Advertisement

ವಿವಿಧೆಡೆ ಜ್ಯೋತಿಬಾ ಫುಲೆ ಜಯಂತಿ

04:19 PM Apr 13, 2018 | Team Udayavani |

ಮೂಡಲಗಿ: ಇಲ್ಲಿಯ ಮಾಳಿ ಸಮಾಜ ಬಾಂಧವರಿಂದ ಪಟ್ಟಣದಲ್ಲಿ ಜ್ಯೋತಿಬಾ ಫುಲೆಯವರ 191ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

Advertisement

ಜ್ಯೋತಿಬಾ ಫುಲೆಯವರ ಭಾವಚಿತ್ರಕ್ಕೆ ಮೂಡಲಗಿ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಪಾದಬೋದ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಜ್ಯೋತಿರ್ಲಿಂಗ ವಿವಿಧೋದ್ದೇಶ ಸಹಕಾರಿ ಸಂಘದಿಂದ ವಾದ್ಯಮೇಳ, ಝಾಂಜ್‌ ಪಥಕದೊಂದಿಗೆ ಜೈಕಾರ ಕೂಗುತ್ತ ಪಟ್ಟಣದ ಕಾಲೇಜ್‌ ರಸ್ತೆ, ಕಲ್ಮೇಶ್ವರ ವೃತ್ತ, ಚೆನ್ನಮ್ಮ ವೃತ್ತ, ಕರೇಮ್ಮ ವೃತ್ತ, ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತದ ಮೂಲಕ ಸಾಗಿತು.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ಮುತ್ತಪ್ಪ ಈರಪ್ಪನ್ನವರ, ಎಸ್‌.ಬಿ. ಹಂದಿಗುಂದ, ಚನ್ನಬಸು ಬಡ್ಡಿ, ಪುರಸಭೆ ಸದಸ್ಯರಾದ ಪ್ರಕಾಶ ಈರಪ್ಪನ್ನವರ, ಎಸ್‌. ಎಸ್‌. ಪಾಟೀಲ, ಮಲ್ಲು ಢವಳೇಶ್ವರ, ಗಿರೀಶ ಢವಳೇಶ್ವರ, ಶಿವಾನಂದ ಹಳಬರ, ಈರಪ್ಪ ಮಾಲಗಾರ, ಯಲ್ಲಪ್ಪ ಮಗದುಮ್‌, ಶಿವು ಈರಪ್ಪನ್ನವರ, ಚೇತನ ನಿಶಾನಿಮಠ, ಡಾ| ಬಿ.ಬಿ. ಅವರಾದಿ, ಸಂಜು ಕಮತೆ, ಶಿವಬೋಧ ಮಾಲಗಾರ, ಭರಮಪ್ಪ ಮಾಳಿ ಸೇರಿದಂತೆ ಮಾಳಿ ಸಮಾಜ ಬಾಂಧವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next