Advertisement

ಜ್ವಾಲಾ, ಅರವಿಂದ್‌ ಭಟ್‌ ಕೋಚ್‌

03:35 AM Jun 30, 2017 | |

ಹೈದರಾಬಾದ್‌: ಮಾಜಿ ಬ್ಯಾಡ್ಮಿಂಟನ್‌ ಆಟಗಾರ ಕನ್ನಡಿಗ ಅರವಿಂದ್‌ ಭಟ್‌, ಜ್ವಾಲಾ ಗುಟ್ಟಾ, ಚೇತನ್‌ ಆನಂದ್‌ ಸೇರಿದಂತೆ ಹಲವರನ್ನು ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ  ಪ್ಯಾನಲ್‌ ಕೋಚ್‌ ಆಗಿ ಆಯ್ಕೆ ಮಾಡಿಲಾಗಿದೆ. ರಾಷ್ಟ್ರೀಯ ಮುಖ್ಯ ಕೋಚ್‌ ಆಗಿ ಪಿ.ಗೋಪಿಚಂದ್‌ ಮುಂದುವರಿಯಲಿದ್ದಾರೆ.

Advertisement

ಉಳಿದಂತೆ ಪುರುಷರ ಸಿಂಗಲ್ಸ್‌ ವಿಭಾಗಕ್ಕೆ 19, ಪುರುಷರ ಡಬಲ್ಸ್‌ಗೆ 12, ಮಹಿಳೆಯರ ಡಬಲ್ಸ್‌ ವಿಭಾಗದಕ್ಕೆ 4 ಜನ ಕೋಚ್‌ಗಳನ್ನು ಆಯ್ಕೆ ಮಾಡಲಾಗಿದೆ. ಪುರುಷರ ಸಿಂಗಲ್ಸ್‌ ವಿಭಾಗಕ್ಕೆ ಮುಖ್ಯವಾಗಿ ಜರ್ಮನ್‌ ಓಪನ್‌ ಗ್ರ್ಯಾನ್‌ಪ್ರೀ ಗೋಲ್ಡ್‌ ಟೂರ್ನಿಯ ಚಾಂಪಿಯನ್‌ ರಾಜ್ಯದ ಅರವಿಂದ್‌ ಭಟ್‌, 2006ರ ಕಾಮನ್‌ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತ ಚೇತನ್‌ ಆನಂದ್‌ ಮತ್ತು ದೀಪಾಂಕರ್‌ ಭಟ್ಟಾಚಾರ್ಯ, 2008ರ ಒಲಿಂಪಿಯನ್‌ ಅನೂಪ್‌ ಶ್ರೀಧರ್‌ ಆಯ್ಕೆಯಾಗಿದ್ದಾರೆ.

ಮಹಿಳೆಯರ ಡಬಲ್ಸ್‌ ವಿಭಾಗಕ್ಕೆ ಕೋಚ್‌ ಆಗಿ 2011ರ ವಿಶ್ವ ಚಾಂಪಿಯನ್‌ ಕಂಚಿನ ಪದಕ ವಿಜೇತೆ ಜ್ವಾಲಾ ಗುಟ್ಟಾ ಸೇರಿದಂತೆ ನಾಲ್ವರು ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next