Advertisement

ಅರ್ಜಿ ವಿಚಾರಣೆಗೆ ನಕಾರ: ನ್ಯಾ.ಜೆ.ಚಲಮೇಶ್ವರ್‌ರಿಂದ ಖಡಕ್‌ ನುಡಿ

07:30 AM Apr 13, 2018 | Team Udayavani |

ಹೊಸದಿಲ್ಲಿ: ನ್ಯಾಯಪೀಠಗಳಿಗೆ ಕೇಸುಗಳ ಹಂಚಿಕೆ ಪಾರದರ್ಶಕವಾಗಿರುವಂತೆ ಮಾರ್ಗಸೂಚಿ ರೂಪಿಸಿ ಎಂದು ಕೋರಿ ಕೇಂದ್ರದ ಮಾಜಿ ಸಚಿವ ಶಾಂತಿಭೂಷಣ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ನಿರಾಕರಿಸಿದ್ದಾರೆ. ನಾನು ಸದ್ಯದಲ್ಲೇ ನಿವೃತ್ತಿಯಾಗಲಿದ್ದು, ಮತ್ತೂಮ್ಮೆ ನನ್ನ ಆದೇಶಕ್ಕೆ 24 ಗಂಟೆಗಳೊಳಗೆ ತಡೆ ಉಂಟಾಗುವುದನ್ನು ನಾನು ಬಯಸುವುದಿಲ್ಲ ಎಂದು ನ್ಯಾ. ಚೆಲಮೇಶ್ವರ್‌ ತಿಳಿಸಿದ್ದಾರೆ.

Advertisement

ಕೋರ್ಟ್‌ನ ರಿಜಿಸ್ಟ್ರಿಯು ಅರ್ಜಿಯನ್ನು ಸ್ವೀಕರಿಸಿಲ್ಲ, ನೀವಾದರೂ ನನ್ನ ತಂದೆ ಶಾಂತಿಭೂಷಣ್‌ರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಿ ಎಂದು ವಕೀಲ ಪ್ರಶಾಂತ್‌ ಭೂಷಣ್‌ ಮನವಿ ಮಾಡಿಕೊಂಡರು. ಆದರೆ, ಅದಕ್ಕೆ ಒಪ್ಪದ ನ್ಯಾ.ಚೆಲಮೇಶ್ವರ್‌, “ನನ್ನ ಕಷ್ಟಗಗಳೇನೆಂದು ನಿಮಗೆ ಗೊತ್ತಿದೆ. ನಾನು ಏನನ್ನೋ ಕಸಿದುಕೊಳ್ಳಲು ಹೊರಟಿದ್ದೇನೆ ಎಂಬಂತೆ ಆರೋಪಿಸಲಾಗುತ್ತಿದೆ. ಇದು ದೇಶದ ಸಮಸ್ಯೆ. ದೇಶವೇ ಪರಿಹರಿಸಲಿ. ನಾನು ನೀಡುವ ಆದೇಶಕ್ಕೆ ಒಂದೇ ದಿನದೊಳಗೆ ತಡೆ ಬರುವುದನ್ನು ನಾನು ಬಯಸುವುದಿಲ್ಲ,’ ಎಂದರು. ಈ ಹಿಂದಿನ ಪ್ರಕರಣವೊಂದರಲ್ಲಿ ನ್ಯಾ.ಚೆಲಮೇಶ್ವರ್‌ ನೀಡಿದ್ದ ಆದೇಶವನ್ನು ಸಿಜೆಐ ದೀಪಕ್‌ ಮಿಶ್ರಾ ಅವರು ಒಂದೇ ದಿನದಲ್ಲಿ ರದ್ದು ಮಾಡಿದ್ದರು. ಇದನ್ನು ಉಲ್ಲೇಖೀಸಿ ನ್ಯಾ.ಚೆಲಮೇಶ್ವರ್‌ ಈ ಮಾತುಗಳನ್ನಾಡಿದ್ದಾರೆ. ಇವರು ವಿಚಾರಣೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಶಾಂತ್‌ ಭೂಷಣ್‌ ಅವರು ಸಿಜೆಐ ಮಿಶ್ರಾ ಬಳಿ ತೆರಳಿ, ಅರ್ಜಿ ವಿಚಾರಣೆ ನಡೆಸುವಂತೆ ಕೇಳಿಕೊಂಡರು. ಅದಕ್ಕೆ ಸಿಜೆಐ, ಪರಿಶೀಲಿಸೋಣ ಎಂದು ಉತ್ತರಿಸಿದರು.

ಸುಪ್ರೀಂ ಅಸ್ತಿತ್ವವೇ ಅಪಾಯದಲ್ಲಿ: ನ್ಯಾ.ಜೋಸೆಫ್: ಇನ್ನೊಂದೆಡೆ, ಇಬ್ಬರು ನ್ಯಾಯಮೂರ್ತಿಗಳ ನೇಮಕದಲ್ಲಿ ಆಗುತ್ತಿರುವ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿ ನ್ಯಾ. ಕುರಿಯನ್‌ ಜೋಸೆಫ್ ಅವರು ಸಿಜೆಐ ಮಿಶ್ರಾಗೆ ಪತ್ರ ಬರೆದಿದ್ದಾರೆ. ಸರಕಾರವು ನೇಮಕ ವಿಳಂಬ ಮಾಡುತ್ತಿರುವ ಕುರಿತು ಸುಪ್ರೀಂ ಕೋರ್ಟ್‌ ಪ್ರಶ್ನೆಯೆತ್ತದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಜತೆಗೆ, ಸರ್ವೋಚ್ಚ ನ್ಯಾಯಾಲಯದ ಅಸ್ತಿತ್ವವೇ ಅಪಾಯದಲ್ಲಿದೆ ಎಂದಿದ್ದಾರೆ ನ್ಯಾ.ಜೋಸೆಫ್.

Advertisement

Udayavani is now on Telegram. Click here to join our channel and stay updated with the latest news.

Next