Advertisement

ಚಾಮರಾಜನಗರ: ಕೆ.ಗುಡಿ ಸಫಾರಿಯಲ್ಲಿ ಹುಲಿ ದರ್ಶನ…ಗಾಯಗೊಂಡಿರುವ ಶಂಕೆ

08:40 PM Jan 04, 2023 | Team Udayavani |

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯದ ಕೆ. ಗುಡಿ ವಲಯದಲ್ಲಿ ಸಫಾರಿಗೆಂದು ತೆರಳಿದ್ದ ಪ್ರವಾಸಿಗರಿಗೆ ಬುಧವಾರ ಬೆಳಿಗ್ಗೆ ಹುಲಿ ದರ್ಶನವಾಗಿದೆ.

Advertisement

ಸಫಾರಿಗೆಂದು ತೆರಳಿದವರು ಹುಲಿಯ ಛಾಯಾಚಿತ್ರವನ್ನು ತೆಗೆದಿದ್ದು ಈ ಛಾಯಾಚಿತ್ರದ ಆಧಾರದ ಮೇಲೆ ಹುಲಿಯ ಗುದಭಾಗದಲ್ಲಿ ಗಾಯವಾಗಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಹುಲಿ ಯೋಜನೆ ನಿರ್ದೇಶಕಿ ದೀಪ್ ಕಂಟ್ರಾಕ್ಟರ್ ಅವರನ್ನು ಉದಯವಾಣಿ ಸಂಪರ್ಕಿಸಿದಾಗ, ಫೋಟೋವನ್ನು ಪಶುವೈದ್ಯರು ಪರಿಶೀಲಿಸಿದ್ದಾರೆ. ಕೆಲವೊಮ್ಮೆ ಆರೋಗ್ಯವಂತ ಯುವ ಹುಲಿಗಳಲ್ಲಿ ಇದು ಸಾಮಾನ್ಯ ಎಂದಿದ್ದಾರೆ. ಆದರೂ ಇದನ್ನು ಪರಿಶೀಲಿಸುವ ಸಲುವಾಗಿ ಗುರುವಾರ ಸಫಾರಿ ರದ್ದುಗೊಳಿಸಿ, ಹುಲಿ ಇದ್ದ ಪ್ರದೇಶವನ್ನು ತಪಾಸಣೆ ಮಾಡಿ, ಹುಲಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ. ನಂತರವಷ್ಟೇ ಇದು ಖಚಿತವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ : ಕೃಷ್ಣಗಿರಿ ಕಾಲೋನಿಯಲ್ಲಿ ಭೀತಿ ಹುಟ್ಟಿಸಿದ್ದ ಹಾವು… ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ

Advertisement

Udayavani is now on Telegram. Click here to join our channel and stay updated with the latest news.

Next