Advertisement

ನಾಳೆಯೇ ವಿಶ್ವಾಸಮತ: ಸುಪ್ರೀಂ ಆದೇಶಕ್ಕೆ ಜಸ್ಟಿಸ್‌ ಹೆಗ್ಗೆ ಸ್ವಾಗತ

04:04 PM May 18, 2018 | udayavani editorial |

ಬೆಂಗಳೂರು : ಯಡಿಯೂರಪ್ಪ ಅವರಿಗೆ ನಾಳೆ ಶನಿವಾರವೇ ತಮಗಿರುವ ಬಹುಮತವನ್ನು ಸದನದಲ್ಲಿ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ನಿವೃತ್ತ  ನ್ಯಾಯಮೂರ್ತಿ ಜಸ್ಟಿಸ್‌ ಸಂತೋಷ್‌ ಹೆಗ್ಡೆ ಸ್ವಾಗತಿಸಿದ್ದಾರೆ.

Advertisement

ಈಚಿನ ಚುನಾವಣೆಯಲ್ಲಿ ಏಕೈಕ ಬಹುದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಬಿಜೆಪಿಗೆ ಸರಕಾರ ರಚಿಸುವಂತೆ ಮೊದಲು ಆಹ್ವಾನ ನೀಡಿರುವ ರಾಜ್ಯಪಾಲರ ನಿರ್ಧಾರ ಸರಿಯಾಗಿಯೇ ಇದೆ; ಆದರೆ ಬಹುಮತ ಸಾಬೀತು ಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದುದು ಸರಿಯಲ್ಲ; ಅದರಿಂದ ಕುದುರೆ ವ್ಯಾಪಾರಕ್ಕೆ ಅವಕಾಶವಾಗುತ್ತದೆ. ಈ ಕಾರಣಕ್ಕಾಗಿ ಸುಪ್ರೀಂ ಕೋರ್ಟ್‌ ನಾಳೆ ಶನಿವಾರವೇ ಸದನದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚಿಸಬೇಕೆಂದು ಆದೇಶಿಸಿರುವುದು ಸರಿಯಾಗಿಯೇ ಇದೆ ಮತ್ತು ಅದು ಸ್ವಾಗತಾರ್ಹವೂ ಆಗಿದೆ ಎಂದು ಜಸ್ಟಿಸ್‌ ಸಂತೋಷ್‌ ಹೆಗ್ಡೆ ಅವರು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತಾತ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next