Advertisement
ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ 3ನೇ ಕಲಬುರಗಿ ಸಾಹಿತ್ಯ ಸಂಭ್ರಮ-2019 (ಸಾಹಿತ್ಯ-ಸಂಸ್ಕೃತಿಗೆ ಪ್ರೇರಣಾ ಕಾರ್ಯ) ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಪ್ರತಿಬಿಂಬಿಸುವಂತಹ 22 ಸಾಂಸ್ಕೃತಿಕ ಅಕಾಡೆಮಿಗಳೆಲ್ಲವೂ ಬೆಂಗಳೂರಿನಲ್ಲೇ ಗೂಟ ಬಡಿದುಕೊಂಡಿವೆ. ಸಾಂಸ್ಕೃತಿಕವಾದ ಸುಂದರ ಕರ್ನಾಟಕ ನೋಡಲು ಅಕಾಡೆಮಿಗಳ ವಿಕೇಂದ್ರೀಕರಣಗೊಳ್ಳಬೇಕಿದೆ ಎಂದರು.
Related Articles
Advertisement
ವಿಶ್ವಜ್ಯೋತಿ ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶಕುಂತಲಾ ಪಾಟೀಲ ಜಾವಳಿ, ಕಾರ್ಯಾಧ್ಯಕ್ಷ ಜಗದೀಶ ಮರಪಳ್ಳಿ ಆಶಯ ನುಡಿಗಳನ್ನಾಡಿದರು.
ಹಿರಿಯ ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ, ಸಂಗಮನಾಥ ರಬಶೆಟ್ಟಿ, ಅರುಣಕುಮಾರ ಎಸ್. ಪಾಟೀಲ, ಡಾ| ಬಾಬುರಾವ್ ಶೇರಿಕಾರ, ಬಿ.ಎಸ್. ಮಾಲಿಪಾಟೀಲ, ಬಿ.ಎಸ್. ದೇಸಾಯಿ ಹಾಗೂ ಮತ್ತಿತರರು ಇದ್ದರು.· ಮಲ್ಲಿಕಾರ್ಜುನ ಕಡಕೋಳ, ಕರ್ನಾಟಕ ರಂಗ ಸಮಾಜದ ಸದಸ್ಯ ಬಂಡಾಯ ಅಂತರ್ಗತ
ಬಂಡಾಯ ಸಾಹಿತ್ಯ ನಿಂತಿದೆ ಎಂದು ಕೆಲವರು ಆರಾಧಿಸಿದ್ದು ಇದೆ. ಮನುಷ್ಯ ಸಂಸ್ಕೃತಿ ಇರೋವರೆಗೂ ಪ್ರತಿಭಟನೆ ಕಾವು ಇದ್ದೇ ಇರುತ್ತದೆ. ಪ್ರತಿಭಟನೆ ಸ್ವರೂಪ, ಮನೋಧರ್ಮ ಬೇರೆ ಇರಬಹುದು. ಆದರೆ, ಇಂದಿಗೂ ಬಂಡಾಯ ಸಾಹಿತ್ಯ ಅಂತರ್ಗತವಾಗಿ ಹರಿಯುತ್ತಿದೆ. ದೇಶದಲ್ಲಿಂದು ಎಡ-ಬಲ ಪಂಥದ ಹೆಸರಲ್ಲಿ ಬರೀ ವಾದ-ವಿವಾದಗಳು ನಡೆಯುತ್ತಿವೆ. ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಡ-ಬಲ ಪಂಥಾವರಣ ಸೃಷ್ಟಿಯಾಗಿದೆ. ಯಾವುದನ್ನು ಹೇಗೆ ಗ್ರಹಿಸಿಕೊಳ್ಳಬೇಕು ಎಂದು ತಿಳಿಯದೆ ಯುವಕರಲ್ಲಿ ಏಕಮುಖೀ ಸಂಸ್ಕೃತಿ ಭಾವೋದ್ರೇಕವಾಗಿ ಆವರಿಸಿಕೊಳ್ಳುತ್ತಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದ್ದು, ವಾದ-ವಿವಾದ ಬದಲಿಗೆ ಸಂವಾದ ನಡೆಯಬೇಕು.