Advertisement

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯವರ ಪತ್ಯೇಕ ಬಣಗಳಿವೆ: ಸಚಿವ ಈಶ್ವರಪ್ಪ

05:42 PM Jun 16, 2020 | keerthan |

ಚಿತ್ರದುರ್ಗ: ಯಾರಿಂದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆಯೋ ಅವರಿಗೆ ಮೋಸವಾಗಬಾರದು ಎಂಬ ಅಭಿಪ್ರಾಯ ನಮ್ಮದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಎಂದ ಮೇಲೆ ಲಾಬಿ ಮಾಡುವುದು ಸ್ವಾಭಾವಿಕ. ಯಾವ ರಾಜಕಾರಣಿಗಳು ಸನ್ಯಾಸಿಗಳಲ್ಲ. ಸ್ಥಾನಮಾನ ಬೇಕು ಎಂದು ಕೇಳುವುದು ತಪ್ಪಲ್ಲ ಎಂದರು.

ಡಿಕೆಶಿ ಮೊದಲು ಪಕ್ಷ ಹುಡುಕಿಕೊಳ್ಳಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಡೇಟ್ ಕೊಟ್ಟಾಗಿದೆ. ಅವರು ಯಾವಾಗ ಬೇಕಾದರೂ ಮಾಡಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ಪದಗ್ರಹಣದ ಬಳಿಕ ಡಿ.ಕೆ. ಶಿವಕುಮಾರ್ ಎಲ್ಲಿಂದ ಬೇಕಾದರೂ ಹೋರಾಟ ಮಾಡಲಿ. ಶಿವಮೊಗ್ಗ, ಶಿಕಾರಿಪುರ ಎಲ್ಲಿಂದ ಬೇಕಾದರೂ ಹೋರಾಟ ಮಾಡಲಿ. ಆದರೆ, ಅದಕ್ಕೂ ಮೊದಲು ಸಂಘಟನೆ ಕಟ್ಟಬೇಕಲ್ಲಾ. ಅವರ ಪಕ್ಷ ಎಲ್ಲಿದೆ ಎಂದು ಹುಡುಕಬೇಕಲ್ಲಾ.ಲೋಕಸಭೆಯ 28 ಸ್ಥಾನಗಳಲ್ಲಿ ಒಂದು ಸ್ಥಾನ ಗೆದ್ದಿದ್ದಾರೆ, ಅದನ್ನಾದರೂ ಉಳಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಪುತ್ರನ ಮದುವೆಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಮದುವೆ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳಲು ಕಾನೂನು ಇದೆ. ಅದರಂತೆ ಇರುವುದು ಎಲ್ಲರಿಗೂ ಸೂಕ್ತ ಎಂದರು. ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಮುಂದೆ ಲಾಕ್ ಡೌನ್ ಇಲ್ಲ, ಈ ಬಗ್ಗೆ ಕೇಂದ್ರವೇ ಹೇಳಿದೆ. ನಾವೂ ಕೂಡಾ ತೀರ್ಮಾನಿಸಿದ್ದೇವೆ ಎಂದರು.

Advertisement

ರೈತರಿಗೆ ಸರ್ಕಾರ ಒಂದು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ಆದರೂ ಸಿದ್ದರಾಮಯ್ಯ ಮೈಮೇಲೆ ಜ್ಞಾನವಿಲ್ಲದೇ ಏನು ಬೇಕಾದ್ರೂ ಮಾತನಾಡುತ್ತಾರೆ ಎಂದು ಸರ್ಕಾರದಲ್ಲಿ ಹಣ ಇಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯನವರನ್ನು ಪಕ್ಕಕ್ಕೆ ಸರಿಸಿದ್ದಾಗಿದೆ. ಡಿ.ಕೆ. ಶಿವಕುಮಾರ್ ಅವರನ್ನು ಮುಂದೆ ತಂದಿದ್ದೂ ಆಗಿದೆ. ನಾನು ಜೀವಂತ ಇದ್ದೇನೆ ಎಂಬುದನ್ನ ತೋರಿಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿರೋಧ ಪಕ್ಷದ ನಾಯಕರಾಗಿ ಈ ರೀತಿ ಹೇಳಿಕೆ ಕೊಡಬಾರದು. ಅವರು ಒಂದು ಹೇಳಿಕೆ ಕೊಟ್ಟರೆ, ಮರುದಿನ ಡಿಕೆ ಶಿವಕುಮಾರ್ ಮತ್ತೊಂದು ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯರ ಪ್ರತ್ಯೇಕ ಗುಂಪುಗಳಿವೆ. ಅವು ಅಸ್ಥಿತ್ವದಲ್ಲಿ ಇವೆ ಎಂಬುದನ್ನ ತೋರಿಸಿ, ಸೋನಿಯಾ ಗಾಂಧಿಗೆ ತೃಪ್ತಿ ಪಡಿಸುತ್ತಿದ್ದಾರೆ ಎಂದರು.

ಕೋವಿಡ್-19 ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ವಹಣೆ ಬಗ್ಗೆ ಎಲ್ಲರೂ ಮೆಚ್ಚುತ್ತಿದ್ದಾರೆ. ಬಿಜೆಪಿ ಸರ್ಕಾರದ ಬಗ್ಗೆ ಟೀಕೆ ಮಾಡಲು ಕಾಂಗ್ರೆಸ್ ಗೆ ಏನೂ ಉಳಿದಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಿನ ಮಹತ್ವ ನೀಡಲಾಗಿದೆ. ಜಿಲ್ಲೆಗಳಿಗೆ ಬಿಡುಗಡೆಯಾದ ಯಾವ ಒಂದು ರೂಪಾಯಿ ಹಣವೂ ವಾಪಾಸ್ ಹೋಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next