Advertisement

ಐತಿಹಾಸಿಕ ತೀರ್ಪುಗಳ ಸರದಾರ ನ್ಯಾ. ನಾರಿಮನ್‌ ನಿವೃತ್ತಿ

08:32 PM Aug 12, 2021 | Team Udayavani |

ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ಹೊರಬಿದ್ದಿರುವ ಅನೇಕ ಐತಿಹಾಸಿಕ ತೀರ್ಪುಗಳ ಹಿಂದಿದ್ದ ನ್ಯಾ. ರೋಹಿಂಟನ್‌ ಫಾಲಿ ನಾರಿಮನ್‌, ಗುರುವಾರ ನಿವೃತ್ತರಾಗಿದ್ದಾರೆ.

Advertisement

2014, ಜು. 7ರಂದು ಸುಪ್ರೀಂ ಕೋರ್ಟ್‌ ನ್ಯಾಯಾಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದ ನ್ಯಾ. ನಾರಿಮನ್‌, 13,500ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ.

ಮೂಲಭೂತ ಹಕ್ಕುಗಳ ಸಂರಕ್ಷಣೆ, ಐಟಿ ಕಾಯ್ದೆಯಡಿ ಬಂಧಿಸುವ ಅಧಿಕಾರವನ್ನು ರದ್ದುಗೊಳಿಸುವುದು, ಸಲಿಂಗ ಕಾಮವನ್ನು ಶಿಕ್ಷಾರ್ಹ ಪ್ರಕರಣಗಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದು, ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪು ನೀಡಿದ ಹೆಗ್ಗಳಿಕೆ ನ್ಯಾ. ನಾರಿಮನ್‌ ಅವರದ್ದು.

ಇದನ್ನೂ ಓದಿ:ಇನ್ಮುಂದೆ ಸರಕಾರಿ ಕಚೇರಿ ಹೊರತು ಪಡಿಸಿ ಉಳಿದೆಡೆ ಗಾರ್ಡ್‌ ಆಫ್‌ ಹಾನರ್‌ ಬೇಡ : ಸಿಎಂ

ನ್ಯಾಯಾಂಗದ ಆಶಯ ಕಾಪಾಡಿದವರು: ಸಿಜೆಐ
ನ್ಯಾ. ಫಾಲಿಮನ್‌ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ಇಂದು ನನ್ನ ಸಹೋದರ ನ್ಯಾ. ನಾರಿಮನ್‌ ಅವರ ನಿವೃತ್ತಿಯಿಂದ ನ್ಯಾಯಾಂಗದ ಆಶಯಗಳನ್ನು ಕಾಪಾಡುತ್ತಿದ್ದ ಸಿಂಹವೊಂದರ ಸೇವೆಯೊಂದು ಮುಕ್ತಾಯವಾದಂತಾಗಿದೆ. ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದು, “ಹಂಸಕ್ಷೀರ’ ಮಾದರಿಯ ನ್ಯಾಯ ವಿಲೇವಾರಿ ಅವರ ವಿಶೇಷತೆಯಾಗಿತ್ತು” ಎಂದು ಬಣ್ಣಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next