Advertisement

ಸುಪ್ರೀಂಕೋರ್ಟ್‌ ಹೊಸ ಜಡ್ಜ್ ಗಳ ಪ್ರಮಾಣ

08:05 AM Aug 08, 2018 | Karthik A |

ಹೊಸದಿಲ್ಲಿ: ನ್ಯಾ| ಕೆ.ಎಂ.ಜೋಸೆಫ್ ಹಿರಿತನ ಕಡೆಗಣಿಸಲಾಗಿದೆ ಎಂಬ ಆರೋಪದ ನಡುವೆಯೇ ಮಂಗಳವಾರ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ನ್ಯಾ| ಇಂದಿರಾ ಬ್ಯಾನರ್ಜಿ, ನ್ಯಾ| ವಿನೀತ್‌ ಸರಣ್‌, ನ್ಯಾ| ಕೆ.ಎಂ.ಜೋಸೆಫ್ ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಕೊಠಡಿಯಲ್ಲಿ ಬೆಳಗ್ಗೆ 10.30ಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

Advertisement

ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಇತರ ನ್ಯಾಯಮೂರ್ತಿಗಳು, ಕಾನೂನು ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು. ಮೂವರು ನ್ಯಾಯಮೂರ್ತಿಗಳ ಪ್ರಮಾಣ ಸ್ವೀಕಾರದಿಂದಾಗಿ ನ್ಯಾಯಮೂರ್ತಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 31.

ವಿಶ್ವಾಸ ಏಕಿಡಬಾರದು?
ನ್ಯಾ| ಜೋಸೆಫ್ ಅವರು ನ್ಯಾ| ಇಂದಿರಾ ಬ್ಯಾನರ್ಜಿ ಅವರಿಗಿಂತ ಎರಡೂವರೆ ವರ್ಷ ಕಿರಿಯರಾಗಿದ್ದು, ಅವರನ್ನು ಹಿರಿಯರೆಂದು ಪರಿಗಣಿಸಲು ಹೇಗೆ ಸಾಧ್ಯ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ. ಜತೆಗೆ, ನಾವು ಎಲ್ಲದಕ್ಕೂ ಪ್ರಧಾನಿ ಮೋದಿ ಅವರನ್ನು ಅವಲಂಬಿಸಿರುವಾಗ, ಒಬ್ಬ ನ್ಯಾಯಮೂರ್ತಿಯ ನೇಮಕದ ವಿಚಾರದಲ್ಲಿ ಅವರ ಮೇಲೇಕೆ ವಿಶ್ವಾಸ ಇರಿಸಬಾರದು ಎಂದೂ ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next