Advertisement

ಎರಡನೇ ಬಾರಿಗೆ ನೇಪಾಲ ಪ್ರಧಾನಿಯಾಗಿ ಕೆ ಪಿ ಶರ್ಮಾ ಓಲಿ

03:49 PM Feb 15, 2018 | udayavani editorial |

ಕಾಠ್ಮಂಡು : ಕೆ ಪಿ ಶರ್ಮಾ ಓಲಿ ಅವರಿಂದು ಎರಡನೇ ಬಾರಿಗೆ ನೇಪಾಲ ಪ್ರಧಾನಿಯಾದರು.

Advertisement

ಎರಡು ತಿಂಗಳ ಹಿಂದಷ್ಟೇ ಅವರ ಎಡ ಮೈತ್ರಿ ಕೂಟ ಮಾಜಿ ಮಾವೋ ಬಂಡುಕೋರರೊಂದಿಗೆ  ದೇಶದ ಐತಿಹಾಸಿಕ ಸಂಸದೀಯ ಚುನಾವಣೆಗಳಲ್ಲಿ ಪ್ರಚಂಡ ವಿಜಯ ಸಾಧಿಸಿತ್ತು. ಆ ಮೂಲಕ ನೇಪಾಲದಲ್ಲಿ ರಾಜಕೀಯ ಸ್ಥಿರತೆಯ ಆಶಾಕಿರಣ ತೋರಿಬಂದಿತ್ತು. 

ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರು 65ರ ಹರೆಯದ ಓಲಿ ಅವರನ್ನು ದೇಶದ 41ನೇ ಪ್ರಧಾನಿಯಾಗಿ ನೇಮಕ ಮಾಡಿದರು. 

ಚೀನ ಪರ ನಿಲುವು ಹೊಂದಿರುವವರು ಎಂದು ತಿಳಿಯಲಾಗಿರುವ ಓಲಿ ಅವರು ದೇಶದ ಪ್ರಧಾನಿಯಾಗಿ ಈ ಹಿಂದೆ 2015ರ ಅ.11ರಿಂದ 2016ರ ಆಗಸ್ಟ್‌ 3ರ ವರೆಗೆ ಸೇವೆ ಸಲ್ಲಿಸಿದ್ದರು. 

ಪ್ರಧಾನಿ ಪಟ್ಟಕ್ಕೆ ಓಲಿ ಅವರನ್ನು ಯುಸಿಪಿಎನ್‌-ಮಾವೋವಾದಿ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ನೇಪಾಲ, ಮತ್ತು ಮಾಧೇಶಿ ಹಕ್ಕುಗಳ ವೇದಿಕೆ – ಡೆಮೋಕ್ರಾಟಿಕ್‌ ಹಾಗೂ ಇತರ 13 ಸಣ್ಣ ಪಕ್ಷಗಳು ಬೆಂಬಲಿಸಿದ್ದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next