Advertisement

ವಿಶ್ವಗುರುವಾಗಲು ಕೆಲವೇ ಹೆಜ್ಜೆ; ವಿವೇಕಾನಂದರ ಯುವ ಕಲ್ಪನೆಗೆ ನೀರೆರೆಯೋಣ

04:19 PM Aug 16, 2020 | Team Udayavani |

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ವರ್ಷಗಳೇ ಸಂದು ಹೋದವು.

Advertisement

ಆದರೆ ಸ್ವಾತಂತ್ರ್ಯದ ಪರಿಕಲ್ಪನೆ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.

ಕೇವಲ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆ ಮಾತ್ರ. ಭ್ರಷ್ಟಾಚಾರ, ಮೋಸ, ವಂಚನೆಯಂತಹ ಸಮಾಜಘಾತಕ ಕೆಲಸಗಳು ತಾಂಡವಾಡುತ್ತಿವೆ.

ಇವುಗಳನ್ನು ಸಂಪೂರ್ಣವಾಗಿ ಹೊಡೆದೋಡಿಸಿದಾಗ ಮಾತ್ರ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಸಾಧ್ಯ.

ಗಾಂಧೀಜಿಯವರ ಕನಸನ್ನು ನನಸಾಗಿಸುವಲ್ಲಿ, ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ಯುವಜನತೆಯ ಪಾತ್ರ ಬಹುಮುಖ್ಯವಾದದ್ದು.

Advertisement

ಕೇವಲ ನಮ್ಮ ಕುಟುಂಬದ ಹೆಣ್ಣುಮಕ್ಕಳಲ್ಲದೆ ಇಡೀ ದೇಶವೇ ನಮ್ಮ ಕುಟುಂಬ ಎಂದು ಭಾವಿಸಿ ಪ್ರತಿಯೊಬ್ಬ ಹೆಣ್ಣುಮಕ್ಕಳನ್ನು ಸಂರಕ್ಷಿಸಿದಾಗ ಮಾತ್ರ ನಮ್ಮ ಭಾರತ ಅಭಿವೃದ್ಧಿಯ ಪಥದತ್ತ ಸಾಗುವಲ್ಲಿ ಯಾವುದೇ ಸಂದೇಹವಿಲ್ಲ. ಜತೆಗೆ ನಮ್ಮಲ್ಲಿರುವ ಬಡತನ, ಅನಕ್ಷರತೆ, ನಿರುದ್ಯೋಗ, ಇವೆಲ್ಲವುಗಳನ್ನು ಸಂಪೂರ್ಣವಾಗಿ ಹೊಡೆದೋಡಿಸಿ ನಮ್ಮ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿದರೆ ಭಾರತದ ಭವಿಷ್ಯ ಬದಲಾಗುತ್ತದೆ.

ಚುನಾವಣೆಯ ಮಹತ್ವ ತಿಳಿಯುವುದು ತುಂಬಾ ಮುಖ್ಯವಾಗಿದೆ. ಪಕ್ಷವಲ್ಲ ಜನನಾಯಕ ಮುಖ್ಯ ಎಂಬುದು ಜನರಿಗೆ ಅರ್ಥವಾಗಬೇಕಿದೆ. ಈ ರೀತಿಯ ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ತಿಳಿಸಿದಾಗ ಜನರಲ್ಲಿರುವ ಮೂಢನಂಬಿಕೆ ಹೋಗಿ ಸದೃಢ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಸದೃಢ‌ವಾದ ರಾಷ್ಟ್ರ ಕಟ್ಟಬೇಕಾದರೆ ಯುವಜನತೆಯ ಪಾತ್ರ ಬಹುಮುಖ್ಯ. ಇಂದಿನ ಯುವಕರು ಸಂವಿಧಾನದ ನಿಯಮಗಳಿಗೆ ಬದ್ಧರಾಗಿ ಅದನ್ನು ಕಟ್ಟು ನಿಟ್ಟಾಗಿ ಪಾಲಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಲಭಿಸುವುದು. ಜಗತ್ತಿನ ವಿವಿಧ ರಾಷ್ಟ್ರಗಳು ಭಾರತ ಬಲಿಷ್ಠ ರಾಷ್ಟ್ರ, ಸದೃಢ ರಾಷ್ಟ್ರ, ಶಾಂತಿಯುತ ರಾಷ್ಟ್ರ, ಸಂಸ್ಕಾರವಂತ ರಾಷ್ಟ್ರ,ಎಂದು ಒಪ್ಪಿಕೊಂಡು ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಅನುಸರಿಸಿದಾಗ ಮಾತ್ರ ನಮಗೆ ನಾನೊಬ್ಬ ಭಾರತೀಯ ಎಂದು ಎದೆ ತಟ್ಟಿ ಹೇಳಬಹುದು. ಆ ಸಂತೋಷ ನಮಗೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.

ವಿವೇಕಾನಂದರ ಕಬ್ಬಿಣದಂತಹ ಮಾಂಸಖಂಡಗಳುಳ್ಳ, ಉಕ್ಕಿನಂತಹ ನರಮಂಡಲಗಳುಳ್ಳ, ಮಿಂಚಿನಂತಹ ಬುದ್ಧಿಶಕ್ತಿ ಉಳ್ಳವರು ಮಾತ್ರ ಸುಂದರ ಸಶಕ್ತ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯಎಂಬ ಮಾತಿನಂತೆ ಯುವ ಜನತೆ ಬದುಕಬೇಕು. ಸುಂದರ ರಾಷ್ಟ್ರ ನಿರ್ಮಿಸಿದಾಗ ಮಾತ್ರ ತಾಯಿ ಭಾರತಿ ವಿಶ್ವಗುರು ಆಗಲು ಸಾಧ್ಯ. ಹಾಗಾಗಿ ನಾವೆಲ್ಲರೂ ಇಂದಿನಿಂದಲೇ ದೇಶಕ್ಕೆ ಮಾರಕವಾಗುವ ಕೆಲಸಗಳನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಪೂರಕವಾಗುವ ಅಂಶಗಳನ್ನು ಅಳವಡಿಸಿಕೊಂಡಾಗ ಮಾತ್ರ 2025 ರೊಳಗೆ ತಾಯಿ ಭಾರತಿ ಜಗದ್ಗುರು ಆಗುತ್ತಾಳೆ; ಭಾರತ ವಿಶ್ವ ಗುರು ಎಂದು ಕರೆಸಿಕೊಳ್ಳುತ್ತದೆ.

ಅಂಬರೀಶ್‌ ನಾಯ್ಕರೋಡಿ, ಎಸ್‌.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ

 

Advertisement

Udayavani is now on Telegram. Click here to join our channel and stay updated with the latest news.

Next