Advertisement
ಡಿ. 2 ರಂದು ಕುಲಾಲ ಸಂಘ ಮುಂಬಯಿ ಪ್ರಾಯೋಜಿತ ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಮುಂಬಯಿ ಇದರ 6ನೇ ನೂತನ ಪುಣೆಯ ಕಾತ್ರಜ್ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮಲ್ಲಿಯ ವಿಚಾರಧಾರೆಗಳನ್ನು, ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅರ್ಥಿಕ ಸಂಪನ್ಮೂಲದ ಅವಶ್ಯಕತೆ ತೋರಿದಾಗ ವಿಶ್ವಾಸವನ್ನಿಟ್ಟು ಸಹಕರಿಸುವ ಜ್ಯೋತಿ ಕ್ರೆಡಿಟ್ ಸೊಸೈಟಿಯ ಸರ್ವ ಯೋಜನೆಗಳನ್ನು ಎಲ್ಲರು ಪಡೆದುಕೊಳ್ಳಬೇಕು. ಪುಣೆಯಲ್ಲಿ ನಿರ್ಮಾ ಣವಾದ ನಮ್ಮ ಬಂಟರ ಸಂಘದ ಭವನವು ಕೂಡಾ ತುಳು ಭಾಂದವರಿಗೆ ಯಾವುದೇ ರೀತಿಯ ಸಭೆ ಸಮಾರಂಭಗಳಿಗೆ ನಮ್ಮಿಂದ ಆಗುವಂಥ ಸಹಕಾರವನ್ನು ನೀಡಲು ಸಿದ್ಧವಿದೆ. ಇಂದು ನನ್ನನ್ನು ಸಮ್ಮಾನಿಸಿ ಗೌರವಿಸಿದ ಜ್ಯೋತಿ ಸೊಸೈಟಿಯ ಭವಿಷ್ಯ ಉಜ್ವಲಗೊಳ್ಳಲಿ ಎಂದರು.
Related Articles
Advertisement
ಪುಣೆ ಕುಲಾಲ ಸಂಘದ ಅಧ್ಯಕ್ಷರಾದ ಹರೀಶ್ ಕುಲಾಲ್ ಮಾತನಾಡಿ, ಪುಣೆಯಲ್ಲಿ ವ್ಯವಹಾರ ಪ್ರಾರಂಭಿಸಿರುವ ನಮ್ಮ ಕುಲಾಲ ಸಮಾಜದ ಈ ಆರ್ಥಿಕ ಸಂಸ್ಥೆಯ ಯಶಸ್ಸಿಗೆ ಬೇಕಾದಂತಹ ಮಾನವ ಸಂಪಲನ್ಮೂಲವನ್ನು ಒಟ್ಟುಗೂಡಿಸಿ ಅರ್ಥಿಕ ಕಾರ್ಯ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಮಾಡುವಂತಹ ಕರ್ತವ್ಯ ನಮ್ಮದು. ಪುಣೆಯ ಎಲ್ಲ ಸಮಾಜದ ಗಣ್ಯರು, ತುಳು ಕನ್ನಡಿಗರ ಸಹಕಾರ ಸಿಗುತ್ತದೆ ಎಂಬ ಭರವಸೆ ನಮ್ಮದು ಎಂದು ಹೇಳಿದರು.
ಪುಣೆ ಕುಲಾಲ ಸಂಘದ ಗೌರಾವಾಧ್ಯಕ್ಷ ವಿಶ್ವನಾಥ್ ಉಡುಪಿ ಮಾತನಾಡಿ, ಸೊಸೈಟಿಯ ಆಡಳಿತ ಮಂಡಳಿಯ ಅಂದಾಜು ವ್ಯವಹಾ ರಕ್ಕಿಂತಲೂ ಹೆಚ್ಚಿನ ವ್ಯವಹಾರ ಆಗುವಂತೆ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕು. ಹಾಗೆಯೇ ಪುಣೆ ಕುಲಾಲ ಸಂಘಕ್ಕೆ ಸ್ವಂತ ಭವನದ ನಿರ್ಮಾಣಕ್ಕೆ ಸಹಕಾರವನ್ನು ಈ ಸೊಸೈಟಿಯ ಮೂಲಕ ಕೇಳಿಕೊಳ್ಳುತ್ತೇವೆ. ಎಂದರು.
ಮುಂಬಯಿ ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ, ಅಮೂಲ್ಯ ತ್ತೈಮಾಸಿಕದ ಸಂಪಾದಕ ಶಂಕರ್ ಮೂಲ್ಯ, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್, ಪುಣೆ ಕುಲಾಲ ಸಂಘದ ಸ್ಥಾಪಕಾಧ್ಯಕ್ಷ ವಾಸುದೇವ್ ಬಂಟ್ವಾಳ್ ಮಾತನಾಡಿ ಶುಭಹಾರೈಸಿದರು. ಪುಣೆ ಕುಲಾಲ ಸಂಘದ ಪ್ರದಾನ ಕಾರ್ಯದರ್ಶಿ ನವೀನ್ ಬಂಟ್ವಾಳ್, ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಮೂಲ್ಯ ಮತ್ತು ಪದಾಧಿಕಾರಿಗಳು ಸಹಕರಿಸಿದರು. ದೇವದಾಸ್ ಕುಲಾಲ್ ಸ್ವಾಗತಿಸಿದರು. ದೇವದಾಸ್ ಕುಲಾಲ್ ಹಾಗು ಭಾರತಿ ಅಕ್ಯಾìನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.
