ಪ್ರಾಣಿಗಳೂ ಒದ್ದಾಡುತ್ತಿವೆ. ಮಾನವನಾದರೆ ಅದರಿಂದ ಪಾರಾ ಗಲು ವಿಶೇಷ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳುವುದು ಸಹಜ. ಅಯೋಧ್ಯೆ ನಗರ ಪಾಲಿಕೆ ತನ್ನ ಮಾನ ವೀಯ ಭಾವವನ್ನು ಇನ್ನಷ್ಟು ವಿಸ್ತರಿಸಿದೆ. ಚಳಿಯಿಂದ ಒದ್ದಾಡುತ್ತಿರುವ ಅಲ್ಲಿನ ಗೋ ಸಂಪತ್ತನ್ನು ರಕ್ಷಿಸಲು ಮುಂದಾಗಿದೆ. ಅದರ ಪರಿಣಾಮ ಎತ್ತುಗಳು, ಗೋವುಗಳಿಗೆಂದು ವಿಶೇಷವಾದ, ಬೆಚ್ಚನೆಯ ಸೆಣಬಿನ ರಕ್ಷಾ ಕವಚ (ಕೋಟ್) ಹೊಲಿಯಲು ಆದೇಶ ನೀಡಿದೆ!
Advertisement
ಅಲ್ಲಿನ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ಗೋಶಾಲೆಗಳಲ್ಲಿ ಇರುವ ಸಾವಿರಾರು ಎತ್ತು, ಹಸುಗಳು ಇದರ ಪ್ರಯೋಜನ ಪಡೆಯಲಿವೆ. ಆರಂಭದಲ್ಲಿ ಬೈಶಿಂಗ್ಪುರದಲ್ಲಿರುವ 1,200 (700 ಎತ್ತುಗಳನ್ನು ಸೇರಿ) ಗೋವುಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಈಗಾಗಲೇ 100 ಕರುಗಳಿಗೆ ದಿರಿಸು ನೀಡಲು ಸೂಚಿಸಲಾಗಿದೆ. ಮಾಸಾಂತ್ಯಕ್ಕೆ ಅದು ಅಧಿಕಾರಿಗಳ ಕೈಸೇರಲಿದೆ. ಮುಂದಿನ ದಿನಗಳಲ್ಲಿ ಇಡೀ ನಗರದ ಗೋವುಗಳು ಈ ಯೋಜನೆಯ ಲಾಭ ಪಡೆಯಲಿವೆ ಎಂದು ನಗರದ ನಿಗಮದ ಆಯುಕ್ತ ನೀರಜ್ ಶುಕ್ಲಾ ತಿಳಿಸಿದ್ದಾರೆ.
ಗೋವುಗಳನ್ನು ಬೆಚ್ಚಗಿಡಲು ಇನ್ನಷ್ಟು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಗೋ ಶಾಲೆಯ ನೆಲಹಾಸಿನ ಮೇಲೆ ಒಣಹುಲ್ಲನ್ನು ಹರಡಲಾಗುವುದು. ಗೋ ಶಾಲೆಯ ಆವರಣದಲ್ಲಿ ಬೆಂಕಿಯುರಿ ಹಾಕಲಾಗುತ್ತದೆ. ಈ ಮೂಲಕ ಚಳಿಯಿಂದ ಗೋವುಗಳನ್ನು ಕಾಪಾಡಲಾಗುತ್ತದೆ ಎಂದು ಶುಕ್ಲಾ ತಿಳಿಸಿದ್ದಾರೆ. ಹೇಗಿರಲಿದೆ ರಕ್ಷಾಕವಚ?
ರಕ್ಷಾಕವಚವನ್ನು ಸೆಣಬಿನಿಂದ ತಯಾರಿಸಲಾಗುತ್ತದೆ. ಕರುವಿಗೆ ಮೂರು ಸ್ತರದಲ್ಲಿ ಇದನ್ನು ಹೊಲಿಯ ಲಾಗುತ್ತದೆ. ಇದರಲ್ಲಿ ಮೃದುವಾದ ಬಟ್ಟೆಯೂ ಸೇರಿರುತ್ತದೆ. ಹಸುವಿಗೆ ಎರಡು ಸ್ತರದಲ್ಲಿ ಹೊಲಿಗೆ ಮಾಡ ಲಾಗುತ್ತದೆ. ಎತ್ತುಗಳಿಗೆ ಬರೀ ಸೆಣಬಿನ ಒಂದೇ ಸ್ತರದ ಹೊಲಿಗೆ ಇರುತ್ತದೆ.