ಹೊಸದುರ್ಗ: ಆರ್ ಎಸ್ಎಸ್ ಬಗ್ಗೆ ನೆಹರು, ಇಂದಿರಾ ಗಾಂಧಿ ಮಾತಾಡಿ ಅನುಭವಿಸಿದ್ದಾರೆ. ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿ ಅವರೇ ಆರ್ ಎಸ್ಎಸ್ ಬಗ್ಗೆ ಮಾತು ಬೆಂಕಿ ಜತೆ ಸರಸವಾಡಿದಂತೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು,.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನ ಬಗ್ಗೆ ರಾವಣನಿಗೆ ಎಲ್ಲಾ ಗೊತ್ತಿತ್ತು. ಶಿವಾಜಿ ಬಗ್ಗೆ ಔರಂಗಜೇಬ್ ಗೆ ಏನೂ ಗೊತ್ತಿರಲಿಲ್ಲ. ಶಿವಾಜಿ ಹುಟ್ಟಿಲ್ಲದಿದ್ದರೆ ದೇಶದಲ್ಲಿ ಹಿಂದೂಗಳು ಇರುತ್ತಿರಲಿಲ್ಲ. ಆರ್ ಎಸ್ಎಸ್ ಇಲ್ಲದಿದ್ದರೆ ಯೋಚನೆ ಮಾಡಬೇಕಿತ್ತು. ಈ ದೇಶ ಪಾಕಿಸ್ತಾನವೋ ಇನ್ನೊಂದು ಆಗುತ್ತಿತ್ತು ಎಂದರು.
ಮುಸ್ಲಿಂ ಮತಕ್ಕಾಗಿ ಸಿದ್ಧರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕ್ರೈಸ್ತರ ಸಭೆಗೆ ಹೋಗಿ ಅವರ ಸಂತೃಪ್ತಿಗೊಳಿಸಲು ಹೆಚ್ ಡಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ರಾಜಕೀಯಕ್ಕೆ ಮಾಡಲು ಬೇಕಾದಷ್ಟು ವಿಚಾರಗಳು ಇವೆ. ರಾಷ್ಟ್ರೀಯ ವಿಚಾರಗಳ ಬಗ್ಗೆ ರಾಜಕಾರಣ ಬೇಡ ಎಂದರು.
ಇದನ್ನೂ ಓದಿ:ವಿದ್ಯುತ್ ಉತ್ಪಾದನಾ ಘಟಕಗಳ ಖಾಸಗೀಕರಣಕ್ಕೆ ಹುನ್ನಾರ : ಸಿದ್ದರಾಮಯ್ಯ ಗಂಭೀರ ಆರೋಪ
ಆರ್ ಎಸ್ಎಸ್ ಯುವಕರಿಗೆ ರಾಷ್ಟ್ರೀಯ ವಿಚಾರ ತಿಳಿಸುತ್ತಿದೆ. ಗಾಂಧೀಜಿ ಅವರೇ ಆರ್ ಎಸ್ಎಸ್ ಕ್ಯಾಂಪಿಗೆ ಬಂದಿದ್ದರು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದಿದ್ದರು. ಕೊಲೆಗಡುಕರು ಕಾಂಗ್ರೆಸ್ಸಿಗರು, ಬಿಜೆಪಿಯವರು ಅಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.