Advertisement

ನನಗೆ ವಿದಾಯ ಕೂಟ ಬೇಡ

06:00 AM May 10, 2018 | |

ನವದೆಹಲಿ: ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಜಸ್ತಿ ಚಲಮೇಶ್ವರ್‌ ಜೂ.22ರಂದು ಸೇವಾ ನಿವೃತ್ತಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಬಾರ್‌ ಎಸೋಸಿಯೇಶನ್‌ ನಡೆಸುವ ಸಾಂಪ್ರದಾಯಿಕ ವಿದಾಯ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ನ್ಯಾ.ಚಲಮೇಶ್ವರ್‌ ಹೇಳಿದ್ದಾರೆ. ತನಗೆ ಇಂಥ ಕಾರ್ಯಕ್ರಮಗಳು ಇಷ್ಟವಾಗುವುದಿಲ್ಲ. ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಮತ್ತೂಂ ದು ಹೈಕೋರ್ಟ್‌ಗೆ ವರ್ಗಾವ ಣೆಯಾಗಿದ್ದ ಸಂದರ್ಭದಲ್ಲಿಯೂ ವಿದಾಯ ಕೂಟ ಆಯೋಜನೆ ಮಾಡಿ ರಲಿಲ್ಲ ಎಂದು ಹೇಳಿದ್ದಾರೆ. ಈ ಅಂಶ ವನ್ನು ಸುಪ್ರೀಂ ಕೋರ್ಟ್‌ ಬಾರ್‌ ಎಸೋ ಸಿಯೇಶನ್‌ ಅಧ್ಯಕ್ಷ ವಿಕಾಸ್‌ ಸಿಂಗ್‌ ಖಚಿತಪಡಿಸಿದ್ದಾರೆ. ಜತೆಗೆ ವಿದಾಯ ಕೂಟ ಕಾರ್ಯಕ್ರಮದ ಆಹ್ವಾನವನ್ನೂ ತಿರಸ್ಕರಿಸಿದರು ಎಂದು ಹೇಳಿದ್ದಾರೆ. 

Advertisement

ಎಸೋಸಿಯೇಶನ್‌ಗೆ ಟೀಕೆ: ಈ ನಡುವೆ ಸುಪ್ರೀಂಕೋರ್ಟ್‌ ಬಾರ್‌ ಎಸೋಸಿಯೇ ಶನ್‌ ವಿರುದ್ಧ ನ್ಯಾ.ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸುಪೀಕೋರ್ಟ್‌ ನ್ಯಾಯ ವಾದಿಗಳು ಎಲ್ಲರನ್ನೂ ಪ್ರಶ್ನೆ ಮಾಡುತ್ತಿದ್ದೀರಿ. ಇದರ ಜತೆಗೆ ಸಂಸ್ಥೆ (ಸುಪ್ರೀಂಕೋರ್ಟ್‌)ಯನ್ನೂ ಕೊಲ್ಲುತ್ತಿ ದ್ದೀರಿ. ಈ ಬಗ್ಗೆ ಮೌನವೇಕೆ?’ ಎಂದು ಎಸೋಸಿಯೇಶನ್‌ ಅಧ್ಯಕ್ಷ ವಿಕಾಸ್‌ ಸಿಂಗ್‌ರನ್ನು ನ್ಯಾ.ಮಿಶ್ರಾ ಪ್ರಶ್ನಿಸಿದ್ದಾರೆ. ಸುಪ್ರೀಂಕೋರ್ಟ್‌ ಉಳಿದರಷ್ಟೇ ನ್ಯಾಯ ವಾದಿ ಗಳಿಗೂ ಅವಕಾಶ ಎಂದು ನ್ಯಾ.ಮಿಶ್ರಾ ಹೇಳಿದ್ದಾರೆ,

Advertisement

Udayavani is now on Telegram. Click here to join our channel and stay updated with the latest news.

Next