Advertisement

ಸುಮ್ಮನೆ ಒಂದಷ್ಟು ಯಹೂದಿ ಪ್ರಸಂಗಗಳು

06:00 AM Jun 10, 2018 | |

ತಂದೆ ಮತ್ತು ಮಗ
ಹಿರಿಯ ಯಹೂದಿಯೊಬ್ಬ ಕಾಯಿಲೆ ಬಿದ್ದ. ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಆ ವೃದ್ಧನ ಮಗನೇ ಊರಿನ ಹೆಸರಾಂತ ಸರ್ಜನ್‌. ನಾನು ಮಗನ ಕೈಯಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ ಎಂದ ಹಿರಿಯ. ಅದಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು. ಶಸ್ತ್ರಚಿಕಿತ್ಸೆ ಇನ್ನೇನು ಪ್ರಾರಂಭವಾಗಬೇಕು ಅನ್ನವಷ್ಟರಲ್ಲಿ ವೃದ್ಧ ತನ್ನ ಮುಖಕ್ಕೆ ಕಟ್ಟಿದ್ದ ಮಾಸ್ಕ್ ತೆಗೆದ.
“”ಏನು?” ಮಗನ ಪ್ರಶ್ನೆ.
“”ಒಂದು ವಿಷಯ ಹೇಳಬೇಕಾಗಿದೆ” ತಂದೆಯ ಉತ್ತರ.
“”ಹೇಳಿ”
“”ಏನಿಲ್ಲ. ನರ್ವಸ್‌ ಆಗಬೇಡ. ಸಾಧ್ಯವಾದಷ್ಟು ಚೆನ್ನಾಗಿ ನಿನ್ನ ಕೆಲಸ ಮಾಡು. ಈ ಆಪರೇಶನ್‌ನಲ್ಲಿ ಏನಾದರೂ ಹೆಚ್ಚಾಕಡಿಮೆ ಆದರೆ, ನಿನ್ನ ತಾಯಿ ನಿನ್ನ ಮನೆಗೆ ಬಂದು ಇರುತ್ತಾಳೆ. ಅತ್ತೆ-ಸೊಸೆ ಜೊತೆ ನೀನು ದಿನ ಕಳೆಯಬೇಕಾಗುತ್ತೆ ಎಂಬುದನ್ನು ಜ್ಞಾಪಿಸಬೇಕು ಅನ್ನಿಸಿತು ಅಷ್ಟೆ” ಎಂದು ಹೇಳಿ ವೃದ್ಧ ಮತ್ತೆ ಮಾಸ್ಕ್ ಕಟ್ಟಿಕೊಂಡು ಮಲಗಿದ.

Advertisement

ಮೂರು ಕನ್ನಡಕಗಳು
ಅರುವತ್ತೆçದು ದಾಟಿದ ಜುಡಿತ್‌ ಮತ್ತು ಲಿಯಾ ಉದ್ಯಾನದ ಕಲ್ಲುಬೆಂಚಿನಲ್ಲಿ ಕೂತು ಲೋಕಾಭಿರಾಮ ಮಾತಾಡುತ್ತಿದ್ದರು. “”ಅಂದ ಹಾಗೆ ನಿನ್ನ ಕನ್ನಡಕ ಬಹಳ ಚೆನ್ನಾಗಿದೆ ಕಣೆ ಲಿಯಾ” ಎಂದಳು ಜುಡಿತ್‌ ಮೆಚ್ಚುಗೆ ಸೂಚಿಸುತ್ತ.
“”ಇದು ನನ್ನ ಮೂರನೆಯ ಕನ್ನಡಕ. ಒಂದು ವಾರದ ಹಿಂದೆಯಷ್ಟೇ ಖರೀದಿಸಿ ತಂದೆ” ಎಂದಳು ಲಿಯಾ. 
“”ಮೂರನೆಯ¨ªಾ? ಅದ್ಯಾಕೆ ಅಷ್ಟೊಂದು ಕನ್ನಡಕ ಕೊಂಡು ಕೊಳ್ತೀಯೇ?” ಎಂದು ವಿಚಾರಿಸಿದಳು ಜುಡಿತ್‌.
“”ಏನು ಮಾಡಲಿ! ನನಗೆ ದೂರದ ವಸ್ತುಗಳು ಕಾಣೋಲ್ಲ. ಆಗ ಮೊದಲ ಕನ್ನಡಕ ಹಾಕ್ತೇನೆ. ಹತ್ತಿರದ ವಸ್ತುಗಳೂ ಕಾಣೋಲ್ಲ. ಅವುಗಳನ್ನು ನೋಡಬೇಕಾದರೆ ಎರಡನೆಯ ಕನ್ನಡಕ ಹಾಕ್ತೇನೆ. ಇವೆರಡೂ ಕಳೆದುಹೋಗಿ ಹುಡುಕಬೇಕು ಅಂದಾಗ ಈ ಮೂರನೇ ಕನ್ನಡಕ ಹಾಕಬೇಕಾಗುತ್ತೆ” ವಿವರಿಸಿದಳು ಲಿಯಾ.

