Advertisement

ಪಾರ್ಸಿ ವಿಚ್ಛೇದನ ಕೇಸ್‌ ವಿಚಾರಣೆ ವಿಧಾನ ಬದಲು?

09:34 AM Nov 25, 2017 | Team Udayavani |

ಹೊಸದಿಲ್ಲಿ: ತ್ರಿವಳಿ ತಲಾಖ್‌ ನಂತರ ಇದೀಗ ಪಾರ್ಸಿ ವಿಚ್ಛೇದನ ಕಾನೂನಿಗೂ ಬದಲಾವಣೆಯ ಕಾಲ ಬಂದಿದೆ. ಪಾರ್ಸಿ ವೈವಾಹಿಕ ಮತ್ತು ವಿಚ್ಛೇದನ ಕಾನೂನು 1936 ಅಡಿ ಜ್ಯೂರಿಗಳು ಪ್ರಕರಣದ ವಿಚಾರಣೆ ನಡೆಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದ್ದು, ಇದರಲ್ಲಿನ ಪಾರದರ್ಶಕತೆ ಪ್ರಶ್ನಿಸಿ ಪಾರ್ಸಿ ಮಹಿಳೆಯೊಬ್ಬಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ಸಂಬಂಧ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸುವಂತೆ ನ್ಯಾಯಪೀಠ ಸೂಚಿಸಿದೆ.

Advertisement

 1959ರಲ್ಲಿ ನಾನಾವತಿ ಪ್ರಕರಣದ ನಂತರ ಜ್ಯೂರಿ ಮೂಲಕ ನ್ಯಾಯ ದಾನ ವ್ಯವಸ್ಥೆ ಕೈಬಿಡಲಾಗಿದ್ದು, ಪಾರ್ಸಿ ವಿಚ್ಛೇದನ ಪ್ರಕರಣ ಹೊರತುಪಡಿಸಿ ದೇಶದ ಯಾವುದೇ ಪ್ರಕರಣಗಳೂ ಈ ವ್ಯವಸ್ಥೆಯ ಮೂಲಕ ವಿಚಾರಣೆ ಮಾಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next