Advertisement

ಸಮುದಾಯದ ಹೋರಾಟಕ್ಕೆ ಸಿದ್ದರಾಮಯ್ಯ ಮನವೊಲಿಸುವ ತೆವಲು ನನಗಿಲ್ಲ: ಈಶ್ವರಪ್ಪ

01:12 PM Dec 29, 2020 | keerthan |

ಮೈಸೂರು: ನಮ್ಮ ಸಮುದಾಯದ ಹೋರಾಟಕ್ಕೆ ಸಿದ್ದರಾಮಯ್ಯ ಸಹಕಾರ ನೀಡುವಂತೆ ಮನವೊಲಿಸುವ ತೆವಲು ನನಗಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಇಂದು ಏರ್ಪಡಿಸಿದ್ದ ಕುರುಬರ ಎಸ್.ಟಿ. ಹೋರಾಟ ಪೂರ್ವಭಾವಿ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನನ್ನು ಮನವೊಲಿಸುವ ಅಗತ್ಯವಿಲ್ಲ, ಅಪೇಕ್ಷೆ ಇದ್ದವರು ಬರುತ್ತಾರೆ. ರಾಜ್ಯದಲ್ಲಿ ಕೋಟ್ಯಾಂತರ ಜನ ಇದ್ದಾರೆ, ಅವರನ್ನೆಲ್ಲಾ ಮನವೊಲಿಸಲು ಆಗುತ್ತಾ. ಸಮುದಾಯದ ಮೇಲೆ ಯಾರಿಗೆ ನಂಬಿಕೆ ಆಸಕ್ತಿ ಇದೆಯೋ ಅವರೆಲ್ಲಾ ಬರುತ್ತಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸಹಕಾರ ಕೊಡ್ಲಿಲ್ಲ ಅಂತ ಮನವೊಲಿಸುವ ತೆವಲು‌ ನನಗೇನು. ನಮ್ಮ ಹಿಂದೆ ಸಮುದಾಯದ ಸ್ವಾಮೀಜಿಗಳಿದ್ದಾರೆ. ಹೋರಾಟದಲ್ಲಿ ಯಶಸ್ವಿಯಾಗುವ ಬಗ್ಗೆ ನಮಗೆ ನಂಬಿಕೆ ಇದೆ‌. ಇದು ಹೋರಾಟವಲ್ಲ ಜನ ಜಾಗೃತಿ. ಸ್ವಾತಂತ್ರ್ಯ ಪೂರ್ವದಿಂದಲೂ ಕುರುಬರು ಒಂದುಗೂಡಿಲ್ಲ. ಈ ಹಿನ್ನೆಲೆಯಲ್ಲಿ ಒಂದುಗೂಡಿಸುವ ಸಲುವಾಗಿ ಸಭೆ ನಡೆಸುತ್ತಿದ್ದೇವೆ ಎಂದರು.

ಇದನ್ನೂ ಓದಿ:ಧರ್ಮೇಗೌಡರ ಆತ್ಮಹತ್ಯೆ ಇಂದಿನ ಕಲುಷಿತ, ತತ್ವರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ: HDK

ಸ್ವಾತಂತ್ರ್ಯ ಪೂರ್ವದಲ್ಲೇ ಕುರುಬರು ಎಸ್‌ಟಿಗೆ ಸೇರಿದ್ದಾರೆ ಎಂಬ ದಾಖಲೆಗಳಿವೆ ಎನ್ನುತ್ತಾರೆ. ಎಸ್‌ಟಿಗೆ ಸೇರಿಸಲು ರಾಮಕೃಷ್ಣ ಹೆಗ್ಡೆ, ದೇವರಾಜ ಅರಸುರವರ ಸಹಕಾರ ಕೇಳಿದ್ದೆವು ಆದರೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಸಮುದಾಯವನ್ನ ಎಸ್‌ಟಿಗೆ ಸೇರಿಸಿ ಅಂತ ಸಭೆ ಮಾಡುತ್ತಿದ್ದೇವೆ. ಮಠಾಧೀಶರ ವಿರೋಧವಿಲ್ಲ, ಮಠಾಧೀಶರನ್ನ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕುರುಬ ಸಮುದಾಯ ಇಬ್ಬಾಗ ಆಗುತ್ತಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಧರ್ಮೇಗೌಡ ಆತ್ಮಹತ್ಯೆ ತುಂಬಾ‌ ನೋವಿನ ವಿಚಾರ. ಅವರು ಸಾಯುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಅವರು ಯಾವ ವಿಚಾರಕ್ಕೆ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next