Advertisement

ಮೆಂಟರ್ ಓಕೆ, ಆದರೆ ಶಾಸ್ತ್ರಿ ಜೊತೆ ಧೋನಿ ಜಗಳವಾಡದಿದ್ದರೆ ಸಾಕು: ಗಾವಸ್ಕರ್

12:31 PM Sep 09, 2021 | Team Udayavani |

ಮುಂಬೈ: ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಕೂಟಕ್ಕೆ ಭಾರತ ತಂಡ ಪ್ರಕಟವಾಗಿದೆ. ಹಲವಾರು ಅಚ್ಚರಿಗಳೊಂದಿಗೆ ತಂಡ ಪ್ರಕಟಿಸಲಾಗಿದೆ. ಅದಲ್ಲದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ.

Advertisement

ಈ ನೇಮಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ ಸುನೀಲ್ ಗಾವಸ್ಕರ್, “ಧೋನಿ ನಾಯಕತ್ವದಲ್ಲಿ ಭಾರತವು 2007 ಟಿ20 ಮತ್ತು 2011 ರ ಏಕದಿನ ವಿಶ್ವಕಪ್ ಗೆದ್ದಿದೆ. ಅವರ ಸೇರ್ಪಡೆ ಖಂಡಿತವಾಗಿಯೂ ಟೀಮ್ ಇಂಡಿಯಾಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.

2004 ರಲ್ಲಿ ಭಾರತ ತಂಡದ ಸಲಹೆಗಾರರಾಗಿ ತಾನು ನೇಮಕಗೊಂಡ ಉದಾಹರಣೆ ನೀಡಿದ ಗಾವಸ್ಕರ್, “ಆ ಸಮಯದಲ್ಲಿ ಜಾನ್ ರೈಟ್ (ಆಗಿನ ಮುಖ್ಯ ಕೋಚ್) ಸ್ವಲ್ಪ ನರ್ವಸ್ ಆಗಿದ್ದರು, ಬಹುಶಃ ನಾನು ಅವರ ಸ್ಥಾನವನ್ನು (ಕೋಚ್) ಪಡೆಯಲಿದ್ದೇನೆ ಎಂದು ಅವರು ಭಾವಿಸಿದ್ದರು. ಆದರೆ ಎಂಎಸ್ ಧೋನಿಗೆ ಕೋಚಿಂಗ್‌ನಲ್ಲಿ ಬಹಳ ಕಡಿಮೆ ಆಸಕ್ತಿ ಇದೆ ಎಂದು ರವಿ ಶಾಸ್ತ್ರಿ ತಿಳಿದಿದ್ದಾರೆ. ರವಿ ಶಾಸ್ತ್ರಿ ಮತ್ತು ಎಂಎಸ್ ಧೋನಿ ಹೊಂದಾಣಿಕೆ ಚೆನ್ನಾಗಿದೆ, ಅದರಿಂದ ಭಾರತಕ್ಕೆ ಹೆಚ್ಚಿನ ಲಾಭವಾಗಲಿದೆ ” ಎಂದರು.

ಇದನ್ನೂ ಓದಿ:ಟೀಂ ಇಂಡಿಯಾ ಮೆಂಟರ್ ಆಗಿ ಧೋನಿ ಆಯ್ಕೆಯಾಗಿದ್ದು ಹೇಗೆ? ಏನಿದು ಬಿಸಿಸಿಐ ತಂತ್ರ

ಧೋನಿಯ ನೇಮಕ ತಂಡಕ್ಕೆ ದೊಡ್ಡ ಬೂಸ್ಟರ್ ಆಗಿದೆ. ಧೋನಿ ಆಡುವ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರಷ್ಟು ಅಪಾಯಕಾರಿ ಆಟಗಾರನಿರಲಿಲ್ಲ. ಅವರ ಅನುಭವ ಖಂಡಿತವಾಗಿಯೂ ತಂಡಕ್ಕೆ ನೆರವಾಗುತ್ತದೆ. ಆದರೆ ಧೋನಿ-ಶಾಸ್ತ್ರಿ ನಡುವೆ ಯಾವುದೇ ಮನಸ್ಥಾಪ ಬರದಿದ್ದರೆ ಸಾಕು. ಒಂದು ವೇಳೆ ಉತ್ತಮವಾಗಿ ನಡೆದರೆ ಅದು ಭಾರತಕ್ಕೆ ಅತೀ ದೊಡ್ಡ ಪ್ರಯೋಜನವನ್ನು ತಂದು ಕೊಡಲಿದೆ ಎಂದರು ಗಾವಸ್ಕರ್ ಹೇಳಿದರು.

Advertisement

ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್‌ ಚಹರ್‌, ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ.

ಹೆಚ್ಚುವರಿ ಆಟಗಾರರು: ಶಾರ್ದೂಲ್‌ ಠಾಕೂರ್‌, ಶ್ರೇಯಸ್‌ ಐಯ್ಯರ್‌, ದೀಪಕ್‌ ಚಹರ್‌

Advertisement

Udayavani is now on Telegram. Click here to join our channel and stay updated with the latest news.

Next