Advertisement

ಕಾಂಗ್ರೆಸ್, ಮುಸ್ಲಿಂ ಲೀಗ್ ಬಿಟ್ಟು ಯಾರೇ ಬೆಂಬಲ ನೀಡಿದರೂ ಅಭ್ಯಂತರವಿಲ್ಲ: ಈಶ್ವರಪ್ಪ

02:20 PM Dec 21, 2020 | keerthan |

ಶಿವಮೊಗ್ಗ: ನಮಗೆ ಯಾವ್ಯಾವ ಪಕ್ಷಗಳು ಬೆಂಬಲ ಕೊಡುತ್ತಾವೆ. ಯಾವ್ಯಾವ ಪಕ್ಷಗಳು ವಿಲೀನವಾಗುತ್ತದೆ ಎನ್ನವುದುಆ ಪಕ್ಷದ ವಿಚಾರ. ಅದರೆ, ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಬಿಟ್ಟು ಯಾರೇ ಅದರೂ ನಮ್ಮ ಅಭ್ಯಂತರವಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಸ್ವತಂತ್ರವಾಗಿ ಪೂರ್ಣಬಹುಮತ ಪಡೆಯಬೇಕು. ಈ ಹಿನ್ನಲೆಯಲ್ಲಿ ಸಂಘಟನಾತ್ಮಕ ವಾಗಿ ಕೆಲಸ ಮಾಡುತ್ತಿದ್ದೇವೆ. ಅದರೆ ಈ ಕ್ಷಣದವರೆಗೂ ಬಿಜೆಪಿ ಹಾಗೂ ಜೆಡಿಎಸ್ ವಿಲೀನದ ವಿಚಾರದ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ ಎಂದರು.

ಇದನ್ನೂ ಓದಿ:ಮನೆಗಳ ಬಾಗಿಲಿಗೆ ಕುಂಕುಮ ಎರಚಿದ ದುಷ್ಕರ್ಮಿಗಳು: ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಜನವರಿ 2 ರಂದು ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ಹಾಗೂ 3 ರಂದು ವಿಶೇಷ ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾಗವಹಿಸಲಿದ್ದು, ರಾಜ್ಯಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ವಿಶೇಷ ಸಭೆಯ ಉದ್ಘಾಟನೆ ಮಾಡಲಿದ್ದಾರೆ. ರಾಜಕೀಯ ತಿರುವು ಪಡೆಯೋ ಈ ಸಂದರ್ಭದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಗ್ರಾಮ ಪಂಚಾಯತ್ ಚುನಾವಣೆ ನಡೆದ ನಂತರದಲ್ಲಿ ಸಭೆ ನಡೆಯುತ್ತಿ ರುವುದು ವಿಶೇಷವಾಗಿದೆ. ಮುಂದಿನ ರಾಜ್ಯದ ಭವಿಷ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next