Advertisement

ಜಿಂದಾಲ್ ಭೂಮಿ ಪರಭಾರೆ ತಡೆ ನೀಡಿರುವುದು ಸರಿಯಲ್ಲ: ಕೆ.ಸಿ.ಕೊಂಡಯ್ಯ

01:03 PM Jun 03, 2021 | Team Udayavani |

ಬಳ್ಳಾರಿ: ಜಿಂದಾಲ್ 3667 ಎಕರೆ ಭೂಮಿಯನ್ನು ಪರಭಾರೆಗೆ ತಡೆ ನೀಡಿರುವುದು ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.

Advertisement

ಚೇಂಬರ್ ಆಫ್ ಕಾಮರ್ಸ್ ಜೊತೆ ಜಂಟಿ ಸುದ್ಧಿಗೋಷ್ಠಿ ನಡೆಸಿದ ಅವರು ಜಿಂದಾಲ್ ಪರ ಬ್ಯಾಟ್ ಬೀಸಿದರು.

ಲೀಜ್ ಕಮ್ ಸೇಲ್ ಮಾಡೋ ಬಗ್ಗೆ ಈ ಹಿಂದೆಯೇ ಸರ್ಕಾರ ನಿಯಮಗಳನ್ನು ರೂಪಿಸಿದೆ. ಅಗ್ರಿಮೆಂಟ್ ಪ್ರಕಾರ ನಡೆದುಕೊಳ್ಳಬೇಕು. ಈ ಹಿಂದೆಯೂ ಈ ರೀತಿ ಪರಭಾರೆ ಮಾಡಿಕೊಟ್ಟಿದೆ. ಯಾರದೋ ಮಾತಿಗೆ ಮಣಿದು ಪರಭಾರೆ ‌ಮಾಡದೆ ಇರುವುದು ಸರಿಯಲ್ಲ ಎಂದು ಸಚಿವ ಆನಂದ ಸಿಂಗ್ ಗೆ ಕುಟುಕಿದರು.

ಇದನ್ನೂ ಓದಿ:ಎಸ್‌ಎಸ್‌ಸಿ ಫಲಿತಾಂಶ ಗೊಂದಲ ಮಧ್ಯೆ 11ನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭ

ಪರಭಾರೆ ವಿಚಾರದಲ್ಲಿ ವಿನಾಕಾರಣ ಗೊಂದಲ ಮತ್ತು ರಾಜಕೀಯ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಯವರು ಈ ಬಗ್ಗೆ ‌ಮಾತನಾಡುತ್ತಾರೆ ಎಂದು ಹೆಚ್.ಕೆ. ಪಾಟೀಲ್ ಹೆಸರು ಹೇಳದೇ ಕೊಂಡಯ್ಯ ಟಾಂಗ್ ಕೊಟ್ಟರು.

Advertisement

ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ‌ಜಿಂದಾಲ್ ಮೇಲೆ ಎರಡು ಲಕ್ಷ ಜನರು ಅವಲಂಭಿತರಾಗಿದ್ದಾರೆ. ಕೋವಿಡ್ ಸಮಯದಲ್ಲಿ ಆಕ್ಸಿಜನ್ ನೀಡಿದ್ದಾರೆ. ಸಾವಿನ ಸಂಖ್ಯೆ ಕಡಿಮೆ ಮಾಡಿದ್ದಾರೆ. ಕಾಲಕಾಲಕ್ಕೆ ಎಲ್ಲ ಸರ್ಕಾರಗಳು ಜಿಂದಾಲ್ ಸೇರಿದಂತೆ ಇತರೆ ಇಂಡಸ್ಟ್ರಿಗಳಿಗೆ ಈ ರೀತಿ ಲೀಜ್ ಕಂ ಸೇಲ್ ಕೊಟ್ಟಿದ್ದಾರೆ. ಜಿಂದಾಲ್ ನವರು ಕಾನೂನು ಹೋರಾಟ ಮಾಡಿದರೆ ಸರ್ಕಾರ  ಮುಜುಗರ ಅನುಭವಿಸಬೇಕಾಗುತ್ತದೆ. ಸರ್ಕಾರದ ವಿರುದ್ಧ ನಾನೇ ಕೋರ್ಟ್ ಗೆ ಪಿಐಎಲ್ ಮೊರೆ ಹೋಗುವೆ  ಎಂದು ಕೊಂಡಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next