ವಾಷಿಂಗ್ಟನ್: ಗುರು ಅಂಗಳದಲ್ಲಿಯೂ ನೀರಿದೆ! ಅಚ್ಚರಿಯಾದರೂ ಇದು ಸತ್ಯ. ವರ್ಷದ 350 ದಿನವೂ ಸೂರ್ಯನ ಸುತ್ತ ಸುತ್ತುವ, ಐದನೇ ಮತ್ತು ಸೌರಮಂಡಲದ ಅತಿದೊಡ್ಡ ಗ್ರಹವಾದ ಗುರುವಿನ ಒಡಲಲ್ಲಿ ನೀರಿದೆ ಎನ್ನುವುದನ್ನು ನಾಸಾ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆಮ್ಲಜನಕದಿಂದ ಕೂಡಿದ ಅನಿಲ, ಕಾರ್ಬನ್ ಮೊನೋಕ್ಸೆ„ಡ್‌ನ ಒತ್ತಡದಲ್ಲಿ ನೀರು ಹೊಂದಿದ್ದು, ಸೂರ್ಯನಲ್ಲಿರುವ ಆಮ್ಲಜನಕಕ್ಕಿಂತ ಎರಡರಿಂದ ಒಂಬತ್ತು ಪಟ್ಟು ಹೆಚ್ಚು ಗುರುವಿನಲ್ಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಮಾಹಿತಿ ಆಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಅಷ್ಟೇ ಅಲ್ಲ, ಗುರು ಗ್ರಹದ ವಿಶೇಷತೆ ಎಂದೇ ಹೇಳಲಾಗುವ ಗ್ರೇಟ್ ರೆಡ್ ಸ್ಪಾಟ್ (ಬೃಹತ್ ಕೆಂಪು ಚುಕ್ಕೆ) ತೇವಭರಿತ ಮೋಡಗಳಿಂದ ಮುಚ್ಚಲ್ಪಟ್ಟಿರುತ್ತದೆ. ಆದರೆ ನೀರಿನ ಪ್ರಮಾಣ ಹೆಚ್ಚಿಲ್ಲದಿದ್ದರೂ, ಆಳದಲ್ಲಿರುವುದು ಗೋಚರಿಸುತ್ತದೆ ಎಂದು ನಾಸಾದ ಗೊಡ್ಡಾರ್ಡ್ ಫ್ಲೈಟ್ ಸೆಂಟರ್‌ನ ವಿಜ್ಞಾನಿ ಗೊರ್ಡನ್ ಎಲ್. ಜಾರ್ಕರ್ ಹೇಳಿದ್ದಾರೆ.