ಶಿವಮೊಗ್ಗ: ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಗರಂ ಆದ ಸಚಿವ ಕೆ.ಎಸ್.ಈಶ್ವರಪ್ಪ “ಪ್ರಿಂಟ್ ಮಾಡ್ತೀವಾ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ 14 ದಿನ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ನೀವು ಬಾಯಿಗ ಬೀಗ ಹಾಕಿಕೊಂಡರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ. ಅದಾದ ಮೇಲೆ ನಾವು, ನೀವು ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳೋಣ ಎಂದರು.
ಇದನ್ನೂ ಓದಿ:ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ
ರಾಜ್ಯದ ಜನ ಸಾಯುತ್ತದ್ದಾರೆ ಇಂತಹ ವೇಳೆ ಬಾಯಿಗೆ ಬಂದಂಗೆ ಟೀಕೆ ಮಾಡುತ್ತಿದ್ದಾರೆ. ಒಳ್ಳೆಯದಕ್ಕೆ ಒಂದಾದರೂ ಅಭಿನಂದನೆ ಸಲ್ಲಿಸಿದ್ದೀರಾ? ಟೀಕೆ ಮಾಡುವುದಕ್ಕೆ ವಿರೋಧ ಪಕ್ಷ ಇದೆ ಎನ್ನುವಂತಾಗಿದೆ. ರೋಗಿಗಳಿಗೆ ಅನುಕೂಲವಾಗುವ ನಿಟ್ಟನಲ್ಲಿ ಏನಾದರೂ ಸಲಹೆ ನೀಡಿದರೆ ಅದನ್ನು ಮಾಡುತ್ತೇವೆ ಎಂದು ಗುಡುಗಿದರು.
ನೂರು ವರ್ಷದ ನಂತರ ಇಂತಹ ಕಾಯಿಲೆ ಬಂದಿದ್ದು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕೂಡ ನಿರೀಕ್ಷೆ ಮಾಡಿರಲಿಲ್ಲ. ಟೀಕೆ ವಿರೋಧ ಪಕ್ಷದ ಕರ್ತವ್ಯ. ಆದರೆ ಬಾಯಿಗೆ ಬಂದಂಗೆ ಟೀಕೆ ಮಾಡುವುದು ಒಳ್ಳೆಯದಲ್ಲ ಎಂದು ಈಶ್ವರಪ್ಪ ಆಕ್ರೋಶ ಹೊರಹಾಕಿದರು.