Advertisement

Resignation: ಶಿಕ್ಷಕ ಹಗರಣ… ತನಿಖೆಗೆ ಆದೇಶಿಸಿದ್ದ ಜಡ್ಜ್ ನಾಳೆ ರಾಜೀನಾಮೆ?

09:47 AM Mar 04, 2024 | Team Udayavani |

ಕೋಲ್ಕತಾ: ಕಳೆದ ವರ್ಷ ಪಶ್ಚಿಮ ಬಂಗಾ­ಲದಲ್ಲಿ ನಡೆದಿದ್ದ ಶಿಕ್ಷಕ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್‌ ನ್ಯಾಯ­ಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

Advertisement

ಜನರ ಸೇವೆ ಮಾಡುವುದಕ್ಕಾಗಿ ಸಕ್ರಿಯ ರಾಜಕಾರಣಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿರುವ ಅವರು, ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ. “ಜನರ ಸೇವೆ ಮಾಡಲು ನಾನು ರಾಜಕೀಯಕ್ಕೆ ಸೇರಲು ಬಯಸುತ್ತೇನೆ. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದರ ಕುರಿತಾಗಿ ನಿರ್ಧಾರ ಕೈಗೊಂಡಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: Video: ಆಹಾರ ಅರಸಿ ಬಂದು ಮಡಕೆಯೊಳಗೆ ತಲೆ ಹಾಕಿ ಐದು ಗಂಟೆಗಳ ಕಾಲ ಒದ್ದಾಡಿದ ಚಿರತೆ…

Advertisement

Udayavani is now on Telegram. Click here to join our channel and stay updated with the latest news.

Next