ನಿಸ್ವಾರ್ಥ ಮತ್ತು ಏಕಾಗ್ರತೆಯ ಕಾಯಕವನ್ನು ಮಾಡಿ ತೋರಿಸುವ ಕುಲಾಲ ಬಾಂಧವರು ಪರೋಪಕಾರಿಗಳು. ತನ್ನವರನ್ನು ಮತ್ತು ಇತರರನ್ನು ಒಂದೇ ಭಾವನೆಯಲ್ಲಿ ಕಾಣುವ ಇವರು ಪ್ರೀತಿ ಗೌರವಕ್ಕೆ ಅಧರಣೀಯರು. ಇದೀಗ ಕುಲಾಲ ಸಂಘದ ಆರ್ಥಿಕ ಸಂಸ್ಥೆಯು ಪುಣೆಯಲ್ಲಿ ತನ್ನ ವ್ಯವಹಾರ ಪ್ರಾರಂಭಿಸಿದೆ.ಮುಂದಿನ ದಿನಗಳಲ್ಲಿ ಸಂಸ್ಥೆಯು ಶತ ಶಾಖೆಗಳನ್ನು ಹೊಂದುವಂತಾಗಲಿ.– ವಿಶ್ವನಾಥ್ ಪೂಜಾರಿ ಕಡ್ತಲ,
ಉಪಾಧ್ಯಕ್ಷರು,ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ಸ್ ಅಸೋ. ಪುಣೆಯಲ್ಲಿ ಬೇರೆ, ಬೇರೆ ಸಮಾಜದ ಮತ್ತು ಭಾಷಾ ಸಂಘವಿದ್ದರೂ ನಮ್ಮ ತುಳುನಾಡಿನವರು ಒಂದಕ್ಕೊಂದು ಕೊಂಡಿಯಂತೆ ಸಹಕಾರ ನೀಡುತ್ತಾ ಬೆಳೆದು ಬಂದವರು. ಇಂತಹ ಉತ್ತಮಬಾಂಧವ್ಯ ಹೊಂದಿರುವ ಪುಣೆಯ ತುಳು-ಕನ್ನಡಿಗರೆಲ್ಲರ ಸಹಕಾರ ಪ್ರೋತ್ಸಾಹ ದೊರೆತರೆ ಶುಭಾರಂಭ ಗೊಂಡ ಆರ್ಥಿಕ ಸಂಸ್ಥೆಯ ಜ್ಯೋತಿಯಾಗಿ ಬೆಳೆದು ನಿಂತು ಜನಸಾಮಾನ್ಯರ ಬಾಳಿಗೆ ಬೆಳಕು ನೀಡಲಿದೆ.
– ನಗ್ರಿಗುತ್ತು ರೋಹಿತ್ ಡಿ. ಶೆಟ್ಟಿ,
ಪ್ರದಾನ ಕಾರ್ಯದರ್ಶಿ : ಶ್ರೀ ಗುರುದೇವ ಸೇವಾ ಬಳಗ ಪುಣೆ) ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬಂತೆ ನಾವೆಲ್ಲರೂ ಒಂದೆ. ಸಂಘಟನೆ ಬೇರೆ ಯಾಗಿದ್ದರು ನಾವುಗಳು ಪರಸ್ಪರ ಪ್ರೀತಿಯಿಂದ ಸಹಬಾಳ್ವೆ ನಡೆಸುವವರು. ಯಾವುದೇ ಸಂಘದ ಕಾರ್ಯ ಕ್ಷೇತ್ರಕ್ಕೆ ಸಹಕಾರ ನೀಡುವುದು ನಮ್ಮ ಧರ್ಮ. ಕಾತ್ರ ಜ್‌ನ ಬೆಟ್ಟದ ಮೇಲೆ ಶ್ರೀ ಅಯ್ಯಪ್ಪ ಸ್ವಾ ಮಿ ಕ್ಷೇತ್ರದ ಕೆಳ ಮಡಿಲಿನಲ್ಲಿ ಇಂದು ಜ್ಯೋತಿ ಕ್ರೆಡಿಟ್ ಸೊಸೈಟಿ ಕಾರ್ಯರಂಭ ಗೊಂಡಿದ್ದು, ಇದು ಶುಭ ಸಂದೇಶವಾಗಿದೆ.
– ಶೇಖರ್ ಪೂಜಾರಿ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಜ್ಯೋತಿ ಕ್ರೆಡಿಟ್ ಸೊಸೈಟಿಯು ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು. ಅಂತಹ ಬೆಳವಣಿಗೆಗೆ ನಾವೆಲ್ಲರೂ ಸಹಕಾರ ನೀಡಿ ಮುಂಬಯಿ ಕುಲಾಲ ಸಂಘದ ಸಾಧನೆಯ ಶಿಖರಕ್ಕೆ ಜ್ಯೋತಿಯಂತೆ ವಿರಾಜಮಾನವಾಗಿ ಶಾಶ್ವತವಾಗಿರುವಂತೆ ಮಾಡಬೇಕಾಗಿದೆ. ಜ್ಯೋತಿ ಸೊಸೈಟಿಯ ಶಾಖೆ ಪುಣೆಯಲ್ಲಿಯು ಇರಬೇಕು ಎಂಬ ನಮ್ಮ ಬೇಡಿಕೆಯನ್ನು ಸಾಕಾರಗೊಳಿಸಲಾಗಿದೆ.
– ನ್ಯಾಯವಾದಿ ಅಪ್ಪು ಮೂಲ್ಯ,
ಸ್ಥಾಪಕಾಧ್ಯಕ್ಷರು,ಕುಲಾಲ ಸಂಘ ಪಿಂಪ್ರಿ-ಚಿಂಚಾÌಡ್ ಚಿತ್ರ-ವರದಿ : ಹರೀಶ್ ಮೂಡಬಿದ್ರಿ