Advertisement

ನ್ಯಾ|ದಿಲೀಪ್‌ ಬಾಬಾ ಸಾಹೇಬ್‌ ಭೋಸಲೆ ರಾಜೀನಾಮೆ

09:08 AM Jan 16, 2020 | Team Udayavani |

ಹೊಸದಿಲ್ಲಿ: ಹತ್ತು ತಿಂಗಳ ಹಿಂದೆ ಲೋಕಪಾಲ ಸದಸ್ಯರಾಗಿ ನೇಮಕಗೊಂಡ ನ್ಯಾ| ದಿಲೀಪ್‌ ಬಾಬಾಸಾಹೇಬ್‌ ಭೋಸಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನ್ಯಾಯಾಂಗ ವಿಭಾಗದ ಸದಸ್ಯರನ್ನಾಗಿ ಅವರನ್ನು ನೇಮಿಸಲಾಗಿತ್ತು. ವೈಯಕ್ತಿಕ ಕಾರಣಗಳಿಂದ ನನ್ನ ಸ್ಥಾನಕ್ಕೆ ಜ. 6ರಂದು ಹುದ್ದೆ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದೆ. ಜ. 12ರಿಂದ ಅದು ಜಾರಿಗೆ ಬರಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿರುವ ಅವರನ್ನು 2019ರ ಮಾ. 27ರಂದು ಲೋಕಪಾಲದ ನ್ಯಾಯಾಂಗ ವಿಭಾಗದ ಸದಸ್ಯರನ್ನಾಗಿ ನೇಮಿಸಿ, ಪ್ರಮಾಣ ವಚನ ಬೋಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next