Advertisement
ತನಗೆ ಹಾಗೂ ತಂಡಕ್ಕೆ ವಿಧಿಸಲಾಗಿರುವ ದೊಡ್ಡ ಮೊತ್ತದ ದಂಡವನ್ನು ಕಟ್ಟಲಿಕ್ಕಾದರೂ ಲಕ್ನೋ ಐಪಿಎಲ್ ಚಾಂಪಿಯನ್ ಆಗಬೇಕಿದೆ ಎಂದು ತಮಾಷೆ ಹಾಗೂ ಅಷ್ಟೇ ಮಾರ್ಮಿಕವಾಗಿ ನುಡಿದಿದ್ದಾರೆ.
“ಸಂದರ್ಭಕ್ಕೆ ತಕ್ಕ ಪ್ರದರ್ಶನ ನೀಡುವುದು ನನ್ನ ಗೇಮ್‌ಪ್ಲ್ರಾನ್‌ಗಳಲ್ಲೊಂದು. ಹಾಗೆಯೇ ನನಗೆ ನೀಡಲಾದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಬೇಕಿದೆ. ಪಿಚ್ ಪರಿಸ್ಥಿತಿಯನ್ನು ಗಮನಿಸಿ ಅದಕ್ಕೆ ತಕ್ಕ ಬ್ಯಾಟಿಂಗ್ ನಡೆಸಿದೆ. ನನ್ನ ಕೊಡುಗೆಯನ್ನು ನಾನು ಸಲ್ಲಿಸಿದ್ದೇನೆ. ಕೊನೆಯ ತನಕವೂ ನಮ್ಮ ಬ್ಯಾಟಿಂಗ್ ವಿಸ್ತರಿಸಲ್ಪಟ್ಟಿರುವುದರಿಂದ ಯಾವುದೇ ಒತ್ತಡವಿಲ್ಲದಂತೆ ಆಡಬಹುದಾಗಿದೆ’ ಎಂದು ರಾಹುಲ್ ಹೇಳಿದರು.
Related Articles
ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯವನ್ನು ಲಕ್ನೋ 36 ರನ್ನುಗಳಿಂದ ಜಯಿಸಿತು. ಇದು 8 ಪಂದ್ಯಗಳಲ್ಲಿ ರಾಹುಲ್ ಪಡೆಗೆ ಒಲಿದ 5ನೇ ಜಯ. ನಾಯಕ ಕೆ.ಎಲ್. ರಾಹುಲ್ ಅವರ ಮತ್ತೂಂದು ಶತಕ ಈ ಪಂದ್ಯದ ಆಕರ್ಷಣೆಯಾಗಿತ್ತು (ಅಜೇಯ 103). ಆದರೆ ಇವರದು ಏಕಾಂಗಿ ಹೋರಾಟವಾಗಿತ್ತು. ಹೀಗಾಗಿ ಮೊತ್ತ 6 ವಿಕೆಟಿಗೆ 168ಕ್ಕೆ ನಿಂತಿತು.
Advertisement
ಮುಂಬೈಗೆ ಇದೇನೂ ಅಸಾಧ್ಯ ಸವಾಲಾಗಿರಲಿಲ್ಲ. ಆದರೆ ಸೋಲಿನ ಸುಳಿಯಲ್ಲಿ ಮುಳುಗಿರುವ ರೋಹಿತ್ ಪಡೆಗೆ ಈ ಮೊತ್ತವೂ ಕಠಿನವಾಗಿ ಪರಿಣಮಿಸಿತು. 8 ವಿಕೆಟಿಗೆ ಕೇವಲ 132 ರನ್ ಗಳಿಸಿ ಸತತ 8ನೇ ಸೋಲನುಭವಿಸಿತು. ಕೂಟದಿಂದ ನಿರ್ಗಮಿಸಿತು. ಐಪಿಎಲ್ ಇತಿಹಾಸದಲ್ಲಿ ಒಂದೂ ಪಂದ್ಯ ಗೆಲ್ಲದೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಸಂಕಟ ಮುಂಬೈ ತಂಡದ್ದಾಯಿತು!