Advertisement

100 ಮೀಟರ್ ಹರ್ಡಲ್ಸ್: ಸೈಪ್ರಸ್ ಕೂಟದಲ್ಲಿ ರಾಷ್ಟ್ರೀಯ ದಾಖಲೆ ಮುರಿದ ಜ್ಯೋತಿ ಯರ್ರಾಜಿ

05:22 PM May 11, 2022 | Team Udayavani |

ಹೊಸದಿಲ್ಲಿ:ಮಿತಿ ಮೀರಿದ ಗಾಳಿಯಿಂದಾಗಿ ರಾಷ್ಟ್ರೀಯ ದಾಖಲೆಯನ್ನು ಪರಿಗಣಿಸಲಾಗದ ಒಂದು ತಿಂಗಳ ನಂತರ, 100 ಮೀಟರ್ ಹರ್ಡಲರ್ ಜ್ಯೋತಿ ಯರ್ರಾಜಿ ಸೈಪ್ರಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 13.23 ಸೆಕೆಂಡ್‌ಗಳಲ್ಲಿ ಜಯಗಳಿಸಿ ದಾಖಲೆ ಬರೆದಿದ್ದಾರೆ.

Advertisement

22 ವರ್ಷದ ಆಂಧ್ರದ ಅಥ್ಲೀಟ್ ಜ್ಯೋತಿ ಯರ್ರಾಜಿ ಮಂಗಳವಾರ ಲಿಮಾಸೋಲ್‌ನಲ್ಲಿ ನಡೆದ ಸೈಪ್ರಸ್ ಇಂಟರ್ನ್ಯಾಷನಲ್  ಮೀಟ್‌ನಲ್ಲಿ ಚಿನ್ನ ಗೆದ್ದರು. ಈ ಹಿಂದಿನ 13.38 ಸೆಕೆಂಡುಗಳ ಹಳೆಯ ರಾಷ್ಟ್ರೀಯ ದಾಖಲೆಯು 2002 ರಿಂದ ಅನುರಾಧ ಬಿಸ್ವಾಲ್ ಹೆಸರಿನಲ್ಲಿತ್ತು. ಸೈಪ್ರಸ್ ಇಂಟರ್‌ನ್ಯಾಶನಲ್ ಮೀಟ್ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್ ಡಿ ಈವೆಂಟ್ ಆಗಿದೆ.

ಭುವನೇಶ್ವರದಲ್ಲಿರುವ ರಿಲಯನ್ಸ್ ಫೌಂಡೇಶನ್ ಒಡಿಶಾ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಜೋಸೆಫ್ ಹಿಲಿಯರ್ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಜ್ಯೋತಿ, ಕಳೆದ ತಿಂಗಳು ಕೋಝಿಕ್ಕೋಡ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ 13.09 ಸೆಕೆಂಡ್‌ಗಳಲ್ಲಿ ಓಡಿದ್ದರು ಆದರೆ ಗಾಳಿಯ ವೇಗ +2.1 ಮೀ / ಸೆ ಆಗಿದ್ದರಿಂದ, ಅನುಮತಿಸುವ +2.0 ಮೀ / ಸೆ ಗಿಂತ ಹೆಚ್ಚು ಇದ್ದುದರಿಂದ ಅದನ್ನು ರಾಷ್ಟ್ರೀಯ ದಾಖಲೆಯಾಗಿ ಪರಿಗಣಿಸಿರಲಿಲ್ಲ.

2020 ರಲ್ಲಿ, ಕರ್ನಾಟಕದ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ 13.03 ಸೆಕೆಂಡುಗಳಲ್ಲಿ ಬಿಸ್ವಾಲ್ ಅವರ ರಾಷ್ಟ್ರೀಯ ದಾಖಲೆಯ ಸಮಯವನ್ನು ಮೀರಿದ್ದರು. ಆದರೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯು ಆಕೆಯನ್ನು ಪರೀಕ್ಷಿಸದ ಕಾರಣ ಅದನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಲಾಗಿಲ್ಲ. ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದಿಂದ ಯಾವುದೇ ತಾಂತ್ರಿಕ ಪ್ರತಿನಿಧಿ ಅಲ್ಲಿ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next