Advertisement

ಜ್ಯೋತಿ ಕೋ. ಕ್ರೆಡಿಟ್‌ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

04:33 PM Feb 07, 2018 | Team Udayavani |

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಸಂಚಾಲಕತ್ವದ ಪ್ರತಿಷ್ಠಿತ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ನೂತನ ನಾಲ್ಕನೇ ಶಾಖೆಯು ನಲಸೋಪರ ಪಶ್ಚಿಮದ ಹನುಮಾನ್‌ ನಗರ, ಚಕ್ರಧರ್‌ ನಗರ, ಶಾಪ್‌ ನಂಬರ್‌-9, ನ್ಯೂ ಯಶ್‌ ಸಿಎಚ್‌ಎಸ್‌ಲಿ ಇಲ್ಲಿ ಫೆ. 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾ ರ್ಪಣೆಗೊಂಡಿತು.

Advertisement

ಪೂರ್ವಾಹ್ನ ಸಂಸ್ಥೆಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಪುಣೆಯ ಕುಲಾಲ ಸಂಘದ ಮಾಜಿ ಅಧ್ಯಕ್ಷ ಎಸ್‌. ಆರ್‌. ಬಂಜನ್‌ ಅವರು ನೂತನ ಶಾಖೆಯನ್ನು ರಿಬ್ಬನ್‌ ಕತ್ತರಿಸಿ ಉದ್ಘಾಟಿಸಿ ಶುಭಹಾರೈಸಿದರು. ಉಮೇಶ್‌ ಡಿ. ನಾಯಕ್‌ ಅವರು ಕಂಪ್ಯೂಟರ್‌ ಸೇವೆಗೆ  ಮತ್ತು ಶಶಿಧರ್‌ ಕೆ. ಶೆಟ್ಟಿ ಅವರು ಸೇಫ್‌ ಲಾಕರ್‌ಗೆಚಾಲನೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷ, ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯದರ್ಶಿ ದೇವದಾಸ್‌ ಕುಲಾಲ್‌, ಉಪ ಸಮಿತಿಯ ಕಾರ್ಯಾಧ್ಯಕ್ಷ ಸುಂದರ್‌ ಕೆ. ಮೂಲ್ಯ, ಶಿವರಾಜ್‌ ಗೋಯಲ್‌, ಡಾ| ಅಶೋಕ್‌ ಕುಂಭಾಲ್‌, ಅನಿಲ್‌ ಭೋಗ್ಲೆ, ಅತುಲ್‌ ಸಾಳುಂಕೆ, ಲಯನ್‌ ಕೃಷ್ಣಯ್ಯ ಹೆಗ್ಡೆ ಅಡಂದಾಲು, ಶಿರಿಶ್‌ ಜೆ. ಚವಾಣ್‌, ಸಗೀರ್‌ ಅಹ್ಮದ್‌ ಡಾಂಗೆ ಮತ್ತು ಗೌಸಲೋ ಜೋಕಿಮ್‌ ತುಸಾರೋ ಮೊದಲಾದವರು  ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6ರಿಂದ ಗಣಹೋಮ, ಆನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಪೂರ್ವಾಹ್ನ 11.30ರಿಂದ ಸಭಾ ಕಾರ್ಯಕ್ರಮ ನಡೆಯಿತು. 

ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಉಪ ಕಾರ್ಯಾಧ್ಯಕ್ಷ ಪಿ. ಶೇಖರ್‌ ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌, ಕೋಶಾಧಿಕಾರಿ ಭಾರತಿ ಪಿ. ಅಕ್ಯಾìನ್‌ ಹಾಗೂ ನಿರ್ದೇಶಕ ಮಂಡಳಿಯ ಎಚ್‌.ಎಂ. ಥೊರತ್‌. ಚಂದು ಕೆ. ಮೂಲ್ಯ, ಅಡ್ವೆ ಉಮಾನಾಥ್‌ ಮೂಲ್ಯ, ಡಿ.ಐ. ಮೂಲ್ಯ, ಬಿ. ಜಿ. ಅಂಚನ್‌, ರಾಜೇಶ್‌ ಎಸ್‌. ಬಂಜನ್‌, ಗಿರೀಶ್‌ ವಿ. ಕರ್ಕೇರ, ನ್ಯಾಯವಾದಿ ಸವಿನಾ ಎಸ್‌. ಕುಲಾಲ್‌, ಸುರೇಖಾ ಆರ್‌. ಕುಲಾಲ್‌, ಕರುಣಾಕರ ಬಿ. ಸಾಲ್ಯಾನ್‌ ಹಾಗೂ ಕುಲಾಲ ಸಂಘ ಮುಂಬಯಿ ಇದರ ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

Advertisement

ಚಿತ್ರ-ವರದಿ:ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next