Advertisement

ಕೃಷಿ ಸೌಲಭ್ಯಕ್ಕಾಗಿ ಕೆ-ಕಿಸಾನ್‌ ನೋಂದಣಿ ಕಡ್ಡಾಯ

02:22 AM May 28, 2019 | sudhir |

ಕೋಟ: ರಾಜ್ಯದ ರೈತರು ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆಯುವುದಕ್ಕೆ ಕೆ-ಕಿಸಾನ್‌ ತಂತ್ರಾಂಶ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವುದನ್ನು ಈ ಮುಂಗಾರಿನಿಂದ ಕಡ್ಡಾಯಗೊಳಿಸಿದೆ. ಯೋಜನೆಪಾರದರ್ಶಕವಾಗಿ ರೈತರ ಕೈಸೇರುವುದು ಇದರ ಉದ್ದೇಶ.

Advertisement

ಪದೇಪದೇ ದಾಖಲೆ ನೀಡುವುದರಿಂದ ಮುಕ್ತಿ, ಇಲಾಖೆಯಸೌಲಭ್ಯವಿತರಣೆಯಲ್ಲಿ ತಾರತಮ್ಯ ನಿವಾರಣೆ, ದುರ್ಬಳಕೆ ತಡೆ ಇದರಿಂದ ಸಾಧ್ಯವಾಗಲಿದೆ. ಹಾಗೆಂದು ಇದು ಹೊಸದಲ್ಲ. ಸಮಗ್ರ ರೈತ ಮಾಹಿತಿ ಸಂಗ್ರಹವನ್ನೊಳಗೊಂಡ ಈ ತಂತ್ರಾಂಶ ಯೋಜನೆಯನ್ನು ಇಲಾಖೆ ನಾಲ್ಕೈದು ವರ್ಷಗಳ ಹಿಂದೆಜಾರಿಗೊಳಿಸಿತ್ತು. ಆದರೆ ಸಮರ್ಪಕವಾಗಿ ಜಾರಿಗೊಂಡಿರಲಿಲ್ಲ.

ಏನಿದು ಕೆ-ಕಿಸಾನ್‌?

ಕರ್ನಾಟಕ ಕೃಷಿ ಮಾಹಿತಿ ಮತ್ತು ಅಂತರ್ಜಾಲ ತಾಣ ಯೋಜನೆ (ಕೆ-ಕಿಸಾನ್‌) ಯಡಿ ತಂತ್ರಾಂಶ ರೂಪುಗೊಳಿಸಲಾಗಿದೆ. ಇದರಲ್ಲಿ ರೈತ ಕುಟುಂಬದ ಸದಸ್ಯರ ಹೆಸರು, ಬೆಳೆಮಾಹಿತಿ, ಭೂಮಿ, ಆಧಾರ್‌ ನಂಬರ್‌,ಬ್ಯಾಂಕ್‌ ಖಾತೆ ಸಂಖ್ಯೆ, ಮಣ್ಣಿನ ಗುಣಮಟ್ಟ ಮುಂತಾದ ಮಾಹಿತಿ ಕಲೆ ಹಾಕಿ ಅಪ್‌ಲೋಡ್‌ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಪ್ರತಿ ರೈತನಹೆಸರಿಗೆ ಒಂದು ಯುನೀಕ್‌ ಐಡಿ ಕಾರ್ಡ್‌ ಕೊಡಲಾಗುತ್ತದೆ. ಕೃಷಿ ಇಲಾಖೆಯ ಯಾವುದೇ ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್‌ ಅಗತ್ಯ.

ನೋಂದಣಿ ಹೀಗೆ

Advertisement

ಜಮೀನಿನ ಆರ್‌ಟಿಸಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕದ ಜೆರಾಕ್ಸ್‌, ಖಾತೆದಾರನ ಫೋಟೋ ಇವಿಷ್ಟನ್ನು ರೈತಸಂಪರ್ಕ ಕೇಂದ್ರಕ್ಕೆ ನೀಡಿ ಕೆ-ಕಿಸಾನ್‌ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬಹುದು. ಪ. ಜಾತಿ ಮತ್ತು ಪ.ಪಂಗಡದವರಿಗೆ ಜಾತಿ ಪ್ರಮಾಣ ಪತ್ರ ಅಗತ್ಯ.

ಪ್ರಯೋಜನವೇನು?

ಒಮ್ಮೆ ನೋಂದಾಯಿಸಿಕೊಂಡರೆ ವಿವಿಧ ಯೋಜನೆಗಳಿಗೆ ರೈತರು ಪದೇಪದೇ ದಾಖಲೆ ಕೊಡುವ ಅಗತ್ಯವಿಲ್ಲ. ಆಧಾರ್‌ ಅಥವಾ ಯುನೀಕ್‌ ಐಡಿ ನಮೂದಿಸಿದರೆ ಸಾಕು. ಇದರಿಂದ ತಾರತಮ್ಯ, ದುರ್ಬಳಕೆ ತಡೆಯಬಹುದು.

