ರಾಯಚೂರು: ಓಬಿಸಿ ಸಮುದಾಯಗಳಿಗೆ ಸೂಕ್ತ ಮೀಸಲಾತಿ ಸಿಗುವವರೆಗೂ ತಾಪಂ, ಜಿಪಂ ಚುನಾವಣೆ ನಡೆಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಓಬಿಸಿಗೆ ಅನ್ಯಾಯ ಆಗಬಾರದು ಎನ್ನುವುದು ನಮ್ಮ ಉದ್ದೇಶ. ಹಿಂದೆ ಮೀಸಲಾತಿ ಹಂಚಿಕೆ ಸರಿಯಾಗಿ ಆಗದ ಕಾರಣ ಸುಪ್ರಿಂ ಕೋರ್ಟ್ ಕೆಲ ರಾಜ್ಯಗಳಲ್ಲಿ ಜನಪ್ರತಿನಿಧಿಗಳ ಆಯ್ಕೆಯನ್ನೇ ರದ್ದುಗೊಳಿಸಿದೆ. ನಮ್ಮಲ್ಲೂ ಅಂಥ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಕಾಯುತ್ತಿದ್ದೇವೆ ಎಂದರು.
ಕಾಂಗ್ರೆಸ್ ನವರು ನಿರುದ್ಯೋಗಿಗಳಾಗಿದ್ದಾರೆ. ಅದಕ್ಕೆ ಮೇಕೆದಾಟು ಪಾರ್ಟ್ 2 ಡ್ರಾಮಾ ಆರಂಭಿಸಿದ್ದಾರೆ. ಎಚ್‌ಡಿಕೆ ಆರಂಭಿಸಿದ್ದ ಯೋಜನೆಗೆ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ನಾವು ಯೋಜನೆ ಮಾಡುತ್ತೇವೆ. ಇವರ ಡ್ರಾಮಾಕ್ಕೆ ಬಗ್ಗಲ್ಲ ಎಂದರು.
ಇದನ್ನೂ ಓದಿ:ಪ್ರಶ್ನೆ ಕೇಳಿದ್ದಕ್ಕೆ ಸದಸ್ಯನ ಮೇಲೆ ಹಲ್ಲೆ ಮಾಡಿ ಚೂರಿ ಇರಿಯಲು ಯತ್ನಿಸಿದ ಗ್ರಾ.ಪಂ.ಅಧ್ಯಕ್ಷ
ಹತ್ಯೆಯಾಗಿದ್ದ ಹಿಂದು ಕಾರ್ಯಕರ್ತನ ತಾಯಿ ಚಿಂದಿ ಅಯ್ದು ಬದುಕುತ್ತಿರುವ ವಿಚಾರ ಈಗ ಗೊತ್ತಾಗಿದೆ. ಸಿ.ಟಿ.ರವಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಆ ಕುಟುಂಬಕ್ಕೆ ನಾವೇನು ಸಹಾಯ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.