Advertisement
ಫೇಸ್‌ಬುಕ್- ವಾಟ್ಸಾéಪ್ ಇಲ್ಲದ ಕಾಲದಲ್ಲೇ ಆ ಹಾಡು ವೈರಲ್ ಆಗೊØàಗಿತ್ತು; “ಹೇಳುವುದು ಒಂದು ಮಾಡುವುದು ಇನ್ನೊಂದು’. ಯೆಸ್… ಅದೇ ಸ್ವತಃ ಅಣ್ಣಾವ್ರು “ಜ್ವಾಲಾಮುಖೀ’ ಚಿತ್ರದಲ್ಲಿ ಹಾಡಿದ ಹಾಡೇಕೋ, ಇಂದು ಮನದಾಳದಲ್ಲಿ ಮತ್ತೆ ಮತ್ತೆ ಪ್ಲೇ ಆಗುತಿದೆ. ಇದಕ್ಕೆ ಕಾರಣ ಖಂಡಿತಾ ಯಾವ ಹೆಣ್ಣೂ ಅಲ್ಲ, ರಾಜಕಾರಣಿಯಂತೂ ಅಲ್ಲವೇ ಅಲ್ಲ. ನಮ್ಮ ಸುತ್ತಮುತ್ತಲಿನ ಟೈಂ ಪಾಸ್ ಗೆಳೆಯರಷ್ಟೇ!
Related Articles
Advertisement
ಹಾಗೆ ಆತ ಮಾಡುತ್ತಿದ್ದುದ್ದು ಅದೊಂದೇ ದಿನವಲ್ಲ. ಊಟ ಬಿಟ್ಟು ಏಳುವುದು ಆತನಿಗೆ ರೂಢಿಯಾಗಿ ಹೋಗಿತ್ತು. ಕಳುಹಿಸಿದ ಮೆಸೇಜಿಗೂ, ಆತನ ವರ್ತನೆಗೂ ಸಂಬಂಧವೇ ಇಲ್ಲವೆಂದು ಅರಿತು ನಾನು ಸುಮ್ಮನಾದೆ.ಆತ ಮಾತ್ರ ಆರೋಪಿ ಅಂತ ನಾನು ಇಲ್ಲಿ ಸಾಬೀತು ಮಾಡಲು ಹೋಗುತ್ತಿಲ್ಲ. ಇದು ಬರಿಯ ಆಹಾರದ ವಿಷಯವೂ ಅಲ್ಲ. ವಿಶ್ವ ಜಲ ಸಂರಕ್ಷಣೆ ದಿನ ಆಚರಿಸುವ ಹೊತ್ತಿನಲ್ಲೂ ಇಂಥದ್ದೇ ಪ್ರಮಾದಗಳು ನನ್ನ ಕಣ್ಣಿಗೆ ಕಂಡಿವೆ. ಜಲ ಸಂರಕ್ಷಣೆ ಬಗ್ಗೆ ಮಾತಾಡುವ ನಾವು, ಪ್ರತಿದಿನ ಸ್ನಾನ ಮಾಡುವಾಗ, ಕೈಕಾಲು ತೊಳೆಯುವಾಗ, ಗೊತ್ತಿದ್ದೂ ವ್ಯರ್ಥ ಮಾಡುವ ನೀರೆಷ್ಟು? ಮೂಲೆಯ ಕೊಳಾಯಿಯಿಂದ “ಅಯ್ಯೋ ನನ್ನ ಕಾಪಾಡಿ’ ಎಂದು ಅಂಗಲಾಚುವ ಗಂಗಾ ಮಾತೆಗಷ್ಟೇ ಈ ಸತ್ಯ ಗೊತ್ತು. ಹಲ್ಲುಜ್ಜುವಾಗಲೂ ನಲ್ಲಿಯ ನೀರನ್ನು ನಿಲ್ಲಿಸದೇ, 4ಜಿ ವೇಗದಲ್ಲಿ ಅದನ್ನು ಹರಿಯಲುಬಿಟ್ಟು, ನಂತರ ಬಂದು ಮೊಬೈಲಿನಲ್ಲಿ “ನೀರನ್ನು ಉಳಿಸಿ’ ಎಂದು ಹೇಳುವುದರಲ್ಲಿ ಅರ್ಥವೇನು? ಮತ್ತೆ ಕೆಲವರಿದ್ದಾರೆ. ಜನವರಿ- ಮೇ ತಿಂಗಳಲ್ಲಿ ಅವರು ಎಚ್ಚರಗೊಳ್ಳುವರು. “ಬೇಸಿಗೆ ಶುರುವಾಗಿದೆ. ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಎಲ್ಲೂ ನೀರು ಸಿಗುತ್ತಿಲ್ಲ. ನಿಮ್ಮ ತಾರಸಿಯ ಮೇಲೆ ಒಂದು ಬೌಲ್‌ನಲ್ಲಿ ನೀರನ್ನು ಇಟ್ಟು, ಪಕ್ಷಿಗಳ ಜೀವ ಕಾಪಾಡಿ’ ಎನ್ನುವ ಅವರ ಕಳಕಳಿಗೆ ಒಂದು ಸಲಾಂ. ಯಾರೋ ಹುಟ್ಟುಹಾಕಿದ ಈ ಮೆಸೇಜನ್ನು ಪಟಕ್ಕಂತ ಕಣ್ಮುಚ್ಚಿಕೊಂಡು ದಾಟಿಸುವುದಷ್ಟೇ ಇವರ ಕೆಲಸ. ಅದನ್ನು ಅಳವಡಿಸಿಕೊಳ್ಳುವ ಗೋಜಿಗೆ ಇವರು ಹೋಗಿದ್ದನ್ನು ನಾನು ಯಾವತ್ತೂ ಕಂಡಿಲ್ಲ. ಅವರ ಮನೆಯ ತಾರಸಿಯಲ್ಲಿ ನೂರಾರು ಹಕ್ಕಿಗಳು ಬಾಯಾರಿದ ಗಂಟಲಿನಲ್ಲಿ “ಗುಟುರ್ ಗುಟುರ್…’ ಎಂದರೂ ಇವರು ಒಂದು ಗುಟುಕೂ ನೀರನ್ನು ಮೇಲಿಟ್ಟಿರುವುದಿಲ್ಲ. ಇಂದು ಸೋಷಿಯಲ್ ಮೀಡಿಯಾದಂಥ ಪ್ರಬಲ ಮಾರ್ಗ ನಮ್ಮ ಕಣ್ಮುಂದಿದೆ. ಅದರಲ್ಲಿ ಸುಮ್ಮನೆ ಕಾಲಹರಣ ಮಾಡಲು, ಲೈಕ್ ಗಿಟ್ಟಿಸಿಕೊಳ್ಳಲು ಪೋಸ್ಟ್‌ಗಳನ್ನು ಹಾಕುವುದನ್ನು ಬಿಟ್ಟು, ಸಾಮಾಜಿಕ ಕಳಕಳಿ ಇಟ್ಟುಕೊಳ್ಳಬೇಕಿದೆ. ಇನ್ನೊಬ್ಬರಿಗೆ ಹೇಳುವ ಮೊದಲು ನಾವೇ ಅದನ್ನು ಆಚರಿಸಿ, ಸಮಾಜಕ್ಕೆ ಮಾದರಿಯಾದರೆ, ಇಂಥ ಜಾಲತಾಣಗಳ ಉದ್ದೇಶವೂ ಸಾರ್ಥಕತೆ ಪಡೆದುಕೊಳ್ಳುತ್ತದೆ.
– – –
ಅಲರ್ಟ್ ಆಗಿ…
– ಆಚರಣೆ ಎನ್ನುವುದು ಬೆರಳ ತುದಿಯಲ್ಲಿ ಸಂದೇಶ ಟೈಪಿಸಿದರಷ್ಟೇ ಮುಗಿದು ಹೋಗುವಂಥದ್ದಲ್ಲ.
– ನಿಮ್ಮ ವಾಟ್ಸಾéಪ್‌ಗೆ ಅಥವಾ ಫೇಸ್‌ಬುಕ್‌ನಲ್ಲಿ ಯಾರಾದರೂ ಇಂಥ ಸಂದೇಶ ಹಾಕಿದರೆ, ಕೂಡಲೇ ಅವರನ್ನು ಪ್ರಶ್ನಿಸಿ: “ನೀವು ಈ ಕೆಲಸ ಮಾಡಿದ್ದೀರಾ?’ ಅಂತ.
– “ಇಲ್ಲ’ ಎಂಬ ಉತ್ತರ ಅವರದ್ದಾದರೆ, ಮೊದಲು ಅಳವಡಿಸಿಕೊಳ್ಳಲು ಸೂಚಿಸಿ.
– ಇಂಥ ಸಂದೇಶ ಹುಟ್ಟುಹಾಕುವವರು, ಮೊದಲು ಅದನ್ನು ಅನುಸರಿಸಿ, ನೈತಿಕತೆಯನ್ನು ಉಳಿಸಿಕೊಳ್ಳಬೇಕು.
– ಈ ಸಂದೇಶಗಳು ಇನ್ನೊಬ್ಬರ ಕಣ್ತೆರೆಸುವುದು ನಿಜ. ಪ್ರತಿಯೊಬ್ಬರು ಇದನ್ನು ಆಚರಿಸಿದರಷ್ಟೇ ಇದಕ್ಕೆ ಒಂದು ಅರ್ಥ. – ಮಧುಶೇಖರ್ ಸಿ.