Advertisement
ತಂದೆ ಮತ್ತು ಸಹೋದರರ ಮಾರ್ಗದರ್ಶನ
ತುಮಕೂರಿನಲ್ಲಿ, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿದರು. ತಂದೆ ಕೃಷಿಕರಾಗಿದ್ದು ಬಾಲ್ಯದಲ್ಲಿಯೇ ತಂದೆಯವರ ಮಾರ್ಗದರ್ಶನ ಹಾಗೂ ಉತ್ತೇಜನ ಪಡೆದು ಇವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ , ಸ್ವಾಮಿ ವಿವೇಕಾನಂದ, ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತವನ್ನು ಆದರ್ಶವಾಗಿಟ್ಟು ಕೊಂಡು ಬೆಳೆದರು. ಉಪನ್ಯಾಸಕರಾಗಿ ಸೇವೆ ಪ್ರಾರಂಭ
Related Articles
Advertisement
ಪ್ರಾಂಶುಪಾಲರಾಗಿ ಪದೋನ್ನತಿ
ನವೆಂಬರ್ 21, 2020 ರಲ್ಲಿ ಪ್ರಾಚಾರ್ಯರಾಗಿ ಬಡ್ತಿ ಹೊಂದಿ ಹೊಳವನಹಳ್ಳಿ ಯ ಕೆಪಿಎಸ್ ಶಾಲೆಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.ಈ ಶಾಲೆಯಲ್ಲಿ ಕಲಾ, ವಿಜ್ಞಾನ ವಿಭಾಗದಲ್ಲಿ 205 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಉಪನ್ಯಾಸಕರು, ವಿದ್ಯಾರ್ಥಿಗಳು , ಪೋಷಕರು, ಮತ್ತು ನಾಗರೀಕರಿಗೆಅಚ್ಚು ಮೆಚ್ಚಿನ ಪ್ರಾಚಾರ್ಯರಾಗಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಸಹಕಾರ ಪ್ರೋತ್ಸಾಹ ಮತ್ತು ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಆಡಳಿತಾಧಿಕಾರಿಯಾಗಿದ್ದಾರೆ.
ವಿಶೇಷ ಕರ್ತವ್ಯ ನಿರ್ವಹಿಸಿದ ಜವಾಬ್ದಾರಿ
ಪ್ರಥಮ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ಮೌಲ್ಯಮಾಪಕರಾಗಿ ವೃತ್ತಿ ಪರ ಕೊರ್ಸ್ ಗಳಿಗೆ ನಡೆಸುವ ಸಿಇಟಿ ಪ್ರಶ್ನೆ ಪತ್ರಿಕೆ ಮತ್ತು ಇಲಾಖಾ ಪರೀಕ್ಷೆಯ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಕೆ.ಎಸ್. ಈರಣ್ಣ ಸರ್ ನಮಗೆ ಕೆಮಿಸ್ಟ್ರಿಮಾಸ್ಟರ್ ಎಂದೇ ಹೆಸರುವಾಸಿಯಾಗಿದ್ದಾರೆ. ಇವರು ನಮ್ಮತಲೆಯಲ್ಲಿ ರಸಾಯನಶಾಸ್ತ್ರದ ಪಾರ್ಮುಲಾ ಮತ್ತು ರಾಸಾಯನಿಕ ಸಮೀಕರಣಗಳನ್ನು ಚೆನ್ನಾಗಿ ಅಭ್ಯಾಸ ಮಾಡಿಸಿದ್ದಾರೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಮಕ್ಕಳ ಮಟ್ಟಕ್ಕೆ ಇಳಿದು ಥಿಯರಿ ಮತ್ತು ಪ್ರಾಕ್ಟಿಕಲ್ಸ್ ನ ಉತ್ತಮ ಉಪನ್ಯಾಸ ಮಾಡುತ್ತಿದ್ದರು. ಪರೀಕ್ಷೆಯನ್ನು ಹೇಗೆ ಎದುರಿಸಬೇಕು?