Advertisement

ನಗರ ನಿವಾಸಿಗಳಿಗೆ 20 ಸಾವಿರ ಮನೆ

06:40 PM Oct 03, 2019 | Team Udayavani |

ಕೆಜಿಎಫ್: ನಗರಗಳಲ್ಲಿ ವಾಸಿಸುವ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಸೂರು ಕಲ್ಪಿಸುವ ವಿವಿಧ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

Advertisement

ನಗರಸಭೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ನಿವಾಸಿಗಳಿಗೆ 20 ಸಾವಿರ ಮನೆ ನಿರ್ಮಿಸಿ ಕೊಡುವ ಯೋಜನೆ ಇದೆ. ಒಂದು ಮನೆಗೆ 6 ಲಕ್ಷ ರೂ. ವೆಚ್ಚವಾಗುತ್ತದೆ. ಹೆಚ್ಚಿನ ಹಣವನ್ನು ಫ‌ಲಾನುಭವಿಗಳೇ ಭರಿಸಬೇಕಾಗುತ್ತದೆ. ಇದಕ್ಕಾಗಿ 70 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಸರ್ಕಾರಕ್ಕೆ ಮಂಜೂರಾತಿಗೆ ಕಳಿಸಲಾಗಿದೆ ಎಂದರು.

ಸಣ್ಣ ಉದ್ಯೋಗದಲ್ಲಿರುವವರು ಸ್ವಂತ ಮನೆಗಳನ್ನು ಕಟ್ಟಿಕೊಳ್ಳುವ ಕನಸು ಕನಸಾಗಿಯೇ ಉಳಿಯಬಾರದು. ಬಾಡಿಗೆ ಮನೆಯಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿರುವವರು, ತಮ್ಮ ಸ್ವಂತ ಮನೆಯಲ್ಲಿ ವಾಸ ಮಾಡಬೇಕು. ಅವರು ವಾಸ ಮಾಡುವ ಬಡಾವಣೆ ಕೂಡ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿರುತ್ತದೆ.

ಒಳಚರಂಡಿ ವ್ಯವಸ್ಥೆ, ನೀರು, ಬೀದಿ ದೀಪ ಮೊದಲಾದ ಸೌಲಭ್ಯಗಳು ಸಿಗುತ್ತವೆ. ರಾಜೇಶ್‌ ಕ್ಯಾಂಪ್‌ ಬಳಿ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಹಿಂದಿನ ಹತ್ತು ವರ್ಷಗಳಲ್ಲಿ ಜನ ಬಹಳಷ್ಟು ನೊಂದಿದ್ದಾರೆ. ಅವರನ್ನು ದಾರಿ ತಪ್ಪಿಸಲಾಗಿತ್ತು. ಮನೆಗಳನ್ನುನೀಡುವ ವಿಚಾರದಲ್ಲಿ ಗೊಂದಲ ಉಂಟು ಮಾಡಲಾಗಿತ್ತು. ಈಗ ಎಲ್ಲವೂ ಪಾರದರ್ಶಕತೆಯಿಂದ ನಡೆಯುತ್ತದೆ.

ಫ‌ಲಾನುಭವಿಗಳಿಗೆ ಅರ್ಜಿ ವಿತರಣೆ ಮಾಡಲಾಗುವುದು. 2 ತಿಂಗಳ ಕಾಲ ಅರ್ಜಿ ಪಡೆಯಲು ಅವಕಾಶ ಇರುತ್ತದೆ ಎಂದರು. ಪೌರಾಯುಕ್ತ ಸಿ.ರಾಜು ಮಾತನಾಡಿ, ಎಲ್ಲಾ ವಾರ್ಡ್‌ಗಳಲ್ಲಿ ಇ-ಖಾತೆ ಮಾಡಿಸಲು ಕ್ಯಾಂಪ್‌ ಮಾಡಲಾಗುವುದು. ಸ್ಥಳ ಪರಿಶೀಲನೆ ಮಾಡಿದ ನಂತರವೇ ಖಾತೆ ಮಾಡಲಾಗುವುದು. ಹಿಂದೆ ಸಾಕಷ್ಟು ಬೇಜವಾಬ್ದಾರಿ ಕೆಲಸಗಳು ನಡೆದಿವೆ. ಇನ್ನು ಮುಂದೆ ಅಂತಹ ವ್ಯವಸ್ಥೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದರು. ಪ್ಲಾಸ್ಟಿಕ್‌ ಮುಕ್ತ ನಗರ ಸಂಕಲ್ಪ ಮಾಡುವ ಪ್ರತಿಜ್ಞೆ ತೆಗೆದುಕೊಳ್ಳಲಾಯಿತು. ಅರಿವು ಜಾಥಾ ನಡೆಸಲಾಯಿತು. ಗಿಡಗಳನ್ನು ನೆಡಲಾಯಿತು.

Advertisement

ಸ್ವಚ್ಚ ಭಾರತ್‌ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಶಶಿಕುಮಾರ್‌ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next