ತಪ್ಪಿಗೆ ತಕ್ಕ ಶಿಕ್ಷೆ
“”ನನ್ನ ಗಂಡ ಒಬ್ಬ ನಾಲಾಯಕ್‌ ಮನುಷ್ಯ. ಅವನನ್ನು ಕಂಡಾಗೆಲ್ಲ ನನಗೆ ಕೋಪ ಉಕ್ಕೇರುತ್ತದೆ. ಅವನ ಜೊತೆ ಜಗಳಾಡಬೇಕು ಅನ್ನಿಸುತ್ತದೆ. ಕಳೆದ ಮೂವತ್ತು ವರ್ಷಗಳಲ್ಲಿ ಒಂದಾದರೂ ವಿಷಯದಲ್ಲಿ ನಮ್ಮಿಬ್ಬರ ನಡುವೆ ಒಮ್ಮತ ಮೂಡಿಲ್ಲ. ಜಗಳಾಡದ ದಿನವೇ ಇಲ್ಲ” ಜುಡಿತ್‌ ತನ್ನ ಸಂಸಾರದ ಬಗ್ಗೆ ಹೇಳಿಕೊಂಡಳು. ಹನ್ನಾ ಆ ಮಾತುಗಳನ್ನು ಕೇಳುತ್ತ “ತುc ತುc’ ಎಂದಳು. “”ಅಷ್ಟಾದರೂ ನೀವು ಆತನಿಗೆ ವಿಚ್ಛೇದನ ಕೊಟ್ಟಿಲ್ವಾ?” ಎಂದು ವಿಚಾರಿಸಿದಳು.
ಜುಡಿತ್‌ ಕಣ್ಣರಳಿಸಿ ಕೇಳಿದಳು, “”ಏನು, ಅವನ ಪರವಾಗಿ ಮಾತಾಡ್ತಾ ಇದ್ದೀಯೇನೆ ಹನ್ನಾ? ಮಾಡಿರುವ ತಪ್ಪಿಗೆ ಅವನು ಶಿಕ್ಷೆ ಅನುಭವಿಸಬೇಕು ಅಂತ ನಿನಗೆ ಅನ್ನಿಸೋದಿಲ್ವಾ?”

ನಾಟ್ಯ ಪ್ರತಿಭೆ
ಟಿವಿ ಕಾರ್ಯಕ್ರಮದಲ್ಲಿ ಅದ್ಭುತವಾದ ನೃತ್ಯ ಪ್ರದರ್ಶಿಸಿದ ಆತನನ್ನು ಜಡ್ಜ್ ರಾಚೆಲ್‌ ಕೇಳಿದಳು: ಡೇವಿಡ್‌! ನೀನು ಇಷ್ಟು ಚೆನ್ನಾಗಿ ನೃತ್ಯ ಮಾಡೋದನ್ನು ಹೇಗೆ ಕಲಿತೆ?
“”ನನಗೆ ಮೂರು ಜನ ಅಣ್ಣತಮ್ಮಂದಿರು” ಎಂದ ಡೇವಿಡ್‌.
“”ಅಂದ್ರೆ? ಅವರು ನಿನಗೆ ನೃತ್ಯ ಕಲಿಸಿದರಾ?”
“”ಹೂn! ನಾನು ತುರ್ತು ಪರಿಸ್ಥಿತಿಯಲ್ಲಿದ್ದರೆ ಟಾಯ್ಲೆಟ್ಟಲ್ಲಿದ್ದು ಸತಾಯಿಸ್ತಿದ್ದರು”

ಅದೃಷ್ಟವಂತ
“”ರಬೈ ಅವರೇ… ಸ್ಯಾಮ್‌ ಮತ್ತು ಜೋಯ್‌, ಇಬ್ರೂ ನನ್ನನ್ನು ಪ್ರೀತಿಸ್ತಿದಾರೆ. ಇವರಲ್ಲಿ ಅದೃಷ್ಟವಂತ ಯಾರಾಗ್ತಾರೆ ಹೇಳ್ತೀರಾ?” ಕ್ಯಾತಿ ಮುಖ ಅರಳಿಸಿ ಕೇಳಿದಳು.
ಅವರ ಕುಂಡಲಿಗಳನ್ನು ಪರೀಕ್ಷಿಸಿದ ರಬೈ ಹೇಳಿದರು, “”ಜೋಯ್‌ ನಿನ್ನನ್ನು ಮದುವೆ ಆಗ್ತಾನೆ. ಸ್ಯಾಮ್‌ ಅದೃಷ್ಟವಂತನಾಗ್ತಾನೆ”

Advertisement

ಬ್ರಹ್ಮಪುತ್ರ

Advertisement

Udayavani is now on Telegram. Click here to join our channel and stay updated with the latest news.

Next