ಸ್ಥಳದಲ್ಲೇ ನೋಂದಣಿ

ನೋಂದಣಿ ಕಡ್ಡಾಯವಾಗಿದ್ದು, ಮುಂಗಾರು ಕೃಷಿ ಸಲಕರಣೆಗಳನ್ನು ಖರೀದಿಸುವ ರೈತರಿಗೆ ಸಮಸ್ಯೆ ಆಗಬಾರದು ಎಂದು ಕೃಷಿಕೇಂದ್ರಕ್ಕೆ ಆಗಮಿಸುವ ಸಂದರ್ಭದಲ್ಲೇ ದಾಖಲೆನೀಡಿದರೆ ನೋಂದಣಿ ವ್ಯವಸ್ಥೆ ಮಾಡಲಾಗುತ್ತಿದೆ.

ಸಮಾನ ಹಂಚಿಕೆ ಪದ್ಧತಿ

ರೈತನು ಜಂಟಿ ಖಾತೆ ಹೊಂದಿದ್ದರೂ ಸಮಸ್ಯೆ ಇಲ್ಲ. ಉದಾಹರಣೆಗೆ, ಒಂದು ಎಕರೆ ಜಮೀನಿನಲ್ಲಿ ಐದು ಮಂದಿ ಜಂಟಿ ಖಾತೆ ಹೊಂದಿದ್ದರೆ ಆ ಐವರಿಗೂ ಸಮಾನ ಹಂಚಿಕೆ ರೂಪದಲ್ಲಿ ತಲಾ 20 ಸೆಂಟ್ಸ್‌ ನಮೂದಾಗುತ್ತದೆ. ಇದಕ್ಕೆ ಅನುಗುಣವಾದ ಸೌಲಭ್ಯಗಳನ್ನು ಪಡೆಯಬಹುದು. ಐವರಲ್ಲಿ ಯಾರಾದರೂ ತನಗೆ ನೋಂದಣಿ ಅಗತ್ಯವಿಲ್ಲ ಎಂದು ಲಿಖೀತವಾಗಿ ತಿಳಿಸಿದಲ್ಲಿ ಮಿಕ್ಕುಳಿದವರಿಗೆ ಹೆಚ್ಚುವರಿ ಸೌಲಭ್ಯ ಸಿಗುತ್ತದೆ. ಖಾತೆದಾರರು ಸಾವನ್ನಪ್ಪಿದ್ದರೆ ಸಮಸ್ಯೆ ಆರ್‌ಟಿಸಿ ಹೊಂದಿರುವ ಖಾತೆದಾರ ಸಾವನ್ನಪ್ಪಿದ್ದರೆ ಖಾತೆ ಬದಲಾಗುವ ತನಕ ಕುಟುಂಬ ಸದಸ್ಯರ ಹೆಸರು ನೋಂದಣಿ ಸಾಧ್ಯವಿಲ್ಲ. ಇದರಿಂದ ಆ ಕುಟುಂಬ ಸೌಲಭ್ಯದಿಂದ ವಂಚಿತವಾಗುತ್ತದೆ.
ಗೊಂದಲ ಬೇಡ

ಇಲಾಖೆಯ ಯೋಜನೆ ಸಮರ್ಪಕವಾಗಿ, ಪಾರದರ್ಶಕವಾಗಿ ಹಂಚಿಕೆಯಾಗಲು ಮತ್ತು ಪದೇಪದೇ ದಾಖಲೆಗಳನ್ನು ನೀಡುವುದರಿಂದ ಮುಕ್ತಿ ನೀಡಲು ಕೆ-ಕಿಸಾನ್‌ ಯೋಜನೆ ಕಡ್ಡಾಯಗೊಳಿಸಲಾಗಿದೆ. ಖಾತೆದಾರ ಸಾವನ್ನಪ್ಪಿದ ಸಂದರ್ಭ ವಿನಾ ಬೇರೆ ಯಾವುದೇ ಕಾರಣದಿಂದ ಸಮಸ್ಯೆ ಇಲ್ಲ. ಆದ್ದರಿಂದ ಈ ಕುರಿತು ಗೊಂದಲ ಬೇಡ.
– ಕೆಂಪೇಗೌಡ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ ಜಿಲ್ಲೆ
– ರಾಜೇಶ್‌ ಗಾಣಿಗ ಅಚ್ಲಾಡಿ
Advertisement

Udayavani is now on Telegram. Click here to join our channel and stay updated with the latest news.

Next