Advertisement

ಡಿಕೆಶಿ ಹೇಳಿಕೆ ಪ್ರೇರಣೆಯಿಂದ ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ: ಈಶ್ವರಪ್ಪ ಆರೋಪ

09:51 AM Feb 21, 2022 | Team Udayavani |

ಬೆಂಗಳೂರು: ಧ್ವಜದ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚೋದನಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಪ್ರೇರಣೆ ಪಡೆದು ಮುಸ್ಲಿಂ ಗೂಂಡಾಗಳು ಯುವಕನನ್ನು ಕೊಲೆ ಮಾಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹತ್ಯೆಗೀಡಾದ ಯುವಕನ ಕಾರ್ಯವನ್ನು ನಾವೇ ಮುಂದೆ ನಿಂತು ಮಾಡುತ್ತೇವೆ. ಈಗಾಗಲೇ ಗೃಹ ಸಚಿವರಿಗೆ ಮಾತಾಡಿದ್ದೇನೆ ಎಂದರು.

ಇದನ್ನೂ ಓದಿ:ಕೊಲೆ ಆರೋಪಿಗಳ ಮಾಹಿತಿ ಸಿಕ್ಕಿದೆ, ಕೂಡಲೇ ಬಂಧಿಸುತ್ತೇವೆ: ಶಿವಮೊಗ್ಗದಲ್ಲಿ ಆರಗ ಜ್ಞಾನೇಂದ್ರ

ಶಿವಮೊಗ್ಗದಲ್ಲಿ ಮುಸ್ಲಿಂರು ಬಾಲ ಬಿಚ್ಚಿರಲಿಲ್ಲ. ತುಂಬಾ ಪ್ರಾಮಾಣಿಕ ಸಜ್ಜನ ಕಾರ್ಯಕರ್ತನನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ. ಬಿಜೆಪಿಯವರು ಕೇಸರಿ ಶಾಲ್ ಹಂಚಿದ್ದಾರೆ, ರಾಷ್ಟ್ರ ಧ್ವಜ ತೆಗೆದು ಭಗದ್ವಜ ಹಾರಿಸಿದ್ದಾರೆ ಎಂಬ ಡಿಕೆಶಿ ಹೇಳಿಕೆಯಿಂದ ಕುಮ್ಮಕ್ಕು ಪಡೆದ ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಸಿಎಂಗೆ ಮಾಹಿತಿ: ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೂರವಾಣಿ ಮೂಲಕ ಸಿಎಂಗೆ ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮಗಳು, ಶಾಲಾ ಕಾಲೇಜುಗಳಿಗೆ ರಜೆ ಮತ್ತು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

Advertisement

ಈ ವೇಳೆ ಶಾಂತಿಯುತ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ವಹಿಸುವಂತೆ ಸಿಎಂ ಅರಗ ಜ್ಞಾನೇಂದ್ರಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next