Advertisement

ಬೊಫೋರ್ಸ್‌ ವಿಚಾರಣೆ ಪೀಠದಿಂದ ನ್ಯಾ. ಖಾನ್‌ವಿಲ್ಕರ್‌ ಹಿಂದಕ್ಕೆ

03:14 PM Feb 13, 2018 | Team Udayavani |

ಹೊಸದಿಲ್ಲಿ : ರಾಜಕೀಯ ಸೂಕ್ಷ್ಮತೆಗಳಿರುವ 64 ಕೋಟಿ ರೂ. ಗಳ ಬೊಫೋರ್ಸ್‌ ಲಂಚ ಹಗರಣದ ವಿಚಾರಣೆಯಿಂದ ಜಸ್ಟಿಸ್‌ ಎ ಎಂ ಖಾನ್‌ವಿಲ್ಕರ್‌ ಅವರು ಹಿಂದೆ ಸರಿದಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠದಲ್ಲಿ ಓರ್ವ ನ್ಯಾಯಮೂರ್ತಿಗಳಾಗಿರುವ ಖಾನ್‌ವಿಲ್ಕರ್‌ ಅವರು ಅವರು ಬೊಫೋರ್ಸ್‌ ವಿಚಾರಣೆಯಿಂದ ತಾನು ಹಿಂದೆ ಸರಿಯುವುದಕ್ಕೆ ಕಾರಣ ಕೊಟ್ಟಿಲ್ಲ .

ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನೂ ಒಳಗೊಂಡಿರುವ ಪೀಠವನ್ನು ಮಾರ್ಚ್‌ 28ರ ವಿಚಾರಣೆಗೆ ಮುನ್ನ  ಹೊಸದಾಗಿ ರಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

2005ರ ಮೇ 31ರಂದು ದಿಲ್ಲಿ  ಹೈಕೋಟ್‌ರ ಬೊಫೋರ್ಸ್‌ ಲಂಚ ಹಗರಣದ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ನಾಯಕ ಅಜಯ್‌ ಅಗ್ರವಾಲ್‌ ಅವರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next