Advertisement

ಜ್ಯೋತಿರಾಧಿತ್ಯ ಸಿಂಧ್ಯಾಗೆ ಹಂದಿಜ್ವರವಂತೆ! ಮಧ್ಯಪ್ರದೇಶ ರಾಜಕೀಯ ಪ್ರಹಸನದಲ್ಲಿ ಹೊಸ ತಿರುವು

09:05 AM Mar 11, 2020 | keerthan |

ಭೋಪಾಲ್: ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ಸರಕಾರದ 18 ಶಾಸಕರು ಬೆಂಗಳೂರಿನ ಹೋಟೇಲ್ ನಲ್ಲಿ ತಂಗಿದ್ದಾರೆ. ಸೋಮವಾರ ತಡರಾತ್ರಿಯ ಬೆಳವಣಿಗೆಯಲ್ಲಿ ಕಮಲ್ ನಾಥ್ ಸಂಪುಟದ 16 ಮಂದಿ ಸಚಿವರು ರಾಜೀನಾಮೆ ನೀಡಿ ಸರಕಾರ ಉಳಿಸುವ ಪ್ರಯತ್ನ ಮಾಡಿದ್ದಾರೆ.

Advertisement

ಸದ್ಯ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರ ಮುಂದಾಳತ್ವ ವಹಿಸಿರುವ ಯುವ ನಾಯಕತ್ವ ವಹಿಸಿರುವ ಜ್ಯೋತಿರಾಧಿತ್ಯ ಸಿಂಧ್ಯಾ ಹಂದಿಜ್ವರದಿಂದ ಬಳಲುತ್ತಿದ್ದಾರಂತೆ. ಹೀಗೆಂದವರು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್.

ಕಳೆದ ರಾತ್ರಿ ಸರಕಾರ ಉಳಿಸಲು 16 ಸಚಿವರು ರಾಜೀನಾಮೆ ನೀಡಿದ ನಂತರ ದಿಗ್ವಿಜಯ್ ಸಿಂಗ್ ಈ ಮಾತುಗಳನ್ನಾಡಿದ್ದಾರೆ. ನಾವು ಜ್ಯೋತಿರಾಧಿತ್ಯ ಸಿಂಧ್ಯಾ ಅವರನ್ನು ಸಂಪರ್ಕಿಸಲು ಪ್ರಯತ್ನ ಪಡುತ್ತಿದ್ದೇವೆ. ಆದರೆ ಅವರಿಗೆ ಹಂದಿ ಜ್ವರವಂತೆ. ಹಾಗಾಗಿ ಅವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಯಾರೆಲ್ಲಾ ಮತದಾರರ ನಿರ್ಣಯಕ್ಕೆ ಅವಮಾನ ಮಾಡುತ್ತಾರೋ ಅವರಿಗೆ ರಾಜ್ಯದ ಜನರೇ ಬುದ್ದಿ ಕಲಿಸುತ್ತಾರೆ ಎಂದು ಸಿಂಗ್ ಹೇಳಿದ್ಧಾರೆ.

Advertisement

Udayavani is now on Telegram. Click here to join our channel and stay updated with the latest news.

Next