Advertisement

ರೋಹಿತ್‌, ಕೊಹ್ಲಿ ಸಾಲಿಗೆ ಸೇರಿದ ಕೆ.ಎಲ್‌.ರಾಹುಲ್‌

04:41 PM Feb 01, 2020 | keerthan |

ವೆಲ್ಲಿಂಗ್ಟನ್: ಕಳೆದೊಂದು ವರ್ಷದಿಂದ ಶ್ರೇಷ್ಠ ಫಾರ್ಮ್ ಪ್ರದರ್ಶಿಸಿಕೊಂಡು ಬರುತ್ತಿರುವ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ನ್ಯೂಜಿಲೆಂಡ್‌ ವಿರುದ್ಧದ 4ನೇ ಟಿ20 ಪಂದ್ಯದ ವೇಳೆ ಹೊಸ ದಾಖಲೆ ಬರೆದಿದ್ದಾರೆ.

Advertisement

ಕೆ.ಎಲ್‌.ರಾಹುಲ್‌ ಒಟ್ಟಾರೆ ಟಿ20 ಕ್ರಿಕೆಟ್‌ ನಲ್ಲಿ 4 ಸಾವಿರ ರನ್‌ ಗಡಿ ದಾಟಿದ ಸಾಧನೆ ಮಾಡಿದ್ದಾರೆ.

ಐಪಿಎಲ್‌ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಸೇರಿ ಕೆ.ಎಲ್‌.ರಾಹುಲ್‌ ಅವರಿಂದ ಇಂತಹದ್ದೊಂದು ಮೈಲುಗಲ್ಲು ನಿರ್ಮಾಣವಾಗಿದೆ. ಈ ಸಾಧನೆ ಮೂಲಕ ನಾಯಕ ವಿರಾಟ್‌ ಕೊಹ್ಲಿ, ಸ್ಫೋಟಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ ಜತೆಗಿನ ಕ್ಲಬ್‌ ಸೇರಿದ್ದಾರೆ.

ವೆಲ್ಲಿಂಗ್ಟನ್ ಪಂದ್ಯದಲ್ಲಿ ರಾಹುಲ್ 39 ರನ್ ಗಳಿಸಿದ್ದರು. ನಂತರ ಸೂಪರ್ ಓವರ್ ನಲ್ಲಿ ಮೂರು ಎಸೆತಗಳಿಂದ ಉಪಯುಕ್ತ 10 ರನ್ ಗಳಸಿದ್ದರು.

ರೋಚಕ ಸೂಪರ್ ಓವರ್ ನಲ್ಲಿ ವೆಲ್ಲಿಂಗ್ಟನ್ ಪಂದ್ಯವನ್ನು ಗೆದ್ದ ಭಾರತ ಸರಣಿಯಲ್ಲಿ 4-0 ಅಂತರದಿಂದ ಮುನ್ನಡೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next