ಜೀವನದಲ್ಲಿ ಬದುಕನ್ನು ಹೇಗೆ ಕಟ್ಟಿ ಕೊಳ್ಳಬೇಕು? ಎಂದು ಗ್ರಾಮೀಣ ನಮ್ಮಂತ ಬಡ ಅನೇಕ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಕೆಮಿಸ್ಟ್ರಿಯೇ ಮಾತ್ರ ಅಲ್ಲದೆ ಅವರ ಹೇಳಿಕೊಟ್ಟ ಪಾಠಗಳು ನಮ್ಮ ಜೀವನದಲ್ಲೂ ಅನೇಕ ಬದಲಾವಣೆಗಳನ್ನು ತಂದಿವೆ
ಡಾ. ವಾಣಿಶ್ರೀ ಎಂಬಿಬಿಎಸ್ ಡಿಎ..ಡಿಎನ್ ಬಿ ಅನಸ್ಥೇಶಿಯಾ ವಿಭಾಗ
ಕೆಎಸ್ .ಈರಣ್ಣ ಒಬ್ಬ ಉತ್ತಮ ಕ್ರೀಯಾಶೀಲಾ ವ್ಯಕ್ತಿ ಮತ್ತು ಉತ್ತಮ ಆಡಳಿತಗಾರರು ಹೌದು.ಇಲಾಖೆಯ ಯಾವುದೇ ಕೆಲಸ ಮತ್ತು ಪಿಯು ಬೋರ್ಡಿನ ಮೌಲ್ಯಮಾಪನ ಕಾರ್ಯದ ವಿವಿಧ ಶೇಣಿಯ ಹುದ್ದೆಗಳಲ್ಲಿ ಕೆಲಸ ಚಾಚು ತಪ್ಪದೇ ನಿರ್ವಹಿಸಿದ ಜವಾಬ್ದಾರಿ ಇವರದ್ದಾಗಿದೆ. ಗಂಗಾಧರ್, ಪಿಯು ಇಲಾಖೆಯ ಉಪ ನಿರ್ದೇಶಕರು ತುಮಕೂರು ಪ್ರಾಚಾರ್ಯ ಕೆಎಸ್ ಈರಣ್ಣ ಒಬ್ಬ ಸರಳ ಸಜ್ಜನ ವ್ಯಕ್ತಿ. ಇವರು ಒಬ್ಬ ಸಂಘಟನಾ ಮನೋಭಾವನೆಯುಳ್ಳ ವೃತ್ತಿ ಗೌರವ ಸಂಪಾದಿಸಿಕೊಂಡು, ಪ್ರಾಚಾರ್ಯರ ಸಂಘದಲ್ಲಿ ಸಕ್ರೀಯ ಪಾತ್ರ ಇವರದ್ದಾಗಿದೆ. ಲಿಂಗದೇವರು, ಪ್ರಾಚಾರ್ಯರು,ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ, ತುಮಕೂರು ಸುಮಾರು 30 ವರ್ಷಗಳಿಂದ ಅತ್ಯುತ್ತಮ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಅಪಾರ ಭೋದನಾ ಅನುಭವ ಹೊಂದಿರುವ ವ್ಯಕ್ತಿಯಾಗಿದ್ದಾರೆ. ನಮ್ಮ ಕಾಲೇಜಿಗೆ ಪ್ರಾಚಾರ್ಯರಾಗಿ ಬಡ್ತಿ ಪಡೆದು ಬಂದಿದ್ದಾರೆ. ಇವರು ತರಗತಿಯಲ್ಲಿ ಉತ್ತಮ ಉಪನ್ಯಾಸ ನೀಡುವಲ್ಲಿ ಮತ್ತು ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿನ ಮೈದಾನದಲ್ಲಿ ತಾಪಂನಿಂದ ನರೇಗಾದಲ್ಲಿ 9ಲಕ್ಷ ವೆಚ್ಚದ ಬ್ಯಾಸ್ಕೆಟ್ ಬಾಲ್ ಅಂಕಣವನ್ನು ಪ್ರಾರಂಭಿಸಲು ಇವರ ಶ್ರಮ ಅಪಾರವಾಗಿದೆ. ರುದ್ರೇಶ್ ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದರಾಜು.ಕೆ ಕೊರಟಗೆರೆ