Advertisement

ಹಿಮಾಚಲ ಪ್ರದೇಶದ ಮೊದಲ ಮಹಿಳಾ ಚೀಫ್ ಜಸ್ಟಿಸ್‌ ಲೀಲಾ ಸೇಠ್ ವಿಧಿವಶ

05:26 PM May 06, 2017 | Team Udayavani |

ಹೊಸದಿಲ್ಲಿ : ದಿಲ್ಲಿ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶೆ,  ಹಿಮಾಚಲ ಪ್ರದೇಶ ಹೈಕೋರ್ಟಿನ ಮೊದಲ ಮಹಿಳಾ ಚೀಫ್ ಜಸ್ಟಿಸ್‌, ಖ್ಯಾತ ಲೇಖಕ ವಿಕ್ರಮ ಸೇಠ್ ಅವರ ತಾಯಿ, 86ರ ಹರೆಯದ ನಿವೃತ್ತ ನ್ಯಾಯಾಧೀಶೆ ಲೀಲಾ ಸೇಠ್  ಅವರು ನಿನ್ನೆ ಶುಕ್ರವಾರ ತಮ್ಮ ನೋಯ್ಡಾ ನಿವಾಸದಲ್ಲಿ ನಿಧನಹೊಂದಿದರು. 

Advertisement

“ಆಕೆಯೆ ಶುಕ್ರವಾರ ರಾತ್ರಿ 10.28ರ ಹೊತ್ತಿಗೆ ಹೃದಯ ಸ್ತಂಭನವಾಯಿತು. ನಾನು, ನನ್ನ ಸಹೋದರ ವಿಕ್ರಮ್‌, ನನ್ನ ಸಹೋದರಿ ಮತ್ತು  ನಮ್ಮ ಕುಟುಂಬ ಸದಸ್ಯರೆಲ್ಲ ಆಕೆಯ ಸಮೀಪ ಇದ್ದೆವು’ ಎಂದು ಲೀಲಾ ಸೇಠ್  ಅವರ ಪುತ್ರ ಶಾಂತಂ ಸೇಠ್  ತಿಳಿಸಿದ್ದಾರೆ. 

ಲಂಡನ್‌ ಬಾರ್‌ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಯನ್ನು ಹೊಂದಿರುವ ಲೀಲಾ ಸೇಠ್  ಅವರು 2012ರಲ್ಲಿ ರಚನೆಗೊಂಡಿದ್ದ ವರ್ಮಾ ಕಮಿಟಿಯ ಸದಸ್ಯೆಯಾಗಿದ್ದರು. ಈ ಸಮಿತಿಯನ್ನು ಸರಕಾರವು ಕ್ರಿಮಿನಲ್‌ ಕಾನೂನಿಗೆ ತಿದ್ದುಪಡಿಗಳನ್ನು ಶಿಫಾರಸು ಮಾಡುವುದಕ್ಕೆ ನೇಮಿಸಿತ್ತು.

ಸ್ವತಃ ಲೇಖಕಿಯಾಗಿದ್ದ ಲೀಲಾ ಸೇಠ್  ಅವರು “ಆನ್‌ ಬ್ಯಾಲನ್ಸ್‌’ ಎಂಬ ಅಟೋಬಯಾಗ್ರಫಿಯನ್ನು ಬರೆದಿದ್ದರು. ಅದು ಬೆಸ್ಟ್‌ ಸೆಲ್ಲರ್‌ ಆಗಿತ್ತು. ಆ ಬಳಿಕ ಆಕೆ 2014ರಲ್ಲಿ “ಟಾಕಿಂಗ್‌ ಆಫ್ ಜಸ್ಟಿಸ್‌: ಪೀಪಲ್ಸ್‌ ರೈಟ್ಸ್‌ ಇನ್‌ ಮಾಡರ್ನ್ ಇಂಡಿಯಾ’ ಕೃತಿಯನ್ನು ಬರೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next