ಸೋಂಕಿನ ತೀವ್ರತೆ ಹೆಚ್ಚಿರುವ ಜಿಲ್ಲೆಗಳಿಗೆ ಆದ್ಯತೆಯಲ್ಲಿ ಲಸಿಕೆ ಸರಬರಾಜು ಮಾಡಲಾಗುತ್ತಿದೆ. “ಸೋಂಕು ಪರೀಕ್ಷೆಗಳಲ್ಲಿ ಹೆಚ್ಚು ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಿಗೆ ತುರ್ತಾಗಿ ಲಸಿಕೆ ನೀಡಿ ಹೆಚ್ಚು ಜನರಿಗೆ ಲಸಿಕೆ ಹಾಕಲು ಸೂಚಿಸಲಾಗಿದೆ. ಈ ಮೂಲಕ ಸೋಂಕು ಹತೋಟಿಗೆ ಪ್ರಯತ್ನಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ.ಬಿ.ಎನ್‌.ರಜನಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next